ಡಿಕೆ ಶಿವಕುಮಾರ್ ಜಮೀನು ಹೇಗೆ ಬರೆಸಿಕೊಂಡಿದ್ದಾರೆ ಗೊತ್ತಾ?- ಕನಕಪುರ ಬಂಡೆಗೆ ಹೊಡೆದ ದಳಪತಿ
ಬೆಂಗಳೂರು ಆಗಸ್ಟ್ 4: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಮೈಸೂರು ಚಲೋ ಪಾದಯಾತ್ರೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಡಿಕೆ ಶಿವಕುಮಾರ್ ಜಮೀನು ಹೇಗೆ ಬರೆಸಿಕೊಂಡಿದ್ದಾರೆ ಎನ್ನುವುದನ್ನು ವಿವರಿಸಿದ್ದಾರೆ.
ನಿವೃತ್ತ ಯೋಧನ ಪುತ್ರಿಯನ್ನು ಕಿಡ್ನ್ಯಾಪ್ ಮಾಡಿ ಆಸ್ತಿ ಕೊಡದಿದ್ದರೆ ಮಗಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಆಸ್ತಿ ಬರೆಸಿಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಅಜ್ಜಯ್ಯ ದೇವಸ್ಥಾನದ ಪಕ್ಕದಲ್ಲಿನ ಜಾಗವನ್ನು ನಿವೃತ್ತ ಯೋಧನ ಪುತ್ರಿಯನ್ನು ಅಪಹರಿಸುವ ಮೂಲಕ ಡಿಕೆ ಶಿವಕುಮಾರ್ ಅವರು ಬರೆಸಿಕೊಂಡಿದ್ದಾರೆಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ದೂರಿದ್ದಾರೆ. ಅಲ್ಲದೆ ಸದಾಶಿವ ನಗರದಲ್ಲಿ ವಿಧವೆಯರಿಗೆ ಬೆದರಿಸಿ ಆಸ್ತಿಯನ್ನು ಲಪಟಾಯಿಸಿದ್ದಾರೆ ಎಂದು ಅವರು ವಾಗ್ದಾಳಿ ಮಾಡಿದರು.
ಇಷ್ಟಲ್ಲದೇ ಬಿಡದಿ ಕಾಲೇಜು ಜಾಗ ಬಡ ಬ್ರಾಹ್ಮಣನದ್ದು, ದಲಿತರಿಗೆಂದು ಶಾಂತಿನಗರ ಹೌಸಿಂಗ್ ಸೊಸೈಟಿಗೆ ಕೊಟ್ಟ ಭೂಮಿಯೂ ಗುಳುಂ ಎನಿಸಿದ್ದಾರೆ. ನಾನು ಚಲನಚಿತ್ರ ಪ್ರದರ್ಶಕನಾಗಿ ಕೆಲಸ ಮಾಡ್ತಿದ್ದಾಗ 15 ವರ್ಷದ ಹಿಂದೆ 45 ಎಕರೆ ಭೂಮಿ ಖರೀದಿ ಮಾಡಿದ್ದೇನೆ. ನನ್ನಲ್ಲಿ ಅದೇ ಆಸ್ತಿ ಇದೆ. ಆ ಆಸ್ತಿ ಇನ್ನೂ ಕೂಡ ಹೆಚ್ಚಾಗಿಲ್ಲ. ನಿಮ್ಮ ಆಸ್ತಿ ಬ್ಲ್ಯಾಕ್ ಆಂಡ್ ವೈಟ್ ಟಿವಿ ಯಿಂದ ವಿಸಿಆರ್ ಆಗಿದೆ. ಇದರಿಂದ ಪ್ರಾರಂಭವಾಗಿ ಯಾವ್ಯಾವ ರೀತಿ ನಡೆದುಕೊಂಡಿದ್ದೀರಿ ಎಂದು ಕಿಡಿಕಾರಿದರು.
