• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಿರಿಯಾಪಟ್ಟಣದಲ್ಲೊಂದು ಪರಿಸರ ಸ್ನೇಹಿ ಅಂಗನವಾಡಿ!

By ಬಿ.ಎಂ.ಲವಕುಮಾರ್
|

ಮೈಸೂರು, ಮಾರ್ಚ್ 28 : ಕಲ್ಲು, ಇಟ್ಟಿಗೆ, ಸಿಮೆಂಟ್ ಬೆಲೆ ಗಗನಕ್ಕೇರಿದೆ..ಮರಳು ಲಭಿಸುವುದೇ ದುಸ್ತರವಾಗಿದೆ.. ಇಂತಹ ಪರಿಸ್ಥಿತಿಯಲ್ಲಿ ಗಿರಿಜನ ಹಾಡಿಯಲ್ಲಿ ಅಂಗನವಾಡಿ ಕಟ್ಟಡ ಕಟ್ಟುವುದು ಸುಲಭದ ಮಾತಾಗಿರಲಿಲ್ಲ. ಆದರೆ ಕಲ್ಲು, ಇಟ್ಟಿಗೆ, ಸಿಮೆಂಟ್, ಮರಳಿನ ಹಂಗಿಲ್ಲದೆ ಬಿದಿರಿನಿಂದಲೇ ಪರಿಸರ ಸ್ನೇಹಿ ಕಟ್ಟಡ ನಿರ್ಮಿಸಿದ್ದು, ಆ ಮೂಲಕ ಗಿರಿಜನ ಹಾಡಿಯ ಮಕ್ಕಳ ಅಂಗನವಾಡಿ ಕಟ್ಟಡದ ಕನಸನ್ನು ನನಸು ಮಾಡಲಾಗಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಲಗನಕೆರೆ ಗಿರಿಜನ ಹಾಡಿಯಲ್ಲಿ ಬಿದಿರಿನ ಪರಿಸರ ಸ್ನೇಹಿ ಕಟ್ಟಡವು ನಿರ್ಮಾಣಗೊಂಡಿದೆ. ಹಾಗೆ ನೋಡಿದರೆ ಮಲಗನಕೆರೆ ಗಿರಿಜನ ಹಾಡಿಯಲ್ಲಿ ಅಂಗನವಾಡಿ ಕೇಂದ್ರಕ್ಕೊಂದು ಕಟ್ಟಡದ ಅವಶ್ಯಕತೆಯಿತ್ತು.

ಆದರೆ, ಆಧುನಿಕ ಕಟ್ಟಡವನ್ನು ನಿರ್ಮಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅದಕ್ಕೆ ನೂರೆಂಟು ತಾಪತ್ರಯಗಳು. ಜೊತೆಗೆ ಲಕ್ಷಾಂತರ ರೂ.ಗಳ ಅವಶ್ಯಕತೆಯಿತ್ತು. ಹೀಗಾಗಿ ಮಕ್ಕಳಿಗೆ ಅನುಕೂಲವಾಗುವ ಮತ್ತು ತಕ್ಷಣಕ್ಕೆ ನಿರ್ಮಾಣ ಮಾಡಲು ಸಾಧ್ಯವಾಗುವ ದೃಷ್ಠಿಯಿಂದ ನಿರ್ಮಿತಿ ಕೇಂದ್ರವು ಸ್ಥಳೀಯವಾಗಿ ಸಿಗುವ ಸಂಪನ್ಮೂಲ ಬಿದಿರನ್ನು ಬಳಸಿ ಕಟ್ಟಡ ನಿರ್ಮಾಣ ಮಾಡಲು ಆರಂಭಿಸಿತು. [ನೀರಿನಲ್ಲಿ ಆಡುವ ಮೈಸೂರು ಮಕ್ಕಳಿಗೆ ಬುದ್ಧಿ ಹೇಳುವವರು ಯಾರು?]

ಇದಕ್ಕೆ ಕಟ್ಟಡದ ನಿರ್ಮಾತೃ ಬಾಲಚಂದ್ರನ್ ಸಾಥ್ ನೀಡಿದರು. ಅವರ ಕಲ್ಪನೆ ಮತ್ತು ಶ್ರಮದಿಂದ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣವಾಗಲು ಸಾಧ್ಯವಾಯಿತು. ಇದಕ್ಕೆ ತಾಂತ್ರಿಕ ಸಲಹೆ ಮತ್ತು ವಿನ್ಯಾಸವನ್ನು ಮೈಸೂರಿನ ಎನ್‍ಐಇ ತಾಂತ್ರಿಕ ಕಾಲೇಜಿನ ಕ್ರೇಸ್ಟ್‌ (CREST) ನೀಡಿದೆ. [ಚಾಮರಾಜನಗರ: ಶಿಕ್ಷಕಿ, ಗ್ರಾಮಸ್ಥರ ಜಗಳಕ್ಕೆ ಮಕ್ಕಳು ಬಲಿಪಶು]

