ಪುಟ್ಟಣ್ಣಯ್ಯ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಮೈಸೂರು, ಫೆಬ್ರವರಿ 19 : ನಿನ್ನೆ ರಾತ್ರಿ ವಿಧಿವಶವಾದ ರೈತನಾಯಕ ಪುಟ್ಟಣ್ಣಯ್ಯ ಅವರ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಡೆದರು.

ಲೋಕೋಪಯೋಗಿ ಸಚಿವ ಎಚ್‌.ಸಿ.ಮಹದೇವಪ್ಪ ಹಾಗೂ ಇನ್ನಿತರ ಸ್ಥಳೀಯ ಮುಖಂಡರ ಜೊತೆ ಪಾಂಡವಪುರದ ಕೇತೇನಹಳ್ಳಿಗೆ ತೆರಳಿದ ಸಿದ್ದರಾಮಯ್ಯ ಅವರು ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರಕ್ಕೆ ಹೂಮಾಲೆ ಸಮರ್ಪಿಸಿ ಗೌರವ ಅರ್ಪಿಸಿದರು. ಆ ನಂತರ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಅವರನ್ನು ಸಂತೈಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪುಟ್ಟಣ್ಣಯ್ಯ ನಿಧನ ಆಘಾತ ನೀಡಿದೆ. ಮೊನ್ನೆ ಬಜೆಟ್ ಮಂಡನೆಯ ವೇಳೆ ನನ್ನನ್ನು ಭೇಟಿಯಾಗಿ ವಿಶ್ ಮಾಡಿದ್ದರು. ಮುಂದಿನ ಚುನಾವಣೆಗೆ ತಯಾರಾಗುತ್ತಿದ್ದೇನೆ ಎಂತಲೂ ಸಹ ಹೇಳಿಕೊಂಡಿದ್ದರು' ಎಂದರು.

CM Siddaramaiah condoled the death of a farmer Puttannaiah

'ನನಗೆ ಅವರು ಬಹಳ ವರ್ಷದ ಒಡನಾಡಿ. ನಾನು ಕೂಡ ರೈತ ಸಂಘದಲ್ಲಿದ್ದೆ. ಅವರು ಆಗಷ್ಟೇ ರೈತ ಸಂಘಕ್ಕೆ ಬಂದಿದ್ದರು. ಉತ್ತಮ ವಾಗ್ಮಿಯಾಗಿದ್ದ ಪುಟ್ಟಣ್ಣಯ್ಯ, ಅತ್ಯುತ್ತಮ ಕಬಡ್ಡಿ ಪಟು ಸಹ ಆಗಿದ್ದವರು' ಎಂದು ಪುಟ್ಟಣ್ಣಯ್ಯ ಅವರೊಂದಿಗಿನ ಒಡನಾಟದ ನೆನಪು ಮಾಡಿಕೊಂಡ ಅವರು ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಭಗವಂತ ಕೊಡಲಿ ಎಂದರು.

In Pics : ಅಗಲಿದ ರೈತ ನಾಯಕನಿಗೆ ಗಣ್ಯರ ಅಶ್ರುತರ್ಪಣ

CM Siddaramaiah condoled the death of a farmer Puttannaiah
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+