• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು; ಎಲೆ ತೋಟದ ಬಳಿ ಜೋಡಿ ಕೊಲೆ

By ಮೈಸೂರು ಪ್ರತಿನಿಧಿ
|

ಮೈಸೂರು, ಫೆಬ್ರವರಿ 08; ಹಳೇ ವೈಶಮ್ಯದ ಹಿನ್ನೆಲೆಯಲ್ಲಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನ ಎಲೆ ತೋಟದ ಬಳಿ ಭಾನುವಾರ ತಡರಾತ್ರಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಕೊಲೆಯಾದವರನ್ನು ಗೌರಿಶಂಕರ್ ನಗರ ನಿವಾಸಿಗಳಾದ ಕಿರಣ್ (29) ಮತ್ತು ಕಿಶನ್ (29) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಮಧು ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಕೆ. ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಡರಾತ್ರಿ 3-4 ಜನರಿದ್ದ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಇಬ್ಬರನ್ನು ಸ್ಥಳದಲ್ಲೇ ಹತ್ಯೆ ಮಾಡಿದೆ.

ಊಟ ನೀಡಲು ತಡವಾಯಿತೆಂದು ಮಗನಿಂದ ತಾಯಿಯ ಕೊಲೆ

ಘಟನಾ ಸ್ಥಳಕ್ಕೆ ಡಿಸಿಪಿ ಡಾ. ಎ. ಎನ್. ಪ್ರಕಾಶ್ ಗೌಡ, ಎಸಿಪಿ ಪೂರ್ಣಚಂದ್ರ, ಶ್ವಾನದಳ, ಬೆರಳಚ್ಚು ತಂಡ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೃಷ್ಣ ರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತಿದ್ದಾರೆ.

18 ಮಹಿಳೆಯರ ಕೊಲೆ ಮಾಡಿದ್ದ ಸೀರಿಯಲ್ ಕಿಲ್ಲರ್ ಬಂಧನ; ಕೊಲೆಗೆ ಕಾರಣವೇನು?

ಆಸ್ತಿ ವಿಚಾರ ಮತ್ತು ಹಳೇ ದ್ವೇಷದ ಹಿನ್ನಲೆಯಲ್ಲಿ ಸ್ನೇಹಿತರ ಮತ್ತೊಂದು ತಂಡವೇ ಕೊಲೆ ಮಾಡಿದೆ ಎಂದು ಶಂಕಿಸಲಾಗಿದೆ. ಕತ್ತುಕೊಯ್ದು ಕೊಲೆ ಮಾಡಲಾಗಿದ್ದು, ಸೋಮವಾರ ಮುಂಜಾನೆ ರಕ್ತಸಿಕ್ತ ಮೃತದೇಹಗಳನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ದೇವರನ್ನು ಮೆಚ್ಚಿಸಲು 6 ವರ್ಷದ ಮಗನನ್ನು ಕೊಲೆ ಮಾಡಿದ ಮದರಸಾ ಶಿಕ್ಷಕಿ

ಕೃಷ್ಣರಾಜ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಹುಡುಕಾಟವನ್ನು ನಡೆಸುತ್ತಿದ್ದಾರೆ.

English summary
Double murder in Ele Thota near Mysuru. Krishnaraja station police visited the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X