ಮೈಸೂರಿನ ಹೊರವಲಯದಲ್ಲಿ ನಿತ್ಯವೂ ಮಾವು ಮೇಳ: ಏನಿದರ ವಿಶೇಷ?
ಮೈಸೂರು, ಏಪ್ರಿಲ್ 01: ಇತ್ತೀಚೆಗಿನ ವರ್ಷಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿರುವ ಕಾರಣದಿಂದಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಹೀಗಾಗಿ ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತಿವೆ. ಬಹಳಷ್ಟು ಜನರು ತಾವಿರುವ ಸ್ಥಳಗಳಲ್ಲೇ ಅದರಲ್ಲೂ ತಮ್ಮ ಊರಿನ ಮುಖ್ಯ ರಸ್ತೆ ಬದಿಯಲ್ಲಿಯೇ ವ್ಯಾಪಾರ ಆರಂಭಿಸಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ಊರುಗಳ ಪೈಕಿ ಮೈಸೂರು ಹೊರವಲಯದಲ್ಲಿರುವ ಚಿಕ್ಕಕಡ್ನಳ್ಳಿಯೂ ಒಂದಾಗಿದೆ.
ಇಲ್ಲಿನ ರಾಜ್ಯ ಹೆದ್ದಾರಿ ಬದಿಯಲ್ಲಿ ನಡೆಯುವ ಹಣ್ಣಿನ ವ್ಯಾಪಾರವು ಬೇರೆಲ್ಲೂ ನೋಡಲು ಸಿಗದ ಹಣ್ಣಿನ ಸಂತೆಯಾಗಿದ್ದು, ಇದೊಂದು ರೀತಿಯಲ್ಲಿ ದಿನನಿತ್ಯದ ಮಾವುಮೇಳ ಎಂದರೂ ತಪ್ಪಾಗಲಾರದು. ಮೈಸೂರಿನಿಂದ ಹುಣಸೂರು ಅಥವಾ ಕೆ.ಆರ್.ನಗರ ಕಡೆಗೆ ಹೊರಟವರಿಗೆ ಇಲವಾಲದಿಂದ ಮುಂದಕ್ಕೆ ತೆರಳಿದರೆ ರಸ್ತೆಯುದ್ದಕ್ಕೂ ತಳ್ಳು ಗಾಡಿಗಳಲ್ಲಿ ಅಚ್ಚು ಕಟ್ಟಾಗಿ ಗೋಪುರ ಮಾದರಿಯಲ್ಲಿ ಜೋಡಿಸಿಟ್ಟ ಮಾವಿನ ಹಣ್ಣುಗಳು ಸೇರಿದಂತೆ ಹಲವು ಬಗೆಯ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ದೃಶ್ಯಗಳು ಗೋಚರಿಸುತ್ತವೆ.

ಹೊಸದಾಗಿ ನೋಡುವವರಿಗೆ ಇದೊಂಥರಾ ಅಚ್ಚರಿ ಮೂಡಿಸುತ್ತದೆ. ಆದರೆ ಮಾವಿನ ಹಣ್ಣಿನ ಕಾಲದಲ್ಲಿ ವ್ಯಾಪಾರದ ಭರಾಟೆ ಜೋರಾಗಿ ಇರುತ್ತದೆಯಾದರೂ ನಂತರದ ದಿನಗಳಲ್ಲಿ ಕೆಲವೇ ಕೆಲವರು ಮಾತ್ರ ಸೀಬೆ, ಸೇಬು, ಚಕ್ಕೋತ, ಮೂಸಂಬಿ, ಕಿತ್ತಳೆ ಮೊದಲಾದವುಗಳನ್ನು ಮಾರಾಟ ಮಾಡುತ್ತಾರೆ. ಆದರೀಗ ಮಾವಿನ ಹಣ್ಣಿನ ಕಾಲವಾಗಿರುವುದರಿಂದ ತರಾವರಿ ಹಣ್ಣುಗಳನ್ನು ಇಲ್ಲಿ ವ್ಯಾಪಾರ ಮಾಡುತ್ತಾರೆ.
ಚಿಕ್ಕಕಡ್ನಳ್ಳಿಯಲ್ಲಿ ಹಣ್ಣಿನ ಮಾರಾಟ ಆರಂಭ ಯಾವಾಗ?
ಸಾಮಾನ್ಯವಾಗಿ ಮೈಸೂರಿನಿಂದ ಕೊಡಗು, ಮಂಗಳೂರು, ಹಾಸನ, ಚಿಕ್ಕಮಗಳೂರು ಮೊದಲಾದ ಕಡೆಗೆ ತೆರಳುವವರು ರಾಜ್ಯ ಹೆದ್ದಾರಿ 88ರಲ್ಲಿಯೇ ಹಾದು ಹೋಗಬೇಕಾಗಿರುವುದರಿಂದ ಮತ್ತು ಕೊಡಗು, ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಈ ಮೂಲಕವೇ ಪ್ರವಾಸಿಗರು ಹಾದು ಹೋಗುವುದರಿಂದ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಮಾವಿನ ಹಣ್ಣುಗಳನ್ನು ಖರೀದಿಸುತ್ತಾರೆ. ಹೀಗಾಗಿ ವ್ಯಾಪಾರ ವಹಿವಾಟುಗಳು ಜೋರಾಗಿಯೇ ನಡೆಯುತ್ತವೆ.
ಚಿಕ್ಕಕಡ್ನಳ್ಳಿಯಲ್ಲಿ ನಡೆಯುತ್ತಿಯವ ಮಾವಿನಹಣ್ಣಿನ ಮಾರಾಟವು ಇಂದು ನಿನ್ನೆಯದಲ್ಲ. ಇಲ್ಲಿನ ವ್ಯಾಪಾರ ವಹಿವಾಟಿಗೆ ಹಲವು ದಶಕಗಳ ಇತಿಹಾಸವಿದೆ. ಹಳ್ಳಿಯ ಸುತ್ತಮುತ್ತಲಿನ ನಾಗವಾಲ, ಕಾಮನಕೊಪ್ಪಲು, ಸೀಗಳ್ಳಿ, ಮಾರಗೌಡನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಹೇರಳವಾಗಿ ಮಾವಿನಹಣ್ಣನ್ನು ಬೆಳೆಯುತ್ತಾರೆ.

ಮೊದಲೆಲ್ಲಾ ಕೆಲವೇ ಜಾತಿಯ ಹಣ್ಣನ್ನು ಬೆಳೆಯುತ್ತಿದ್ದರಾದರೂ ಇತ್ತೀಚೆಗೆ ಸ್ಥಳೀಯ ಬೆಳೆಗಾರರು ಮಾವಿನ ಕೃಷಿಯನ್ನು ಅಭಿವೃದ್ಧಿಗೊಳಿಸಿದ್ದು ಅಲ್ಫೆನ್ಸೊ, ಬಾದಾಮಿ, ರಾಜಗಿರಿ, ಮಲ್ಲಿಕಾ, ರಸಪುರಿ, ನೀಲಂ ಮತ್ತು ತೋತಾಪುರಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ ಹಾಗೆಂದು ಅಲ್ಲಿಂದಲೇ ಹಣ್ಣುಗಳು ಮಾರಾಟಕ್ಕೆ ಬರುತ್ತಿವೆ ಎಂದರೆ ತಪ್ಪಾಗುತ್ತದೆ.
ಇಲ್ಲಿ ಮಾವಿನ ಹಣ್ಣಿನ ವ್ಯಾಪಾರ ಹೇಗೆ ಶುರುವಾಯಿತು ಎಂಬುದನ್ನು ನೋಡಿದ್ದೇ ಆದರೆ ಕೆಲವು ವರ್ಷಗಳ ಹಿಂದೆ ತಾವು ಬೆಳೆದ ಹಣ್ಣನ್ನು ದೂರದ ಮೈಸೂರಿಗೆ ಒಯ್ದು ಮಾರಾಟ ಮಾಡಲು ಸಾಧ್ಯವಾಗದ ಕೆಲವು ಬೆಳೆಗಾರರು ರಸ್ತೆಬದಿಯಲ್ಲಿರಿಸಿ ಮಾರಾಟ ಮಾಡಲು ಮುಂದಾದರು. ಮೈಸೂರಿನಿಂದ ಕೊಡಗು, ಹಾಸನ, ಮಂಗಳೂರಿನತ್ತ ತೆರಳುವ ಕೆಲವು ಪ್ರಯಾಣಿಕರು ತಮ್ಮ ವಾಹನವನ್ನು ನಿಲ್ಲಿಸಿ ಇಲ್ಲಿಂದ ಹಣ್ಣನ್ನು ಖರೀದಿಸುತ್ತಿದ್ದರು. ತೋಟದಿಂದ ನೇರವಾಗಿ ತಾಜಾ ಹಣ್ಣು ಗ್ರಾಹಕರ ಕೈಗೆ ಸೇರುತ್ತಿದ್ದುದರಿಂದ ದೂರದಿಂದ ಬರುತ್ತಿದ್ದ ಪ್ರವಾಸಿಗರು ಹಣ್ಣನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು.
ಮೈಸೂರಿನ ಮಾರುಕಟ್ಟೆಯಿಂದ ತಂದು ಮಾರಾಟ
ಯಾವಾಗ ಪ್ರವಾಸಿಗರು ಹಣ್ಣನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಪ್ರಾರಂಭಿಸಿದರೋ ಸುತ್ತಮುತ್ತಲಿನ ಇತರೆ ಯುವಕರು ಮಾವಿನಹಣ್ಣಿನ ಮಾರಾಟದತ್ತ ಒಲವು ತೋರಿಸತೊಡಗಿದರಲ್ಲದೆ, ಆ ಮೂಲಕ ಉದ್ಯೋಗದ ಹಾದಿಕಂಡು ಕೊಂಡರು. (ಇವತ್ತಿಗೂ ಸುತ್ತಮುತ್ತಲ ಹಳ್ಳಿಯ ಯುವಕರು ಮಾವಿನಹಣ್ಣಿನ ಮಾರಾಟವನ್ನು ಫಾರ್‌ಟೈಂ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ.) ದಿನಕಳೆದಂತೆ ಚಿಕ್ಕಕಡ್ನಳ್ಳಿಯಲ್ಲಿ ಮಾವಿನಹಣ್ಣಿನ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಎಂಬುವುದನ್ನು ಅರಿತ ಕೆಲವರು ತಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ತಂದು ಗಾಡಿಯಲ್ಲಿರಿಸಿ ಮಾರಾಟ ಮಾಡಿದರೆ, ಇನ್ನು ಕೆಲವರು ಮೈಸೂರಿನ ಮಾರುಕಟ್ಟೆಯಿಂದ ಖರೀದಿಸಿ ತಂದು ಇಲ್ಲಿ ಮಾರಾಟ ಮಾಡಲು ಮುಂದಾದರು.

