ಸಿಎಂ ಸಿದ್ದರಾಮಯ್ಯಗೆ ಡಿ.ಮಾದೇಗೌಡ ಬಹಿರಂಗ ಪತ್ರ: ಅದರಲ್ಲೇನಿದೆ ತಿಳಿಯಿರಿ
ಮೈಸೂರು, ಆಗಸ್ಟ್, 23: ಮುಡಾ ಹಗರಣ ಕುರಿತು ಇತ್ತೀಚೆಗೆ ಪ್ರತಿಪಕ್ಷಗಳಿಂದ ನಡೆದ ರಾಜಕೀಯ ಬೆಳವಣಿಗೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ನೀವೇ ಹೇಳಿದಂತೆ ಇದು ನಿಮ್ಮ ಕೊನೇ ಅಧಿಕಾರವಧಿ. ಅಧಿಕಾರದಲ್ಲಿದ್ದಾಗಲಾದರೂ ಜನರು ನಿಮ್ಮನ್ನು ಶಾಶ್ವತವಾಗಿ ನೆನೆಯುವ ಕೆಲಸ ಮಾಡಿ ಎಂದು ಮೈಸೂರು ನಗರ ವಿಶ್ವಸ್ಥ ಮಂಡಳಿ ಮಾಜಿ ಅಧ್ಯಕ್ಷ ಡಿ.ಮಾದೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದಿದ್ದಾರೆ.
"ಮುಡಾ ಶುದ್ಧೀಕರಣಕ್ಕಾಗಿ ಅಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ಬಯಲಿಗೆ ತರಲು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರಂತಹ ದಕ್ಷ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ. ಶೇ.50:50 ಅನುಪಾತದ ಯೋಜನೆಯಡಿ ಕಬಳಿಸಿರುವ ನಿವೇಶನಗಳನ್ನು ವಾಪಸ್ ಪಡೆಯಿರಿ. ಭೂಗಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ," ಎಂದು ಸಲಹೆ ನೀಡಿದ್ದಾರೆ. ಇನ್ನು ಮುಡಾ ಹಗರಣಗಳನ್ನು ತೊಡೆದು ಹಾಕಿ, ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳನ್ನೂ ಜನಸ್ನೇಹಿಯಾಗಿ ಬೆಳೆಸುವಂತಹ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತನ್ನಿ ಎಂದು ತಿಳಿಸಿದ್ದಾರೆ.

ನಿಮ್ಮ ಪತ್ನಿ ಪಾರ್ವತಿ ಹೆಸರು ಮುಡಾ ಪ್ರಕರಣದಲ್ಲಿ ಬಂದಿರುವುದಕ್ಕೆ ಬೇಸರವಾಗುತ್ತಿದೆ. ಅಂಥವರಿಗೆ ನೀವು ಮುಡಾ ಕಳಂಕ ಹಚ್ಚಿದಿರಲ್ಲಾ ಇದು ಸರಿಯೇ? ನಿಮಗೆ ನಿಮ್ಮ ಪತ್ನಿ ಮೇಲೆ ಕಾಳಜಿ ಇದ್ದಿದ್ದರೆ, ಆ 14 ಮುಡಾ ನಿವೇಶನಗಳನ್ನು ಹಿಂತಿರುಗಿಸಿ ಆರೋಪ ಮುಕ್ತರಾಗುತ್ತಿದ್ದಿರಿ. ಆಗ ರಾಜ್ಯಪಾಲರು ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ ಎಂದಿದ್ದಾರೆ.
ಮುಡಾ ಹಗರಣ ಕುರಿತು ಇತ್ತೀಚೆಗೆ ಪ್ರತಿಪಕ್ಷಗಳಿಂದ ನಡೆದ ರಾಜಕೀಯ ಬೆಳವಣಿಗೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ನೀವೇ ಹೇಳಿದಂತೆ ಇದು ನಿಮ್ಮ ಕೊನೆ ಅಧಿಕಾರವಧಿ. ನಿಮ್ಮ ಕೊನೆ ಅಧಿಕಾರದಲ್ಲಾದರೂ ಜನರು ನಿಮ್ಮನ್ನು ಶಾಶ್ವತವಾಗಿ ನೆನೆಯುವ ಕೆಲಸ ಮಾಡಿ. ಬಹು ಮುಖ್ಯವಾಗಿ ನಿಮ್ಮ ಹೆಸರಿಗೆ ಕಳಂಕ ಅಂಟಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕೊಳೆ ತೊಳೆಯುವ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ.
"ಸಿಐಟಿಬಿ ಅಧ್ಯಕ್ಷನಾಗಿದ್ದಾಗ 'ಆಶಾಮಂದಿರ' ಯೋಜನೆಯಡಿ 38,000ಕ್ಕೂ ಹೆಚ್ಚು ನಿವೇಶನ ಮತ್ತು ಮನೆ ನೀಡಿದೆ. 1987-88ರ ಸಾಲಿನಲ್ಲಿ ಕೇವಲ 1,600 ರೂಪಾಯಿಗೆ 20*30 ಅಡಿಯ 20,000ಕ್ಕೂ ಹೆಚ್ಚು ನಿವೇಶನವನ್ನು ಬಡವರಿಗೆ ಹಂಚಿದ್ದೆ. ರೈತರಿಗೆ ಅನ್ಯಾಯವಾಗದಂತೆ ಮತ್ತು ಜನರಿಗೆ ನಿವೇಶನ ಖರೀದಿಸಲು ಕಷ್ಟವಾಗದಂತೆ ಹಾಗೂ ನಗರಾಭಿವೃದ್ಧಿಗೂ ನಷ್ಟವಾಗದಂತೆ ನಿಯಮ ರೂಪಿಸಲಾಗಿತ್ತು. ಜನತಾ ಸರ್ಕಾರ ಬಿದ್ದುಹೋಗಿದ್ದರಿಂದ 'ಆಶಾಮಂದಿರ' ಯೋಜನೆ ರಾಜ್ಯಾದ್ಯಂತ ವಿಸ್ತರಿಸಲು ಸಾಧ್ಯವಾಗಲಿಲ್ಲ. ಇಂತಹ ಜನಪರ ಯೋಜನೆ ಕಳೆದ 36 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದನ್ನು ಮಾದರಿಯಾಗಿ ಸ್ವೀಕರಿಸಿ ಯೋಜನೆ ರೂಪಿಸಿ," ಎಂದು ಹೇಳಿದ್ದಾರೆ.












Click it and Unblock the Notifications