ಬಣ್ಣದೋಕುಳಿಯಲ್ಲಿ ಮಿಂದೆದ್ದ ಅರಮನೆ ನಗರಿ ಮೈಸೂರು
ಮೈಸೂರು, ಮಾರ್ಚ್ 13: ಮರಗಿಡಗಳು ಚಿಗುರಿ ಕಂಪನ್ನು ಸೂಸಿ, ಮಾಮರದ ಹೂಗಳಲ್ಲಿ ದುಂಬಿಯ ಝೇಂಕಾರ ಅನುರಣಿಸಿ, ಕಾಯಿಗಳು ಮಂದಮಾರುತಕ್ಕೆ ತೊಯ್ದಾಡುವ ವಸಂತ ಋತು ಇನ್ನುಹದಿನೈದು ದಿನಕ್ಕೆಲ್ಲ ಆಗಮಿಸುತ್ತಿದೆ. ಪೌರ್ಣಿಮೆಯ ದಿನ ಮಹದೇವನ ಮೂರನೇ ನೇತ್ರದಿಂದ ಸುಟ್ಟು ಬೂದಿಯಾದ ಕಾಮದೇವ ಲೋಕಕಲ್ಯಾಣಕ್ಕಾಗಿ ಅನಂಗನಾದ ದಿನವೇ ಈ ಹೋಳಿ ಆಚರಣೆ.[ದೇಶದೆಲ್ಲೆಡೆ ಉಲ್ಲಾಸದ ಓಕುಳಿಯ ಚೆಲ್ಲಿದೆ ಹೋಳಿಯ ಬಣ್ಣ!]

ಉತ್ತರಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಈ ಹೋಳಿ ಆಚರಣೆ ಮಾರ್ಚ್ 12 ರಂದು ಮೈಸೂರಿನಾದ್ಯಂತ ಸಡಗರದಿಂದ ಆಚರಣೆಗೊಂಡಿತು. ದೇವಸ್ಥಾನಗಳಲ್ಲಿ ಪೂಜೆ- ಪುನಸ್ಕಾರ ಮಾಡುವ ಮೂಲಕ ಫಾಲ್ಗುಣ ಶುದ್ಧ ಪೌರ್ಣಿಮೆಯ ಹೋಳಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.[ಕನಸುಗಳಿಗೂ ಬಣ್ಣ ಹಚ್ಚುವ ಕಾಮನಹಬ್ಬ ಹೋಳಿ]

ಮೈಸೂರಿನ ವಿವಿಧ ಬಡಾವಣೆಗಳಲ್ಲಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಯುವ ಜನರು ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವ ಮೂಲಕ ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಸಡಗರ ಸಂಭ್ರಮದಿಂದ ಹೋಳಿಯನ್ನಾಚರಿಸಿದರು.











Click it and Unblock the Notifications