ಶಾಂತಿನಗರ ಹೌಸಿಂಗ್ ಸೊಸೈಟಿಗೆ ದಲಿತರಿಗೆ ಕೊಟ್ಟ ಭೂಮಿಯನ್ನು ಯಾವ ರೀತಿ ಬರೆಸಿಕೊಂಡಿದ್ದಾರೆ ಎನ್ನುವ ಬಗ್ಗೆ ಸಿದ್ದರಾಮಯ್ಯ ಅವರಿಗೆ ಗೊತ್ತೇ ಇಲ್ವಾ? ಆಗ ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದರು. ಎಚ್‌ಡಿಕೆ ಆಸ್ತಿ ಬಗ್ಗೆ ಮಾತನಾಡುವ ನೈತಿಕತೆ ಡಿಕೆ ಶಿವಕುಮಾರ್ ಅವರಿಗೆ ಇದ್ಯಾ? ನಾನು ಜಮೀನು ಖರೀದಿ ಮಾಡಿದಾಗ ಯಾರಿಗೂ ಮೋಸ ಮಾಡಿಲ್ಲ. ದೌರ್ಜನ್ಯದಿಂದ ಆಸ್ತಿ ಖರೀದಿ ಮಾಡಿಲ್ಲ. ಅಷ್ಟೇ ಅಲ್ಲ ನನ್ನ ಅಧಿಕಾರವನ್ನು ನಾನು ದುರುಪಯೋಗ ಮಾಡಿಕೊಂಡಿಲ್ಲ. ಹೀಗಂತ ಯಾರಾದರೂ ಹೇಳಿದರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.

ವ್ಯವಹಾರ ನಡೆಸುತ್ತಿದ್ದ ಕೃಷ್ಣ ಮೂರ್ತಿ ಕೆಎಸ್‌ಸಿನಲ್ಲಿ ಸಾಲ ಪಡೆದುಕೊಂಡಿದ್ದರು. ಕೃಷ್ಣ ಮೂರ್ತಿ ಒಬ್ಬ ಬಡ ಬ್ರಾಹ್ಮಣ. ಅವರಿಗೆ ಸಾಲ ತೀರಿಸಲಾಗದೇ ಇದ್ದಾಗ ಅಧಿಕಾರ ದುರುಪಯೋಗ ಪಡೆಸಿಕೊಂಡು ಐಕಾಸ್ ನರ್ಸಿಂಗ್ ಕಾಲೇಜು ಭೂಮಿಯನ್ನು ಬರೆಸಿಕೊಂಡರು.
ಇನ್ನೂ ನಿವೃತ್ತ ಯೋಧನ ಮಗಳನ್ನು ಕಿಡ್ನ್ಯಾಪ್ ಮಾಡಿ ಹೆದರಿಸಿ ಭೂಮಿಯನ್ನು ಬರೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸದಾಶಿವ ನಗರದಲ್ಲಿ ಮೂರು ಜನ ವಿಧವಾ ತಾಯಂದಿರಾಮೇಲೆ ಒತ್ತಡ ಹೇರಿ ಭೂಮಿ ಕಬಳಿಸಿದ್ದಾರೆ. ಹೀಗೆ ಹೇಳ್ತಾ ಹೋದರೆ ಪುಟಗಟ್ಟಲೆ ಇದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಹೆಚ್‌ಡಿ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ವಿರುದ್ಧ ದೂರಿದ್ದಾರೆ.
ಏನು ಬಿಚ್ಚಪ್ಪ ಬಿಚ್ಚೋಕೆ ಏನಿದೆ? ನಾನು ಕಂಡೋರ ಜಮೀನು ಹೊಡೆಯೋಕೆ ಹೋಗಿಲ್ಲ. ಬಿಚ್ಚೋಕೆ ಹೋದರೆ ಪುಟಗಟ್ಟಲೆ ಇದೆ ನಿಮ್ಮದು. ತನಿಖೆಗೆ ಹತ್ತತ್ತು ಸಿಬಿಐ ತಂಡ ಬೇಕು ಕಡಿಮೆ ಸಾಕಾಗಲ್ಲ. ನಾನು ಅಗೌರವಯುತ ಕೆಲಸ ಮಾಡಿದರೆ ನನಗೆ ಕೇಂದ್ರ ಸಚಿವ ಸ್ಥಾನ ಕೊಡುತ್ತಿರಲಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications