ಮಹಾರಾಜರ ಪಟ್ಟಾಭಿಷೇಕಕ್ಕೆ ಬಂದಿದ್ದ ಗಣ್ಯರು ಹೇಳಿದ್ದೇನು?

ಮೈಸೂರು, ಮೇ 28 : ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಹಬ್ಬದ ಸಂಭ್ರಮ. ಶುಭ ಕರ್ಕಾಟಕ ಲಗ್ನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪಟ್ಟಾಭಿಷೇಕ ಗುರುವಾರ ನಡೆದಿದೆ. ಸಾವಿರಾರು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. [ಪಟ್ಟಾಭಿಷೇಕದ ಚಿತ್ರಗಳು]

ಯದುವೀರ ಒಡೆಯರ್‌ ಪಟ್ಟಾಭಿಷೇಕಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವರಾದ ಡಿಕೆ.ಶಿವಕುಮಾರ್, ರೋಷನ್ ಬೇಗ್, ದೇಶಪಾಂಡೆ, ಶ್ರೀನಿವಾಸ್ ಪ್ರಸಾದ್, ಕೆ.ಜೆ ಜಾರ್ಜ್ ಮುಂತಾದವರು ಆಗಮಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರಂಭಕ್ಕೆ ಆಗಮಿಸಲು ಸಾಧ್ಯವಿಲ್ಲ ಎಂದು ಅರಮನೆಗೆ ಮೊದಲೇ ಮಾಹಿತಿ ನೀಡಿದ್ದರು. [ಪಟ್ಟಾಭಿಷೇಕದ ಕ್ಷಣ-ಕ್ಷಣದ ಮಾಹಿತಿ]

DK Shivakumar

ಸಮಾರಂಭಕ್ಕೆ ಬಂದವರು ಹೇಳಿದ್ದೇನು?

ಎಚ್.ಡಿ. ದೇವೇಗೌಡ : 'ಜಯಚಾಮರಾಜೇಂದ್ರ ಒಡೆಯರ್ ಕಾಲದಿಂದಲೇ ರಾಜ ಪರಂಪರೆಯನ್ನು ನೋಡಿಕೊಂಡು ಬರುತ್ತಿದ್ದೇವೆ. ರಾಜ ಪರಂಪರೆ ಮೇಲೆ ನಮಗೆ ಸಾಕಷ್ಟು ಗೌರವವಿದೆ. ರಾಣಿ ಪ್ರಮೋದಾ ದೇವಿ ಅವರು ಆಹ್ವಾನ ನೀಡಿದ್ದರು. ಆದ್ದರಿಂದ ಯುವರಾಜನಿಗೆ ಶುಭಾಶಯ ಹೇಳಲು ಬಂದಿದ್ದೆ' ಎಂದು ದೇವೇಗೌಡರು ಹೇಳಿದರು. [ಯದು ವಂಶದ ಉತ್ತರಾಧಿಕಾರಿ ವಿವಾದದ ನೆನೆಪುಗಳು]

ಡಿ.ಕೆ.ಶಿವಕುಮಾರ್ : 'ರಾಜಮನೆತನದಿಂದ ರಾಜ್ಯಕ್ಕೆ ದೊಡ್ಡ ಸೇವೆ ಸಿಕ್ಕಿದೆ. ಅವರು ಜನರಿಗಾಗಿ, ಸಂಸ್ಕೃತಿ ಉಳಿವಿಗಾಗಿ ತಮ್ಮ ಆಸ್ತಿ-ಪಾಸ್ತಿ ದಾನ ಮಾಡಿದ್ದಾರೆ. ನಮ್ಮಿಂದ ರಾಜ ಮನೆತನಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹ, ಸಹಕಾರ ಸಿಗುತ್ತದೆ. ಯದುವೀರ್‍ ಪಟ್ಟಾಭಿಷೇಕದಿಂದ ಅರಮನೆಗೆ ಹೊಸ ಚಿಗುರು ಬಂದಂತಾಗಿದೆ'. ಎಂದು ತಿಳಿಸಿದರು.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]

ವಿ. ಶ್ರೀನಿವಾಸ್ ಪ್ರಸಾದ್ : 'ರಾಜ ಮಹಾರಾಜರು ರಾಜ್ಯದಲ್ಲಿ ಶೈಕ್ಷಣಿಕ, ನೀರಾವರಿ, ಆರ್ಥಿಕ, ಆಹಾರ ಕ್ಷೇತ್ರ ಸೇರಿ ಎಲ್ಲಾ ಕ್ಷೇತ್ರಗಳಿಗೂ ಒತ್ತು ಕೊಟ್ಟಿದ್ದರು. ಪ್ರಜಾಪ್ರಭುತ್ರ ಬಂದ ಮೇಲೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪಟ್ಟಕ್ಕೇರಿದ್ದರು. ಈಗ ಯದುವೀರ್ ಪಟ್ಟ ಅಲಂಕರಿಸಿದ್ದಾರೆ. ರಾಜ ಪರಂಪರೆಯನ್ನು ಉಳಿಸಿಕೊಂಡು ಹೋಗುವಂತಹ ಕಾರ್ಯ ಮಾಡಲಿ'.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+