ಕೀಟಗಳ ಕಾಟವಿಲ್ಲ : ಸುಮಾರು 64 ಚ.ಮೀ. ವಿಸ್ತೀರ್ಣದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡವನ್ನು ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಸ್ಥಳೀಯವಾಗಿ ಸಿಗುವ ಗಟ್ಟಿಮುಟ್ಟಾದ ಬಿದಿರನ್ನು ಬಳಸಲಾಗಿದೆ. ಅಲ್ಲದೆ, ಅದನ್ನು ಕುಟ್ಟೆ, ಗೆದ್ದಲು ಮತ್ತಿತರೆ ಮರಗಳಿಗೆ ಕಾಡುವ ಕೀಟ, ರೋಗಗಳಿಂದ ರಕ್ಷಿಸುವ ಸಲುವಾಗಿ ಬೊರೆಕ್ಸ್‍ನಿಂದ ಸಂಸ್ಕರಿಸಲಾಗಿದೆ.[ಶಾಲಾ ಮಕ್ಕಳಿಗೆ 'ಶೂ ಭಾಗ್ಯ', ಸಂಪುಟದ ಒಪ್ಪಿಗೆ]

ಕಟ್ಟಡದ ಗೋಡೆಯಾಗಿ ಬಿದಿರಿನ ಜಾಲರಿಯನ್ನೇ ಬಳಸಲಾಗಿದ್ದು ಅದಕ್ಕೆ ಹದ ಮಾಡಿದ ಮಣ್ಣಿನ ಲೇಪನ ಮಾಡಲಾಗಿದೆ. ಮೇಲ್ಛಾವಣಿಗೆ ತಗಡಿನಶೀಟ್ ಬಳಸಲಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಅಡುಗೆಗಾಗಿ ಪ್ರತ್ಯೇಕ ಕಟ್ಟಡವನ್ನು ನಿರ್ಮಿಸಲಾಗಿದೆ. ಕಟ್ಟಡಕ್ಕೆ ಬೆಳಕಿಗಾಗಿ ಸೋಲಾರ್ ವ್ಯವಸ್ಥೆ ಮಾಡಲಾಗಿದೆ. ಕಟ್ಟಡದ ಸುತ್ತ ಬೇಲಿ ನಿರ್ಮಾಣ ಮಾಡಿದ್ದು ಇದಕ್ಕೆ ಬೇಲಿಗಿಡಗಳಾದ ಜತ್ರೋಪ ಹಾಗೂ ಗ್ರೀಸ್ ಕಡ್ಡಿಗಳನ್ನು ನೆಡಲಾಗಿದೆ. ಇನ್ನು ಛಾವಣಿಯಿಂದ ನೀರನ್ನು ಸಂಗ್ರಹಿಸಿ ಉಪಯೋಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

-

-

-

-

ಅಂಗನವಾಡಿ ಕೇಂದ್ರದ ಹಿಂಭಾಗದಲ್ಲಿ ಮಕ್ಕಳ ಊಟಕ್ಕಾಗಿ ತಾಜಾ ತರಕಾರಿಗಳನ್ನು ಬೆಳೆಯುವ ಸಲುವಾಗಿ ಕೈತೋಟ ನಿರ್ಮಿಸಲಾಗಿದೆ. ಕಟ್ಟಡದಲ್ಲಿ ಮಕ್ಕಳಿಗೆ ಕ್ರೀಡೆ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ವರ್ತುಲ ಕ್ರೀಡಾಂಗಣವಿದೆ. ಸ್ಥಳೀಯ ಸಮುದಾಯದ ಪರಸ್ಪರ ಅಭಿಪ್ರಾಯ ವಿನಿಮಯ ಮತ್ತು ಕಾರ್ಯಕ್ರಮಗಳನ್ನು ನಡೆಸಲು ಸಲುವಾಗಿ ಪ್ರತ್ಯೇಕ ಜಾಗವನ್ನು ಮೀಸಲಿರಿಸಲಾಗಿದೆ.

ಈ ಅಂಗನವಾಡಿ ಕಟ್ಟಡವೊಂದು ಮಾದರಿ ಕಟ್ಟಡವಾಗಿದ್ದು ಇಂತಹ ಕಟ್ಟಡವನ್ನು ಎಲ್ಲಿ ಬೇಕಾದರೂ ನಿರ್ಮಿಸಬಹುದಾಗಿದೆ. ಕಟ್ಟಡದ ಬಗ್ಗೆ ಮಾಹಿತಿಗಾಗಿ ಬಾಲಚಂದ್ರನ್ (0821-4269334) ಅವರನ್ನು ಸಂಪರ್ಕಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Environmentally friendly anganwadi building constructed in Malagana Kere girijana hadi, Piriyapatna taluk, Mysuru district. Building wall constructed with bamboo poles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more