Darshan Thoogudeep: ದರ್ಶನ್‌ರ ಮೆಚ್ಚಿನ ಚಿತ್ರಮಂದಿರ ನೆಲಸಮಕ್ಕೆ ಸಿದ್ಧತೆ
ಕನ್ನಡ ಸಿನಿಮಾಗಳಿಗೆ ಬೆಂಗಳೂರು ಬಳಿಕ ಅತಿ ದೊಡ್ಡ ಮಾರುಕಟ್ಟೆ ಇರುವುದು ಮೈಸೂರಿನಲ್ಲಿ. ಮೈಸೂರಿನ ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿಗಳು, ಕನ್ನಡ ಸಿನಿಮಾ, ಸಿನಿಮಾ ಪ್ರೇಮಿಗಳ ನಡುವೆ ಒಂದು ನಂಟಿದೆ. ಮೈಸೂರಿನ ಸಿನಿಮಾ ಪ್ರೇಮಿಗಳಿಗೆ 40 ವರ್ಷಗಳಿಂದ ಮನರಂಜನೆ ಉಣಬಡಿಸಿದ್ದ ಚಿತ್ರಮಂದಿರವೊಂದು ನೆಲಸಮವಾಗುತ್ತಿದ್ದು, ಸಿನಿಮಾ ಅಭಿಮಾನಿಗಳಿಗೆ ಬೇಸರ ತಿರಿಸಿದೆ. ಹೌದು, ಸಾಂಸ್ಕೃತಿಕ ನಗರಿಯ ಹೃದಯಭಾಗದಲ್ಲಿರುವ ಪ್ರಸಿದ್ಧ ಹಾಗೂ ನಟ ದರ್ಶನ್ ಅವರ ಅಚ್ಚುಮೆಚ್ಚಿನ 'ಸರಸ್ವತಿ ಚಿತ್ರಮಂದಿರ' ಇನ್ನು ನೆನಪು ಮಾತ್ರ.
ಇನ್ನು ಕೆಲವು ದಿನಗಳಲ್ಲಿ ಸರಸ್ವತಿ ಚಿತ್ರಮಂದಿರವನ್ನು ನೆಲಸಮ ಮಾಡಲಾಗುತ್ತಿದೆ. ನಾಲ್ಕು ದಶಕಗಳಿಂದ ಮೈಸೂರಿನ ಸಿನಿ ಪ್ರಿಯರಿಗೆ ನೆಚ್ಚಿನ ಚಲನಚಿತ್ರಗಳ ರಸದೌತಣ ಉಣ ಬಡಿಸಿದ ಸರಸ್ವತಿ ಚಿತ್ರಮಂದಿರದ ಜಾಗದಲ್ಲಿ ವಾಣಿಜ್ಯ ಮಾಲ್ ಕಟ್ಟಲು ಮಾಲೀಕರು ಮುಂದಾಗಿದ್ದಾರೆ.

ಸರಸ್ವತಿಪುರಂನಲ್ಲಿರುವ ಸರಸ್ವತಿ ಚಿತ್ರಮಂದಿರ ಆರು ತಿಂಗಳ ಹಿಂದೆಯೇ ಪ್ರದರ್ಶನ ನಿಲ್ಲಿಸಲಾಗಿತ್ತು. ಎರಡು ತಿಂಗಳ ಹಿಂದಿನಿಂದ ಚಿತ್ರಮಂದಿರದ ನೆಲಸಮ ಕಾರ್ಯ ಆರಂಭಿಸಿದ್ದು, ಪೀಠೋಪಕರಣ ಹಾಗೂ ಕಿಟಕಿ ಸೇರಿದಂತೆ ಎಲ್ಲವನ್ನು ಬೇರ್ಪಡಿಸಿ ಕೊಂಡೊಯ್ಯಲಾಗಿದೆ. ಇದೀಗ ಎರಡು ದಿನದಿಂದ ಚಿತ್ರಮಂದಿರದ ಮುಂಭಾಗದ ಗೋಡೆ ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ.
ಕೋವಿಡ್ ಬಳಿಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಹಲವು ಸವಾಲುಗಳನ್ನು ಎದುರಿಸಿವೆ. ಪ್ರೇಕ್ಷಕರ ಕೊರತೆ, ಸ್ಥಳೀಯ ಕಾಪೋರೇಷನ್ ಶುಲ್ಕದಲ್ಲಿ ಹೆಚ್ಚಳ, ಮಾಲ್ಗಳ ಸ್ಪರ್ಧೆ ಹೀಗೆ ಕೆಲ ಕಾರಣಗಳಿಂದ ಮೈಸೂರು ನಗರದಲ್ಲಿ ಒಂದೊಂದೇ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಾ ಬಂದಿವೆ. ಈ ಸಾಲಿಗೆ ಇದೀಗ ಸರಸ್ವತಿ ಚಿತ್ರಮಂದಿರವೂ ಸೇರಿದೆ.
ತೆರಿಗೆ ನೀತಿ ಬಗ್ಗೆ ಬೇಸರ
ರಾಜ್ಯದಲ್ಲಿ ಯಾವ ಜಿಲ್ಲೆಗಳಲ್ಲೂ ಇರದ ತೆರಿಗೆ ನೀತಿ ಮೈಸೂರಲ್ಲಿದೆ. ಈ ಸಂಬಂಧ ಜನರು ಜಾಗೃತರಾಗದೇ ಸುಮ್ಮನಿರುವುದೇ ತೆರಿಗೆ ದರ ಹೆಚ್ಚಳಕ್ಕೆ ಕಾರಣವಾಗಿದೆ. ರಾಜಧಾನಿ ಬೆಂಗಳೂರಲ್ಲಿ ವ್ಯಾಪಾರ, ವಹಿವಾಟು ಹೆಚ್ಚಾಗಿದ್ದರೂ, ಆಸ್ತಿ ತೆರಿಗೆ ಪ್ರಮಾಣ ಕಡಿಮೆ ಇದೆ. ಆದರೆ, ಮೈಸೂರಲ್ಲಿ ದುಪ್ಪಟ್ಟು ತೆರಿಗೆ ವಸೂಲಿ ಮಾಡಲಾಗುತ್ತಿದ್ದರೂ, ನಿರೀಕ್ಷಿಸಿದ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿಲ್ಲ. ಈ ಕಾರಣದಿಂದ ಚಿತ್ರಮಂದಿರಗಳು ಮುಚ್ಚುತ್ತಿವೆ, ಎಂದು ಚಲನಚಿತ್ರ ಮಂದಿರಗಳ ಮಾಲೀಕರ ಸಂಘದ ಅಧ್ಯಕ್ಷ ರಾಜಾರಾಮ್ ಬೇಸರ ವ್ಯಕ್ತಪಡಿಸಿದ್ದಾರೆ.
Another beautiful theatre gone...💔😢 https://t.co/rUP1XqRywC
— Hemanth M Rao (@hemanthrao11) November 4, 2024
ದರ್ಶನ್‌ರ ನೆಚ್ಚಿನ ಚಿತ್ರಮಂದಿರ
ಮೈಸೂರಿನಲ್ಲಿ ಬೆಳೆದ ನಟ ದರ್ಶನ್‌ಗೆ ಸರಸ್ವತಿ ಚಿತ್ರಮಂದಿರದ ಜೊತೆ ಸಾಕಷ್ಟು ನಂಟಿದೆ. ಈ ಚಿತ್ರಮಂದಿರದಲ್ಲಿ ದರ್ಶನ್ ಹಲವು ಸಿನಿಮಾಗಳನ್ನು ನೋಡಿ ಬೆಳೆದವರು. ದರ್ಶನ್‌ರ ಹಲವು ಸಿನಿಮಾಗಳು ಸರಸ್ವತಿ ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಂಡಿವೆ.












Click it and Unblock the Notifications