ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ವೃದ್ಧನಿಗೆ ಕೊರೊನಾ: ವಾರ್ಡ್ ನಂ 40 ಸೀಲ್ ಡೌನ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 16: ಮೈಸೂರು ನಗರದ ವೃದ್ಧರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ವೃದ್ಧನ ಮನೆ ವ್ಯಾಪ್ತಿಯ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಬ್ಯಾರಿಕ್ಯಾಡ್ ಗಳನ್ನು ಹಾಕಿ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ. ನಜರ್ ಬಾದ್ ನ ವಾರ್ಡ್ ನಂಬರ್ 40 ರಲ್ಲಿ ಈ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾದ ವೃದ್ಧ ಅಲ್ಲಿ ವಾಸವಿದ್ದರು.

ಕೊರೊನಾ ಪಾಸಿಟಿವ್ ಪತ್ತೆ ಹಿನ್ನೆಲೆಯಲ್ಲಿ ವೃದ್ಧ ವಾಸವಿದ್ದ ಮನೆ ಸೇರಿದಂತೆ ಅಕ್ಕಪಕ್ಕದ ಮನೆಗಳಿಗೂ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ. ನಜರ್ ಬಾದ್ ವಾರ್ಡ್ ಪಾಲಿಕೆ ಸದಸ್ಯ ಸತೀಶ್ ನೇತೃತ್ವದಲ್ಲಿ ವಾರ್ಡ್ ಪೂರ್ತಿ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ. ವೃದ್ಧನ ಟ್ರಾವೆಲ್ ಹಿಸ್ಟರಿ ಪತ್ತೆಗೆ ಮಾಹಿತಿ ಕಲೆ ಹಾಕುತ್ತಿದ್ದು, ಲಭ್ಯವಾಗುತ್ತಿಲ್ಲ ಎನ್ನಲಾಗಿದೆ.

Coronavirus Infected For The Old Man In Mysuru

ಕೊರೊನಾ ಪಾಸಿಟಿವ್ ವೃದ್ಧ ಯಾವುದೇ ವಿದೇಶದಿಂದ ಬಂದವರ ಸಂಪರ್ಕ, ಜ್ಯುಬಿಲಿಯೆಂಟ್ ಕಾರ್ಮಿಕರ ಸಂಪರ್ಕ್, ತಬ್ಲಿಘ್ ಗಳ ಸಂಪರ್ಕದಲ್ಲಿ ಇರಲಿಲ್ಲ ಎನ್ನಲಾಗಿದೆ. ಆದರೂ ವೃದ್ಧನಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಮೈಸೂರಿಗರಲ್ಲಿ ಕೊರೊನಾ ಆತಂಕ ಹೆಚ್ಚಾಗಿದ್ದು, ಅಷ್ಟೇ ಅಲ್ಲದೇ ವೃದ್ಧ ಜ್ವರವೆಂದು ಮೊದಲು ಚಿಕಿತ್ಸೆ ಪಡೆದಿದ್ದ ಮಹದೇಶ್ವರ ನರ್ಸಿಂಗ್ ಹೋಂ ನ್ನು ಕೂಡ ಬಂದ್ ಮಾಡಿಸಲಾಗಿದ್ದು, ಆಸ್ಪತ್ರೆಯ ಸಿಬ್ಬಂದಿಗಳನ್ನು ಕ್ವಾರೆಂಟೈನ್ ನಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.

English summary
In the wake of the Corona Positive Detection in Mysuru, neighboring homes, including the old man home, have been sterilized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X