ರಜತ ಸಂಭ್ರಮ: ಎಸ್.ಎಲ್. ಭೈರಪ್ಪನವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ

ಮೈಸೂರು, ಮೇ 25 : ಮೈಸೂರಿನ ಸರಸ್ವತಿಪುರಂನಲ್ಲಿನ ಶ್ರೀಕೃಷ್ಣ ಮಂದಿರದ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀಕೃಷ್ಣ ಟ್ರಸ್ಟ್ ನಿಂದ ಇಂದಿನಿಂದ ಜೂನ್ 1ರವರೆಗೆ ಎಂಟು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿದ್ವಾಂಸರು, ಸಾಹಿತಿಗಳು, ಕಲಾವಿದರು, ಪೀಠಾಧಿಪತಿಗಳು, ರಾಜಕೀಯ ಮುಖಂಡರು ಒಂದೇ ವೇದಿಕೆಯಲ್ಲಿ ಭಾಗಿಯಾಗಲಿದ್ದಾರೆ. ಹಾಗೆಯೇ ಕೊಳಲು ವಾದನ, ಸಂಗೀತ, ನೃತ್ಯ ಸೇರಿದಂತೆ ಹಲವು ಕಾರ್ಯಕ್ರಮ ನಡೆಯಲಿದೆ.

ಟ್ರಸ್ಟ್‌ ವತಿಯಿಂದ ರಜತ ಮಹೋತ್ಸವದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದ್ದು, ಮೇ. 31ರಂದು ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Dr S L Bhyrappa will recieve Shri krishnanugraha award

ಜೂ.1ರ ಸಂಜೆ 6ಕ್ಕೆ ಸಮಾರೋಪ ಸಮಾರಂಭದಲ್ಲಿ ಪೇಜಾವರಮಠದ ವಿಶ್ವೇಶತೀರ್ಥ ಶ್ರೀಪಾದರು, ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥರು, ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಮಕ್ರಮದಲ್ಲಿ ವ್ಯಾಸನಕೆರೆ ಪ್ರಭಂಜನಾಚಚಾರ್ಯರು ಸಹ ಭಾಗಿಯಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+