ನ. 24, 25ರಂದು ಯಡಿಯೂರಪ್ಪ ಮೈಸೂರು ಪ್ರವಾಸ

ಮೈಸೂರು, ನವೆಂಬರ್ 23: ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಎರಡು ದಿನದ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನವೆಂಬರ್ 24 ಮತ್ತು 25ರಂದು ಅವರು ಮೈಸೂರು ಪ್ರವಾಸದಲ್ಲಿರುತ್ತಾರೆ.

ಯಡಿಯೂರಪ್ಪ ಅವರು ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳವಾರ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ನವೆಂಬರ್ 24ರಂದು ಮಧ್ಯಾಹ್ನ 3.50ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ.

CM Yediyurappa Mysuru Tour On November 24 And 25

ಮಂಗಳವಾರ ಸಂಜೆ 5 ಗಂಟೆಗೆ ಮೈಸೂರು ನಗರದ ಪೊಲೀಸ್ ಆಯುಕ್ತರ ನೂತನ ಕಚೇರಿಯನ್ನು ಹಾಗೂ ಪೋಲೀಸ್ ಗೃಹ 2020 ಯೋಜನೆಯಡಿ ನಿರ್ಮಿಸಿರುವ 108 ವಸತಿ ಗೃಹಗಳನ್ನು ಮಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮಗಳ ವಿವರ

* ಮಂಗಳವಾರ ರಾತ್ರಿ 7 ಗಂಟೆಗೆ ಲಲಿತ ಮಹಲ್ ಪ್ಯಾಲೇಸ್‍ನಲ್ಲಿ ಶ್ರೀಮತಿ ಬಿ.ಎಸ್. ಸಂಧ್ಯಾರಾಣಿ ಮತ್ತು ಎಸ್.ಸಿ.ಅಶೋಕ್ ಅವರ ಪುತ್ರ ಅಜಯ್ ಎಸ್.ಎ. ಮತ್ತು ನಿಸರ್ಗ ಆರ್. ಇವರ ಆರತಕ್ಷತೆಯಲ್ಲಿ ಭಾಗಿ

* ಮೈಸೂರಿನಲ್ಲಿಯೇ ವಾಸ್ತವ್ಯ

* ಬುಧವಾರ ಬೆಳಗ್ಗೆ 9ಗಂಟೆಗೆ ಲಲಿತ ಮಹಲ್ ಪ್ಯಾಲೇಸ್‍ನಲ್ಲಿ ಶ್ರೀಮತಿ ಬಿ.ಎಸ್. ಸಂಧ್ಯಾರಾಣಿ ಮತ್ತು ಎಸ್.ಸಿ.ಅಶೋಕ್ ಅವರ ಪುತ್ರ ಅಜಯ್ ಎಸ್.ಎ. ಮತ್ತು ನಿಸರ್ಗ ಆರ್. ಇವರ ವಿವಾಹ ಮುಹೂರ್ತ ಸಮಾರಂಭದಲ್ಲಿ ಭಾಗಿ.

* ಬೆಳಗ್ಗೆ 10.30ಕ್ಕೆ ನಂಜನಗೂಡು ತಾಲೂಕಿನ ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ ನಂತರ ಗ್ರಾಮ ದೇವತೆ ದೊಡ್ಡಮ್ಮತಾಯಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆಯ ಉದ್ಘಾಟನೆ ಮಾಡುವರು. ಸುತ್ತೂರು ಮಠದ ಅತಿಥಿಗೃಹ ಹಾಗೂ ಇತರ ಕಾಮಗಾರಿಗಳಿಗೆ ಶಿಲನ್ಯಾಸ ಕಾರ್ಯಕ್ರಮದಲ್ಲಿ ಭಾಗಿ.

* ಮಧ್ಯಾಹ್ನ 12ಗಂಟೆಗೆ ಮುಡುಕುತೊರೆಯ ಶ್ರೀ ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಸಂಕೀರ್ಣದ ಪುನರ್ ನಿರ್ಮಾಣ ಶಂಕುಸ್ಥಾಪನೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಭಾಗಿ.

* ಡಿಸೆಂಬರ್ 14ರಂದು ತಲಕಾಡಿನಲ್ಲಿ ನಡೆಯಲಿರುವ ಪಂಚಲಿಂಗ ದರ್ಶನ ಆಚರಣೆ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪರಿವೀಕ್ಷಣಾ ಮಂದಿರದಲ್ಲಿ ಪೂರ್ವಭಾವಿ ಸಭೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+