ರವಿ ಬೆಳಗೆರೆ ಬಂಧನದ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ: ಸಿದ್ದು
ಮೈಸೂರು, ಡಿಸೆಂಬರ್ 9: ಇಡೀ ದೇಶದ್ಯಾಂತ ಸುದ್ದಿ ಮಾಡಿದ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಹಾಯ್ ಬೆಂಗಳೂರ್ ಸಂಪಾದಕ- ಪತ್ರಕರ್ತ ರವಿ ಬೆಳಗೆರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ರವಿ ಬೆಳಗೆರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮೈಸೂರಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆ ಉತ್ತರಿಸಿದ ಸಿದ್ದರಾಮಯ್ಯ, " ರವಿ ಬೆಳಗೆರೆಯವರನ್ನು ಏತಕ್ಕಾಗಿ ಬಂಧಿಸಿದ್ದಾರೆಂದು ಗೊತ್ತಿಲ್ಲ. ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ" ಎಂದರು.

ರವಿ ಬೆಳಗೆರೆ ಬಂಧನದ ಬಗ್ಗೆ ಪೊಲೀಸರೊಂದಿಗೆ ಮಾತನಾಡಿಲ್ಲ ಮತ್ತು ಯಾವುದೇ ಚರ್ಚಿಸಿಲ್ಲ. ಏನೇ ಇದ್ದರೂ ಪೊಲೀಸರೂ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಪ್ ಶೂಟರ್ ತಾಹೀರ್ ಹುಸೇನ್ ಅಲಿಯಾಸ್ ಅನೂಪ್ ಗೌಡ ಎಂಬಾತನನ್ನು ಹೊಸೂರಿನ ಲಾಡ್ಜಿನಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ವೆಪನ್ ಡೀಲರ್ ವಿಜಯಪುರದ ಚಡಚಣದ ಶಶಿಧರ ಮುಂಡೆವಾಡಗಿ ಎನ್ನುವಾತ ಹೇಸರು ಹೇಳಿದ್ದ.
ಬಳಿಕ ಶಶಿಧರ ಮುಂಡೆವಾಡಗಿ ಎಂಬಾತನನ್ನು ಡಿಸೆಂಬರ್ 07ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆತ ರವಿ ಬೆಳಗೆರೆ ಅವರು ಸುಪಾರಿ ನೀಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಯಲ್ಲಿ ರವಿ ಬೆಳಗೆರೆಯವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications