ಮಂದಗತಿಯಲ್ಲಿ ಕೆರೆ ತುಂಬಿಸುವ ಯೋಜನೆ: ಅಧಿಕಾರಿಗಳಿಗೆ ಸಚಿವ ಕೆ.ವೆಂಕಟೇಶ್ ತರಾಟೆ

ಮೈಸೂರು, ಜೂನ್. 07: ಪಿರಿಯಾಪಟ್ಟಣ ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಐತಿಹಾಸಿಕ ಯೋಜನೆಯನ್ನು ಅವಧಿ ಮುಗಿದರೂ ಅಧಿಕಾರಿಗಳು ಪೂರ್ಣಗೊಳಿಸದಿರುವುದಕ್ಕೆ ಪಶುಪಾಲನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಕಿಡಿಕಾರಿದ್ದಾರೆ. ರೈತರ ಕೃಷಿ ಚಟುವಟಿಕೆ ಹಾಗೂ ಕಾವೇರಿ ಕುಡಿಯವ ನೀರನ್ನು ಜನತೆಗೆ ಒದಗಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿತ್ತು.

ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಕಾವೇರಿ ನಿಗಮದ ಅಧಿಕಾರಿಗಳ ಜೊತ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಸಚಿವ ಕೆ.ವೆಂಕಟೇಶ್, "2017-18 ನೇ ಸಾಲಿನಲ್ಲಿ ತಾಲ್ಲೂಕಿನ ರೈತರು ಹಾಗೂ ಸಾರ್ವಜನಿಕರಿಗೆ ಕಾವೇರಿ ನೀರನ್ನು ಒದಗಿಸಲು ಈ ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಕರೆ ತಂದು ಶಂಕುಸ್ಥಾಪನೆ ನೆರವೇರಿಸಿದ್ದೆ" ಎಂದು ಹೇಳಿದ್ದಾರೆ.

Delayed in lake filling project: Minister K. Venkatesh slams officials

"ಈ ಯೋಜನೆಗೆ ಹಿಂದಿನ ಶಾಸಕ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ನಿರುತ್ಸಾಹದಿಂದ ಹಳ್ಳ ಹಿಡಿದಿದೆ. ಆದ್ದರಿಂದ ಕೂಡಲೇ ಈ ಯೋಜನೆ ವೇಗ ಪಡೆದು, ನಮ್ಮ ರೈತರಿಗೆ ಇದರ ಉಪಯೋಗ ಸಿಗಬೇಕು. ಆದ್ದರಿಂದ ಅಧಿಕಾರಿಗಳು ಇಂದಿನಿಂದಲೇ ಕೆಲಸ ಪುನರಾರಂಭಿಸಿ, ಈ ಬಗ್ಗೆ ಪ್ರತಿದಿನ ನನಗೆ ಮಾಹಿತಿ ನೀಡಬೇಕು" ಎಂದು ಎಚ್ಚರಿಸಿದ್ದಾರೆ.

"ಈ ಹಿಂದೆ ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದ ಪರಿಣಾಮ ತಾಲೂಕಿನ ಅರ್ಧಭಾಗದಷ್ಟು ಹಳ್ಳಿಗಳು ಬೇಸಿಗೆಯಲ್ಲಿಯೂ ನೀರಿನ ತೊಂದರೆ ಇಲ್ಲದಂತೆ ಸುಖವಾಗಿದೆ. ಆದರೆ ಉಳಿದ ಅರ್ಧದಷ್ಟು ಹಳ್ಳಿಗಳು ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಎದುರಿಸುತ್ತಿದ್ದವು. ಹಾಗಾಗಿ ರೂ.300 ಕೋಟಿ ಅನುದಾನ ತಂದು 133 ಕೆರೆಗಳು 17 ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಆರಂಭಿಸಿ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶ ಹೊಂದಿದ್ದೆ" ಎಂದು ತಮ್ಮ ಉದ್ದೇಶದ ಬಗ್ಗೆ ತಿಳಿಸಿದ್ದಾರೆ.

Delayed in lake filling project: Minister K. Venkatesh slams officials

ಮುಂದುವರೆದು ಮಾತನಾಡಿದ ಸಚಿವರು, "ಈ ಬಾರಿ ಮುಂಗಾರು ಮಳೆ ಇನ್ನೂ ಪ್ರಾರಂಭವಾಗಿಲ್ಲ, ಈಗಾಗಲೇ ತಾಲೂಕಿನ ಹಲವಾರು ಕೆರೆಗಳು ಬತ್ತಿಹೋಗಿ ರೈತರು ಮತ್ತು ಜಾನುವಾರುಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅಧಿಕಾರಿಗಳು ಶೀಘ್ರವಾಗಿ ಕೆಲಸ ಮುಗಿಸಬೇಕು. ಜುಲೈ ತಿಂಗಳ 20 ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆ ತಂದು ಅವರಿಂದಲೇ 150 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯ ಉದ್ಘಾಟನೆ ನೆರವೇರಿಸಬೇಕು" ಎಂದಿದ್ದಾರೆ.

