ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5 ಲಕ್ಷ ರುಪಾಯಿ ಪರಿಹಾರ ನೀಡಿ ಅಮಿತ್ ಶಾ ನೀತಿ ಸಂಹಿತೆ ಉಲ್ಲಂಘನೆ

By ಯಶಸ್ವಿನಿ ಎಂ.ಕೆ
|
Google Oneindia Kannada News

Recommended Video

ಮೈಸೂರಿನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಅಮಿತ್ ಶಾ | Oneindia Kannada

ಮೈಸೂರು, ಮಾರ್ಚ್ 30 : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ಕಾರ್ಯಕರ್ತ ಮೈಸೂರಿನ ಕ್ಯಾತಮಾರನಹಳ್ಳಿ ರಾಜು ನಿವಾಸಕ್ಕೆ ಭೇಟಿ ನೀಡಿದ ವೇಳೆ ಅಮಿತ್ ಶಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿ, ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಜು ಕುಟುಂಬಕ್ಕೆ 5 ಲಕ್ಷ ರುಪಾಯಿ ಪರಿಹಾರ ನೀಡಿ, ಸದ್ಯ ಪೇಚಿಗೆ ಸಿಲುಕಿದ್ದಾರೆ. 5 ಲಕ್ಷ ರುಪಾಯಿ ಪರಿಹಾರ ಕೊಟ್ಟಿದ್ದಾಗಿ ರಾಜು ಅವರ ಅತ್ತಿಗೆ‌ ಕುಮಾರಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅಮಿತ್ ಶಾ ನೇರವಾಗಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ಬಿಜೆಪಿ ದಲಿತ ಸಂವಾದದಲ್ಲಿ ಪ್ರತಿಭಟನೆ, ಅಮಿತ್ ಶಾಗೆ ಧಿಕ್ಕಾರಬಿಜೆಪಿ ದಲಿತ ಸಂವಾದದಲ್ಲಿ ಪ್ರತಿಭಟನೆ, ಅಮಿತ್ ಶಾಗೆ ಧಿಕ್ಕಾರ

Election code of conduct violation by Amit Shah in Mysuru

ರಾಜು ಅವರ ಅತ್ತಿಗೆಗೆ ಮಾದ್ಯಮಗಳ ಮುಂದೆ ಬಿಜೆಪಿ ಕಾರ್ಯಕರ್ತರು ಹೇಳಿ ಕೊಟ್ಟ ಹಾಗೆ ಹೇಳಿಕೆ ನೀಡುವಂತೆ ಸ್ಥಳೀಯ ಬಿಜೆಪಿ ನಾಯಕರ ತಾಕೀತು ಮಾಡಿದ್ದಾರೆ. ಮಾದ್ಯಮಗಳು ಪ್ರಶ್ನೆ ಮಾಡುವಾಗ‌ ಬಿಜೆಪಿ ಸ್ಥಳೀಯ ‌ಮುಖಂಡರು ಮಧ್ಯಪ್ರವೇಶ ಮಾಡುತ್ತಿದ್ದರು. ಆದರೂ ಅವರ ಎದುರೇ 5 ಲಕ್ಷ ಹಣ ಕೊಟ್ಟಿರುವುದಾಗಿ ರಾಜು ಅತ್ತಿಗೆ ಕುಮಾರಿ ಒಪ್ಪಿಕೊಂಡರು. ಸದ್ಯ ಹಣ ಕೊಟ್ಟು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪೇಚಿಗೆ ಸಿಲುಕಿರುವುದಂತೂ ಸತ್ಯ.

English summary
Karnataka Assembly Elections 2018: BJP national president Amit Shah issued 5 lakh rupees to deceased Raju family in Mysuru on Friday. Assembly election date announced in Karnataka. Election code of conduct in force. This is election code of conduct violation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X