ಮೈಸೂರಲ್ಲಿ ಸಿದ್ದರಾಮಯ್ಯಗೆ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ
ಮೈಸೂರು,ಮಾರ್ಚ್ 29 : ಸಿದ್ದರಾಮಯ್ಯ ಅವರು ಇಂದಿನಿಂದ ತಮ್ಮ ಸ್ವ ಜಿಲ್ಲೆ ಮೈಸೂರಿನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದು, ಮೊದಲ ದಿನ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಭರ್ಜರಿ ಸ್ವಾಗತ ದೊರೆತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ |ಚುನಾವಣೆಯ ಮುಖ್ಯ ದಿನಾಂಕಗಳು
ಮೊದಲ ದಿನದ ಚುನಾವಣಾ ಪ್ರಚಾರಕ್ಕೆ ಸಾಕ್ಷಿಯಾಗಿದ್ದು, ರಮ್ಮನಹಳ್ಳಿ. ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಸಿಎಂಗೆ ಇಂದು ಭರ್ಜರಿ ಹೂವಿನ ಮಳೆಗರೆದು, ಪಟಾಕಿ ಸಿಡಿಸಿ ಸ್ವಾಗತ ಕೋರಿದರು.
ರಾಮನಹಳ್ಳಿ ಗ್ರಾಮದಲ್ಲಿ ಭಾರೀ ಸಂಖ್ಯೆಯ ಸಾವಿರಾರು ಕಾರ್ಯಕರ್ತರು ಕಾಲ್ನಡಿಗೆಯ ಪ್ರಚಾರ ಮೆರವಣಿಗೆಯಲ್ಲಿ ಭಾಗಿಯಾದರು. ಕೆಲ ಅಭಿಮಾನಿಗಳು ಸಿದ್ದರಾಮಯ್ಯ ಅವರನ್ನು ಹೆಗಲ ಮೇಲೆ ಹೊತ್ತು ಸಾಗಿದರು. ಇದರ ಮಧ್ಯೆ ಭರ್ಜರಿ ಟೆಂಪಲ್ ರನ್ ನಡೆಸಿ ಮೂರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಹಣೆಗೆ ಆರತಿ ತಿಲಕ ಹಾಗೂ ಕುಂಕುಮ ಇಟ್ಟುಕೊಂಡು ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಅವರು, ಆರತಿ ತಟ್ಟೆಗೆ 500 ರೂ ಹಣ ಹಾಕಿದರು. ಈ ವೇಳೆ ಸಿಎಂ ಕೈಯಲ್ಲಿ ಸ್ಥಳೀಯರು ಬಲವಂತವಾಗಿ ಗಂಟೆ ಹೊಡೆಸಿದ್ದಾರೆ. ಗಂಟೆ ಹೊಡೆಯಲು ಹೋಗುವ ವೇಳೆ ಜಾರಿ ಬೀಳುವುದಕ್ಕಾದರು. ತಕ್ಷಣ ಸಿಎಂರನ್ನ ಅಲ್ಲಿದ್ದವರು ಹಿಡಿದುಕೊಂಡರು.












Click it and Unblock the Notifications