ಕೆರೆ ತುಂಬಿಸುವ ಯೋಜನೆಯ ವಿವರ ಹೀಗಿದೆ

ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳುಸೊಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಪಿರಿಯಾಪಟ್ಟಣ ತಾಲೂಕಿನ ಕೆಲವು ಪ್ರದೇಶ ಈ ಹಿಂದೆ ಬರಪೀಡಿತವಾಗಿದ್ದು, ಸುಮಾರು 79 ಗ್ರಾಮಗಳ ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವುದು ಕಂಡುಬರುತ್ತದೆ. ಈ ಪರಿಸ್ಥಿತಿಯನ್ನು ಅವಲೋಕಿಸಿದ ಕೆ.ವೆಂಕಟೇಶ್ ಸದರಿ ಗ್ರಾಮಗಳ ವ್ಯಾಪ್ತಿಯ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಹಾಗೂ ಇತ್ಯಾದಿ ಪೂರೈಕೆಗಳ ಸೌಲಭ್ಯ ಕಲ್ಪಿಸುವ ಪ್ರಯುಕ್ತ 79 ಗ್ರಾಮಗಳ ಕೆರೆಗಳಿಗೆ ಕಾವೇರಿ ನದಿಯಿಂದ ಸುಮಾರು 133 ಕೆರೆ ಮತ್ತು 17 ಕಟ್ಟೆಗಳು ಸೇರಿ 150 ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದ್ದರು.

ಈ ಯೋಜನೆಯ ಪ್ರಕಾರ ಕಾವೇರಿ ನದಿಯಿಂದ ಮಳೆಗಾಲದ ಸಮಯದಲ್ಲಿ ಏರು ಕೊಳವೆ ಮೂಲಕ ನೀರೆತ್ತಿ, ದೇಪೂರ ಗ್ರಾಮದ ಯೋಜಿತ ವಿತರಣಾ ತೊಟ್ಟಿ ನಂತರ ಎಡಭಾಗದ ಮತ್ತು ಬಲಭಾಗದ ಗುರುತ್ವಾಕರ್ಷಣೆಯ ಪೈಪ್‌ಲೈನ್ ಮುಖಾಂತರ 150 ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಸುಮಾರು 0.828 ಟಿ.ಎಂ.ಸಿ (95 ಕ್ಯೂಸೆಕ್ಸ್) ನೀರು ಯೋಜನೆಗೆ ಬೇಕಾಗುತ್ತದೆ. ಈ 95 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಯಿಂದ ತೆಗೆದುಕೊಳ್ಳಲು ಅನುಮತಿ ಪಡೆಯಲಾಗಿದೆ.

ಮುತ್ತಿನ ಮುಳ್ಳುಸೋಗೆ ಗ್ರಾಮದಿಂದ ಬಲದಂಡೆ ಮತ್ತು ಎಡದಂಡೆಗಳನ್ನು ನಿರ್ಮಿಸಿಕೊಂಡು 125 ಕೀ.ಮಿ ಉದ್ದದ ಈ ಯೋಜನೆಗಾಗಿ 11.464 ಮೀಟರ್ ನೀರಿನ ಕಾಲುವೆ ನಿರ್ಮಾಣವಾಗಲಿದೆ. 100 ಅಡಿ ಎತ್ತರದಿಂದ ಕೆರೆಗಳಿಗೆ ಕುಡಿಯುವ ನೀರು ತುಂಬಿಸಲಾಗುತ್ತದೆ. ಇದರಿಂದ ತಾಲೂಕಿನ ಕೆಲವು ಉಳಿದ ಕೆರೆಗಳಿಗೆ ಕಾವೇರಿ ನದಿ ಪಾತ್ರದಿಂದ ಪ್ರತಿ ವರ್ಷ 0.85 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಈ ಬೃಹತ್ ಯೋಜನೆಗಾಗಿ ಸರ್ವೆ ಕಾರ್ಯವನ್ನು ಜಿಯೋಸ್ಟಿಂ ಎಂಬ ಕಂಪನಿಯ ವತಿಯಿಂದ ಡಿಜಿಟಲ್ ಸರ್ವೆ ಮಾಡಲಾಗಿದ್ದು, ಆಲನಹಳ್ಳಿ, ಚೌಡೇನಹಳ್ಳಿ, ನಂದಿನಾಥಪುರ ಮಾರ್ಗವಾಗಿ ಪಿರಿಯಾಪಟ್ಟಣಕ್ಕೆ ಕೊನೆಯಾದರೆ, ಮತ್ತೊಂದು ನಾಲೆ ಕಂಪಲಾಪುರದಲ್ಲಿ ಅಂತ್ಯಗೊಳ್ಳುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+