ಯಾರೂ ಗಾಬರಿಯಾಗುವುದು ಬೇಡ ಎಂದ ದರ್ಶನ್ ಪತ್ನಿ ವಿಜಯಲಕ್ಷ್ಮೀ
ಮೈಸೂರು, ಸೆಪ್ಟೆಂಬರ್ .24 : ದರ್ಶನ್ ಅವರ ಕೈಗೆ ಪೆಟ್ಟಾಗಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ನನ್ನ ಜತೆ ಈಗಾಗಲೇ ಮಾತಾಡಿದ್ದಾರೆ. ಈ ಬಗ್ಗೆ ಯಾರು ಗಾಬರಿಯಾಗುವುದು ಬೇಡ. ಆದಷ್ಟು ಬೇಗ ದರ್ಶನ್ ಚೇತರಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಸಚಿವ ಸಾ.ರಾ. ಮಹೇಶ್, ನಟ ದರ್ಶನ್ ಅವರ ಕೈ ಫ್ರ್ಯಾಕ್ಚರ್ ಆಗಿದೆ. ನಟ ದೇವರಾಜ್ ಅವರ ಎಡಗೈ ಬೆರಳುಗಳಿಗೆ ಗಾಯವಾಗಿದೆ. ಪ್ರಜ್ವಲ್ ಕೂಡ ಗಾಯಗೊಂಡಿದ್ದಾರೆ. ಮೂವರ ಜತೆ ಮಾತನಾಡಿದ್ದೇನೆ. ಸದ್ಯ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.

ಮೈಸೂರಿನ ಹಿನಕಲ್ ಬಳಿ ತಡರಾತ್ರಿ ನಡೆದ ಅಪಘಾತದಲ್ಲಿ ನಟ ದರ್ಶನ್ ಬಲಗೈನ ಎರಡು ಮೂಳೆ ಮುರಿತಗೊಂಡಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.
ಅಪಘಾತದ ವೇಳೆ ದರ್ಶನ್ ಕಾರು ಚಲಾಯಿಸುತ್ತಿದ್ದ ರಾಯ್ ಅಂಟೋನಿ ಯಾರು.?
ಐಸಿಯುನಲ್ಲೇ ಚಿಕಿತ್ಸೆ ಮುಂದುವರೆಸಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ, ನಟ ಸೃಜನ್ ಲೋಕೇಶ್ ಮತ್ತು ತರಂಗ ವಿಶ್ವ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಆಗಮಿಸಿ ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ.












Click it and Unblock the Notifications