ಕಲಾವಿದನಿಗೆ ಸ್ಥಳದಲ್ಲೇ 10 ಸಾವಿರ ಕೊಟ್ಟ ಸಿದ್ದರಾಮಯ್ಯ

ಮೈಸೂರು, ಮೇ 20 : ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಕ ಕಲಾವಿದರಿಗೆ ಜನತಾದರ್ಶನದಲ್ಲಿ 10 ಸಾವಿರ ರೂ. ಸಹಾಯ ಮಾಡಿದರು. ಅನಾರೋಗ್ಯದಿಂದ ಬಳಲುತ್ತಿರುವ ಕಲಾವಿದನನ್ನು ಗುರುತಿಸಿದ ಮುಖ್ಯಮಂತ್ರಿಗಳು ಸ್ಥಳದಲ್ಲಿಯೇ ಸಹಾಯ ಮಾಡಿದರು.

ಬುಧವಾರ ಮೈಸೂರಿನ ಶಾರದಾ ದೇವಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯ ಅವರ ಜನತಾ ದರ್ಶನ ನಡೆಸಿದರು. ಹಲವಾರು ಜನರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಅಲ್ಲಿಗೆ ಆಗಮಿಸಿದ್ದರು. ಇವರಲ್ಲಿ ನಾಟಕ ಕಲಾವಿದ ಮರಿಯಪ್ಪ ಅವರು ಸೇರಿದ್ದರು. [ಸನ್ಯಾಸಿ ಮನವಿ ನೋಡಿ ಸಿಎಂ ಸಿದ್ದು ಸುಸ್ತೋ ಸುಸ್ತು]

janata darshan

ಸುಮಾರು 30 ವರ್ಷಗಳಿಂದ ಸಿದ್ದರಾಮಯ್ಯ ಅವರಿಗೆ ಪರಿಚಯವಿರುವ ನಾಟಕ ಕಲಾವಿದ ಮರಿಯಪ್ಪ ಅವರು ಆನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. [ಬಿಬಿಎಂಪಿಗೆ 1 ಸಾವಿರ ಕೋಟಿ ಅನುದಾನ ಕೊಟ್ಟ ಸಿದ್ದರಾಮಯ್ಯ]

ಮರಿಯಪ್ಪ ಅವರ ಸಮಸ್ಯೆ ಆಲಿಸುತ್ತಿದ್ದಂತೆ ಜೇಬಿಗೆ ಕೈ ಹಾಕಿದ ಸಿದ್ದರಾಮಯ್ಯ ಅವರು ಪರ್ಸ್ ತೆಗೆದು ಸ್ಥಳದಲ್ಲಿಯೇ 10 ಸಾವಿರ ರೂ.ಗಳನ್ನು ತೆಗೆದು ಮರಿಯಪ್ಪ ಅವರಿಗೆ ನೀಡಿ, ಮುಂದೆ ಸಾಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+