ಅಕ್ಕನ ಸಾವಿಗೆ ಕಂಬನಿ ಮಿಡಿದ ಸಿದ್ದರಾಮಯ್ಯ

ಮೈಸೂರು, ಅಕ್ಟೋಬರ್ 7: ಅನಾರೋಗ್ಯದ ಕಾರಣ ಕಳೆದ ರಾತ್ರಿ ನಿಧನರಾದ ಸಹೋದರಿ ಚಿಕ್ಕಮ್ಮ(90)ರ ಅಂತಿಮ ದರ್ಶನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಸಹೋದರರಾದ ಸಿದ್ದೇಗೌಡ, ರಾಮೇಗೌಡ ಹಾಗೂ ಖುದ್ದು ಸಿದ್ದರಾಮಯ್ಯ, ಹಾಗೂ ಕೆಲವು ಕಾಂಗ್ರೆಸ್ ಮುಖಂಡರು ಇಂದು ದೇವೇಗೌಡನಹುಂಡಿಗೆ ಆಗಮಿಸಿದ್ದರು.

ಇನ್ನು ಸಹೋದರಿ ಚಿಕ್ಕಮ್ಮ ಸಾವನ್ನಪ್ಪಿರುವುದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ನಮ್ಮದು ಅವಿಭಕ್ತ ಕುಟುಂಬವಾಗಿತ್ತು. ನಮ್ಮಕ್ಕ ಮದುವೆಯಾದ ಬಳಿಕವೂ ಅವರ ಮಕ್ಕಳೆಲ್ಲಾ ದೊಡ್ಡವರಾಗುವವರೆಗೆ ನಮ್ಮ ಕುಟುಂಬ ಸದಸ್ಯರ ಜೊತೆಯೇ ವಾಸಿಸುತ್ತಿದ್ದರು. ಇತ್ತೀಚೆಗೆ ಅವರು ಆಸ್ಪತ್ರೆಗೆ ದಾಖಲಾದ ಬಳಿಕ ನಾನು ಅವರನ್ನು ಕಡೆಯ ಬಾರಿ ಭೇಟಿಯಾಗಿದ್ದೆ ಎಂದು ಭಾವುಕರಾದರು.

CM Siddaramaiah participates in his sister's last rites in Mysore

ದೇವೆಗೌಡನ ಹಳ್ಳಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಮಾಧ್ಯಮಗಳೊಂದಿಗೆ ಸಿಎಂ ಸಿದ್ದರಾಮಯ್ಯನವರ ಸೋದರಳಿಯ(ಚಿಕ್ಕಮ್ಮನವರ ಮಗ) ನಾಗರಾಜು ಮಾತನಾಡಿ ಕಳೆದ ತಿಂಗಳು ಮಾವ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಮ್ಮ ತಾಯಿ ಕೈ ಕೈ ಹಿಡಿದು ಕಣ್ಣೀರು ಹಾಕಿದ್ದರು. ಬಾಲ್ಯದ ನೆನಪು ನೆನೆದು ಭಾವುಕರಾಗಿದ್ದರು ಎಂದು ಅಕ್ಕ ತಮ್ಮನ ಭಾಂದವ್ಯ ನೆನೆದು ಭಾವುಕರಾದರು.

ಸಿಎಂ ಸಹೋದರಿ ಚಿಕ್ಕಮ್ಮ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಬಿಜೆಪಿ ಹಿರಿಯ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ದೇವೇಗೌಡನ ಹುಂಡಿಗೆ ಆಗಮಿಸಿದ್ದಾರೆ. ಎರಡು ದಿನಗಳ ಹಿಂದೆ ವಿಜಯಶಂಕರ್ ಅವರು ಬಿಜೆಪಿ ಪಕ್ಷ‌ ಬಿಟ್ಟು ಕಾಂಗ್ರೆಸ್ ಪಕ್ಷ‌ ಸೇರುವ ಸೂಚನೆ ನೀಡಿದ್ದರು. ಮಾಧ್ಯಮಗಳ ಜತೆ ಮಾತನಾಡಿದ ವಿಜಯ್ ಶಂಕರ್, ಸಿದ್ದರಾಮಯ್ಯ ನನಗೆ ಆತ್ಮೀಯರು. ದೂರದ ಸಂಬಂಧಿಕರೂ ಆದ ಕಾರಣ ಆಗಮಿಸಿದ್ದೇನೆ. ಸಿಎಂ ಆಪ್ತರು, ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+