ಈಗಂತೂ ಹಳ್ಳಿಗಳಿಂದ ತಂದು ಮಾರಾಟ ಮಾಡುವವರಿಗಿಂತ ಮೈಸೂರಿನ ಮಾರುಕಟ್ಟೆಯಿಂದ ತಂದು ಮಾರಾಟ ಮಾಡುವವರೇ ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣ ಈ ಹಳ್ಳಿಯ ವ್ಯಾಪ್ತಿಯಲ್ಲಿ ಹಲವು ಏಕರೆ ಪ್ರದೇಶದಲ್ಲಿ ಮಾವಿನಹಣ್ಣನ್ನು ಬೆಳೆಯುವ ಬೆಳೆಗಾರರಿದ್ದಾರೆ. ಆದರೆ ಅವರು ಯಾರು ಇಲ್ಲಿನ ಮಾವಿನಸಂತೆಗೆ ಹಣ್ಣನ್ನು ಕಳುಹಿಸುತ್ತಿಲ್ಲ. ಬಹುತೇಕ ಬೆಳೆಗಾರರು ತಮ್ಮ ತೋಟದ ಫಸಲನ್ನು ಮೈಸೂರಿನ ಮಾರುಕಟ್ಟೆಯ ವ್ಯಾಪಾರಿಗಳಿಗೆ ನೀಡಿ ಹಣ ಪಡೆಯುತ್ತಾರೆ. ಹಾಗಾಗಿ ಚಿಕ್ಕಕಡ್ನಳ್ಳಿಯಲ್ಲಿ ದೊರೆಯುವ ಮಾವಿನಹಣ್ಣನ್ನು ಮೈಸೂರಿನ ಮಾರುಕಟ್ಟೆಯಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿರುವುದಾಗಿ ಕೆಲವು ವ್ಯಾಪಾರಿಗಳು ಹೇಳುತ್ತಾರೆ.
ಗಮನಾರ್ಹ ಮಾವಿನ ಹಣ್ಣಿನ ವ್ಯಾಪಾರ
ಪ್ರತಿವರ್ಷವೂ ಫೆಬ್ರವರಿಯಿಂದ ಆರಂಭವಾಗುವ ಮಾವಿನಸಂತೆ ಆಗಸ್ಟ್ ವರೆಗೆ ನಡೆಯುತ್ತದೆ. ಮಾವಿನಹಣ್ಣಿನ ಕಾಲ ಮುಗಿದ ಬಳಿಕ ಮಾರಾಟಗಾರರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇನ್ನು ಇಲ್ಲಿ ಸಾಲಾಗಿ ನಡೆಯುವ ಮಾವಿನ ಹಣ್ಣಿನ ವ್ಯಾಪಾರ ನೋಡುಗರ ಗಮನಸೆಳೆಯುತ್ತಿದ್ದು, ಇದನ್ನು ಹತ್ತಿರದಿಂದ ನೋಡಿದ ಸಿನಿಮಾ ನಿರ್ಮಾಪಕರು ಚಿತ್ರೀಕರಣವನ್ನು ಕೂಡ ಮಾಡಿದ್ದಾರೆ. ಮೈಸೂರು ನಗರದಲ್ಲಿ ಮಾವಿನ ಹಣ್ಣಿನ ವ್ಯಾಪಾರ ನಡೆಯುತ್ತದೆಯಾದರೂ ಚಿಕ್ಕಕಡ್ನಳ್ಳಿಯಲ್ಲಿ ನಡೆಯುವ ಮಾವಿನಹಣ್ಣಿನ ವ್ಯಾಪಾರ ಗಮನಾರ್ಹವಾಗಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ.
ಇದೊಂದು ರೀತಿಯ ನಿತ್ಯ ಮಾವಿನ ಮೇಳವಾಗಿದ್ದು, ದಾರಿಯಲ್ಲಿ ಸಾಗುವ ಪ್ರಯಾಣಿಕರೇ ಗ್ರಾಹಕರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಷ್ಟಕ್ಕೂ ಮಾವಿನಹಣ್ಣಿನ ವ್ಯಾಪಾರ ನಡೆಯುವ ಚಿಕ್ಕಕಡ್ನಳ್ಳಿಯು ಮೈಸೂರು ನಗರದಿಂದ ಸುಮಾರು 20 ಕಿ.ಮೀ.ದೂರದಲ್ಲಿದ್ದು, ಮೈಸೂರು ಹುಣಸೂರು ರಾಜ್ಯ ಹೆದ್ದಾರಿಯಲ್ಲಿದೆ. ಈ ಸಮಯದಲ್ಲಿ ಮಾವಿನ ಹಣ್ಣಿನ ವ್ಯಾಪಾರ, ವಹಿವಾಟುಗಳನ್ನು ನೋಡುವುದೇ ಒಂಥರಾ ಖುಷಿ ಕೊಡುತ್ತದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications