ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯ್ತು ಮೈಸೂರಿನಲ್ಲಿ ಕ್ರೈಂ ರೇಟ್!

By Yashaswini
|
Google Oneindia Kannada News

ಮೈಸೂರು, ಜನವರಿ 02: ನಗರದಲ್ಲಿ ಅಪರಾಧ ಪ್ರಮಾಣ ಶೇ. 15 ರಷ್ಟು ಇಳಿಕೆಯಾಗಿದೆ. 2017ನೇ ವರ್ಷದಲ್ಲಿ ಮೈಸೂರು ನಗರ ಪೊಲೀಸರು ಅಪರಾಧ ತಡೆ ಮತ್ತು ಪತ್ತೆಗಾಗಿ ಹಾಗೂ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಗಾಗಿ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಮೈಸೂರು ಪೊಲೀಸರು ಮೂಲಕ 2016ನೇ ಸಾಲಿಗಿಂತ 2017ನೇ ಸಾಲಿನಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ರೈಂ ರೇಟ್: ಬೆಂಗಳೂರಿಗೆ ಮೂರನೇ ಸ್ಥಾನ, ಆದರೂ ಹೆಣ್ಮಕ್ಕಳು ಸೇಫಂತೆಕ್ರೈಂ ರೇಟ್: ಬೆಂಗಳೂರಿಗೆ ಮೂರನೇ ಸ್ಥಾನ, ಆದರೂ ಹೆಣ್ಮಕ್ಕಳು ಸೇಫಂತೆ

ನ್ಯೂ ಬೀಟ್ ಸಿಸ್ಟಂ, ಕಟ್ಟುನಿಟ್ಟಿನ ರಾತ್ರಿ ಗಸ್ತು ವ್ಯವಸ್ಥೆ, ದಿನದ 24 ಗಂಟೆಗಳ ಗಸ್ತಿಗಾಗಿ ಗರುಡ, ಚೀತಾ , ಕೋಬ್ರ, ವನಿತಾ ಸಹಾಯವಾಣಿ, ಇಂಟರ್ ಸೆಪ್ಟರ್ ವಾಹನಗಳ ನಿಯೋಜನೆ, ಗುಡ್‌ ಮಾರ್ನಿಂಗ್‌ ಬೀಟ್‌, ಅಪರೇಷನ್ ಚೀತಾ, ರೌಡಿವಿರೋಧಿ ಸ್ಕ್ವಾಡ್, ಭದ್ರತಾ ಪ್ರಕರಣಗಳ ಹೂಡಿಕೆ, ಅನಿರೀಕ್ಷಿತ ರೌಡಿ ಮತ್ತು ಎಂ.ಒ.ಬಿ. ಪೆರೇಡ್ ಮುಂತಾದ ಕ್ರಮಗಳ ಮೂಲಕ ನಗರದಲ್ಲಿ 2016 ನೇ ಸಾಲಿಗಿಂತ 2017 ರಲ್ಲಿ ಒಟ್ಟು 15 % ಅಪರಾಧ ಪ್ರಕರಣಗಳನ್ನು ಇಳಿಮುಖಗೊಳಿಸಲಾಗಿದೆ ಎನ್ನುತ್ತಾರೆ ನಗರ ಪೊಲೀಸ್‌ ಆಯುಕ್ತ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್‌.

Crime rates in Mysuru decreases by 15% in Mysuru in 2017

ಮೈಸೂರು ನಗರದಲ್ಲಿ ಗುಡ್ ಮಾರ್ನಿಂಗ್‌ ಬೀಟ್‌, ಗುಡ್‌ ಇವಿನಿಂಗ್ ಬೀಟ್‌, ಅಪರೇಷನ್ ಫಾಸ್ಟ್‌ ಟ್ರಾಕ್‌, 24*7 ಪೊಲೀಸ್‌ ವಾಹನಗಳ ಗಸ್ತು ವ್ಯವಸ್ಥೆ, ಅನಿರೀಕ್ಷಿತ ಎಂ.ಒ.ಬಿ. (ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವರು) ಪೆರೇಡ್ ಗಳನ್ನು ಮಾಡಿರುವುದರಿಂದ 2016ನೇ ಸಾಲಿಗಿಂತ 2017ನೇ ಸಾಲಿನಲ್ಲಿ ಸರಗಳ್ಳತನ ಪ್ರಕರಣಗಳಲ್ಲಿ ಶೇ.53 ರಷ್ಟು ಪ್ರಕರಣಗಳು ಇಳಿಮುಖವಾಗಿವೆ.

ಅಪರಾಧ ನಿಯಂತ್ರಣಕ್ಕಾಗಿ ರೌಡಿ ಆಸಾಮಿಗಳು, ಎಂ.ಒ.ಬಿ. ಆಸಾಮಿಗಳು ಮತ್ತು ಇತರೇ ಸಮಾಜಘಾತಕ ವ್ಯಕ್ತಿಗಳ ವಿರುದ್ಧ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತಾ ಪ್ರಕರಣಗಳನ್ನು ಇಲಾಖೆಯಿಂದ ಹೂಡಲಾಗುತ್ತದೆ. ಕಳೆದ ಸಾಲಿಗಿಂತ ಈ ಬಾರಿ ಇಂತಹ ಪ್ರಕರಣಗಳನ್ನು ಶೇ. 45 ರಷ್ಟು ಹೆಚ್ಚು ಹೂಡಲಾಗಿದೆ.

ಹುಬ್ಬಳ್ಳಿ- ಧಾರವಾಡದಲ್ಲಿ ಹೆಚ್ಚುತ್ತಿರುವ ಅಪರಾಧ: ಜನರಲ್ಲಿ ಆತಂಕ ಹುಬ್ಬಳ್ಳಿ- ಧಾರವಾಡದಲ್ಲಿ ಹೆಚ್ಚುತ್ತಿರುವ ಅಪರಾಧ: ಜನರಲ್ಲಿ ಆತಂಕ

ಸಂಚಾರ ಅರಿವು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಆಪರೇಷನ್‌ ಚೀತಾ ಮೂಲಕ ಅಪಘಾತಗಳ ಪ್ರಮಾಣ ಇಳಿಮುಖಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಹಿಂದಿನ ವರ್ಷಕ್ಕಿಂತ ಈ ಬಾರಿ ಅಪಘಾತ ಪ್ರಮಾಣ ಕಡಿಮೆಯಾಗಿದೆ.
ದಂಡ ವಸೂಲಿ: ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ 2 ಕೋಟಿ ರೂ. ಮೌಲ್ಯದ ಸ್ವತ್ತುಗಳ ವಶಪಡಿಸಿಕೊಂಡಿದ್ದಲ್ಲದೇ, ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ 8.5 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಕಳೆದ 2016 ಸಾಲಿಗಿಂತ 1.2 ಕೋಟಿ ರೂ. ಹೆಚ್ಚಿಗೆ ದಂಡ ಸಂಗ್ರಹವಾಗಿದೆ.

English summary
Crime Rates in palace city is drastically decreased by 15 % in 2017. Many programmes to implement security by Mysuru city police and strict actions against criminals brought good results. Mysuru city police commissioner Dr.A Subrahmanyeshwar Rao praises achievement of Mysuru city police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X