• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಕೆ ಶಿವಕುಮಾರ್‌ಗಾಗಿ ಉರುಳು ಸೇವೆ ಮಾಡಿ ಅಭಿಮಾನಿ

|

ಮೈಸೂರು, ಜೂನ್ 15: ಡಿಕೆ ಶಿವಕುಮಾರ್‌ಗಾಗಿ ಅಭಿಮಾನಿಯೊಬ್ಬರು ನಂಜುಂಡೇಶ್ವನ ಮೊರೆ ಹೋಗಿದ್ದಾರೆ. ಪ್ರತಿಜ್ಞಾ ವಿಧಿ ಸುಸೂತ್ರವಾಗಿ ನೇರವೇರಲು ದೇವರಿಗೆ ಪ್ರಾರ್ಥನೆ ಮಾಡಿದ್ದಾರೆ.

ನಂಜುಂಡೇಶ್ವರನ ಸನ್ನಿಧಿಗೆ ಹೋಗಿ ಉರುಳು ಸೇವೆ ಮಾಡಿದ್ದಾರೆ. ಉರುಳು ಸೇವೆ ಮಾಡಿ ನಂಜುಂಡೇಶ್ವರನಿಗೆ ಹರಕೆ ಹೊತ್ತಿದ್ದಾರೆ. ಕಪಿಲಾ ನದಿಯಲ್ಲಿ ಮಿಂದು ವಿಷಕಂಠನ ಸನ್ನಿದಿಯಲ್ಲಿ ಉರುಳು ಸೇವೆ ಮಾಡಿದ್ದಾರೆ. ಯಾವುದೇ ಅಡಚಣೆ ಆಗದೇ ಅಧಿಕಾರ ಸ್ವೀಕಾರ ಕಾರ್ಯ ನೆರವೇರಲಿ ಅಂತ ನಂಜುಂಡನ ಬಳಿ ಕೇಳಿಕೊಂಡಿದ್ದಾರೆ.

ಡಿಕೆಶಿ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಹೋಮ: ಒಬ್ಬರು ಪ್ರಮುಖರ ಗೈರು

ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಮಾರ್ ಡಿಕೆ ಶಿವಕುಮಾರ್‌ ಅವರ ದೊಡ್ಡ ಅಭಿಮಾನಿಯಾಗಿದ್ದು, ಪೂಜೆ, ಉರುಳು ಸೇವೆ ಮಾಡುವ ಮೂಲಕ ತನ್ನ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪದಗ್ರಹಣ ಕಾರ್ಯಕ್ಕೆ ಕೊರೊನಾ ಅಡ್ಡಿಯಾಗಿತ್ತು. ಪ್ರತಿಜ್ಞಾ ವಿಧಿ ಕಾರ್ಯಕ್ರಮಕ್ಕೆ ಸರ್ಕಾರ ಬ್ರೇಕ್ ಹಾಕಿತ್ತು. ಒಂದಾಲ್ಲಾ ಒಂದು ತೊಡಕಿನಿಂದ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮುಂದೆ ಹೋಗುತ್ತಿದೆ.

English summary
DK Shivakumar fan did pooja in Nanjundeshwara temple for the Prathijna event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X