ಪಿರಿಯಾಪಟ್ಟಣದಲ್ಲಿ ಡಾಕ್ಟರ್ ಉಸಿರುಗಟ್ಟಿಸಿ ಕೊಲೆ
ಮೈಸೂರು, ಡಿಸೆಂಬರ್ 09 : ಕುಶಾಲನಗರದಲ್ಲಿ ಕ್ಲಿನಿಕ್ ಹೊಂದಿದ್ದ ಡಾಕ್ಟರ್‌ನನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಕೊಲೆಯಾದ ವೈದ್ಯರನ್ನು ದಿಲೀಪ್ ಎಂದು ಗುರುತಿಸಲಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ದಿಲೀಪ್ ಅವರನ್ನು ಪಿರಿಯಾಪಟ್ಟಣ ತಾಲೂಕಿನ ಬೈಲುಕೊಪ್ಪ ಗ್ರಾಮದ ಮನೆಯಲ್ಲಿ ಹತ್ಯೆ ಮಾಡಲಾಗಿದೆ.

ಶನಿವಾರ ತಡರಾತ್ರಿ ರೋಗಿಗಳ ವೇಷದಲ್ಲಿ ಮನೆಗೆ ಬಂದ ದುಷ್ಕರ್ಮಿಗಳು ಎರಡೂ ಕೈಗಳನ್ನು ಕಟ್ಟಿಹಾಕಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಮನೆಯ ನೆಲ ಮತ್ತು ಗೋಡೆಗಳ ಮೇಲೆ ಖಾರದ ಪುಡಿಯೂ ಕಂಡುಬಂದಿದೆ.
ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ನೀಡಿದ್ದಾರೆ. ಮೈಸೂರು ಎಸ್‌ಪಿ ಅಮಿತ್ ಸಿಂಗ್ ಅವರು ಸಹ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಬೈಲುಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಗೆ ಕಾರಣವೇನು? ಎಂಬುದು ತಿಳಿದುಬಂದಿಲ್ಲ.












Click it and Unblock the Notifications