ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಮತ್ತೆ ಮುನ್ನೆಲೆಗೆ: ಸಿಎಂ ಹೇಳಿದ್ದು ಏನು?

ಬೆಂಗಳೂರು, ಅಕ್ಟೋಬರ್ 18: ಸಚಿವ ಡಿ.ಕೆ.ಶಿವಕುಮಾರ್‌ ಅವರು ಇಂದು ಗದಗದ ಕಾರ್ಯಕ್ರಮವೊಂದರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಹೇಳಿಕೆ ಕೊಟ್ಟದ್ದೇ ತಡ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಠಿಯಾಗಿದೆ.

ಕುಮಾರಸ್ವಾಮಿ ಅವರೂ ಸಹ ಈ ಬಗ್ಗೆ ಹೇಳಿಕೆ ನೀಡಿದ್ದು, ಮೈತ್ರಿ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದಲ್ಲಿ ಮೂಗು ತೂರಿಸಿ ಕಾಂಗ್ರೆಸ್‌ ಸರ್ಕಾರ ಅನುಭವಿಸಿದ ನಷ್ಟದ ಬಗ್ಗೆ ಅರಿವಿರುವ ಕುಮಾರಸ್ವಾಮಿ ಅವರು, ಈ ವಿವಾದದಿಂದ ಸಾಧ್ಯವಾದಷ್ಟೂ ದೂರವಿರಲು ನಿರ್ಧರಿಸಿದಂತಿದೆ.

coalition government did not took any decision about Lingyata religion: CM

ಧಾರ್ಮಿಕ ವಿಚಾರಗಳಲ್ಲಿನ ಸಮಸ್ಯೆಗಳಿಗೆ ಧಾರ್ಮಿಕ ಗುರುಗಳೇ ಪರಿಹಾರ ಕಂಡುಕೊಳ್ಳಬೇಕು. ಹಿಂದಿನ ಸರ್ಕಾರವು ಈ ವಿವಾದದಲ್ಲಿ ಇದೇ ತಂತ್ರ ಅನುಸರಿಸಿತ್ತು ಎಂದು ಅವರು ಹೇಳಿದರು.

ಈ ವಿವಾದದ ಕುರಿತು ಡಿ.ಕೆ.ಶಿವಕುಮಾರ್‌ ನೀಡಿರು ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ ಅವರು, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ತಿಳಿಯದು. ಅದೂ ಅಲ್ಲದೆ ಧಾರ್ಮಿಕ ವಿಷಯಗಳಲ್ಲಿ ವಿವಾದಗಳನ್ನು ಎಳೆದು ತರುವುದು ತರವಲ್ಲ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+