• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಡಹಬ್ಬ ವೀಕ್ಷಿಸಲು ರಾಯಲ್ ಎಂಟ್ರಿಯ ಗೋಲ್ಡನ್ ಕಾರ್ಡ್ ಬಿಡುಗಡೆ

|

ಮೈಸೂರು, ಅಕ್ಟೋಬರ್.01: ವಿಶ್ವವಿಖ್ಯಾತ ದಸರಾ ಮಹೋತ್ಸವ 2018ರ ಹಿನ್ನೆಲೆಯಲ್ಲಿ ಇಂದು ಸೋಮವಾರ ದಸರಾ ಗೋಲ್ಡ್ ಕಾರ್ಡ್ ವಿನ್ಯಾಸ ಮತ್ತು ಸಾಂಸ್ಕೃತಿಕ ಉತ್ಸವಗಳ ಪೋಸ್ಟರ್ ಅನ್ನು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.

ಸಚಿವ ಜಿಟಿ ದೇವೇಗೌಡ, ಪ್ರಾಥಮಿಕ ಶಿಕ್ಷಣ ಸಚಿವ ಮಹೇಶ್ ಅವರು ಪೋಸ್ಟರ್ ಬಿಡುಗಡೆಗೊಳಿಸಿದರು.

ನಾಡಹಬ್ಬ ದಸರಾಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಪ್ಯಾಕೇಜ್ ಟೂರ್

ನಾಳೆಯಿಂದ ದಸರಾ ಗೋಲ್ಡ್ ಕಾರ್ಡ್ ಆನ್ ಲೈನ್ ಮಾರಾಟ ಆರಂಭವಾಗಲಿದ್ದು, ಪ್ರಸಿದ್ಧ ತಾಣಗಳು, ದಸರಾ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಪ್ರತಿವರ್ಷದಂತೆ 3,999 ರೂ ಮೌಲ್ಯದ ಗೋಲ್ಡ್ ಕಾರ್ಡ್ ಮಾರಾಟವಿರುತ್ತದೆ.

ದಸರಾ ಯುವ ಸಂಭ್ರಮದಲ್ಲಿ ಮಹದೇಶ್ವರನ ಹಾಡಿಗೆ ಹೆಜ್ಜೆ ಹಾಕಿದ ಜಿಟಿಡಿ

ಈ ಬಾರಿ ದಸರಾಗೆ 2 ಸಾವಿರ ಗೋಲ್ಡ್ ಕಾರ್ಡ್ ಟಿಕೇಟ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟಿಕೇಟ್ ನಲ್ಲೂ ಆರ್‍ಎಫ್ ಐಡಿ ರೀಡಿಂಗ್ ಚಿಪ್ ಅಳವಡಿಸಿದ್ದು, ಇದನ್ನು ಸ್ಕ್ಯಾನ್ ಮಾಡಿದ ಬಳಿಕವೇ ಅರಮನೆ ಒಳಗೆ ಪ್ರವೇಶ ನೀಡಲಾಗುತ್ತದೆ. ಈ ಟಿಕೆಟ್ ಪಡೆದವರಿಗೆ ಪ್ರತ್ಯೇಕ ಆಸನ, ಊಟದ ವ್ಯವಸ್ಥೆ ಮಾಡಲಾಗುವುದು.

ದಸರಾ ಹಿನ್ನೆಲೆಯಲ್ಲಿ ರೋಡಿಗಿಳಿದ ಮೊರಿಸ್, ಫಿಯಟ್, ಜಾವಾ...

ಅಲ್ಲದೇ ಜಂಬೂ ಸವಾರಿ ನಡೆಯುವ ಅರಮನೆ, ಪಂಜಿನ ಕವಾಯತು ನಡೆಯವ ಬನ್ನಿಮಂಟಪ, ಯುವ ದಸರಾದಲ್ಲಿ ವಿಶೇಷ ವ್ಯವಸ್ಥೆಯಿರುತ್ತದೆ.

English summary
Dasara Gold Card Design and poster of cultural festivals was released at the Zilla Panchayat Hall today. Minister GT Deve Gowda, Minister SA RA Mahesh released the poster.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X