ಅಪ್ಪ ಸಿದ್ದು ಅನುಪಸ್ಥಿತಿಯಲ್ಲಿ ಮಗ ಯತೀಂದ್ರರ ದರ್ಬಾರು!
ಮೈಸೂರು, ಏಪ್ರಿಲ್ 21: ತಮ್ಮ ತಂದೆಯ ಅನುಪಸ್ಥಿತಿಯಲ್ಲಿ ಸರ್ಕಾರಿ ಅಧಿಕಾರಿಗಳ ಸಭೆ ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರು ವಿವಾದಕ್ಕೀಡಾಗಿದ್ದಾರೆ.
ಮೈಸೂರಿನ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಾನಾ ಇಲಾಖೆಯ ಅಧಿಕಾರಿಗಳ ಸಭೆಯನ್ನು ಅವರು ನಡೆಸಿರುವುದು ಹಲವರ ಟೀಕೆಗೆ ಕಾರಣವಾಗಿದೆ.[ಸಿದ್ದರಾಮಯ್ಯ- ಅಂಬರೀಷ್ ಭೇಟಿಯ ಹಿಂದಿನ ಗುಟ್ಟೇನು?]

ಸಿದ್ದರಾಮಯ್ಯ ಅವರು, ಶುಕ್ರವಾರ ಉಡುಪಿ ಜಿಲ್ಲೆಯ ಬಾರ್ಕೂರಿಗೆ ಭೇಟಿ ನೀಡಿದ್ದರು. ಹಾಗಾಗಿ, ಅವರು ಬೆಂಗಳೂರಿನಲ್ಲಿರಲಿಲ್ಲ. ಆದ್ದರಿಂದ ಯತೀಂದ್ರ ಅವರೇ ಸಭೆಯ ನೇತೃತ್ವ ವಹಿಸಿದ್ದರೆಂದು ಹೇಳಲಾಗಿದೆ.[ಸಿದ್ದರಾಮಯ್ಯ ಪುತ್ರ ಯತೀಂದ್ರರ 'ಮ್ಯಾಟ್ರಿಕ್ಸ್' ಹಿನ್ನಲೆ ಏನು?]
ಯಾವುದೇ ಸಾಂವಿಧಾನಿಕ ಹುದ್ದೆ ಅಥವಾ ಅಧಿಕಾರ ಇಲ್ಲದಿದ್ದರೂ, ಕೇವಲ ತಮ್ಮ ತಂದೆಯ ಅನುಪಸ್ಥಿತಿ ಇದೆ ಎಂಬ ಕಾರಣಕ್ಕೆ ಸಭೆಯ ನೇತೃತ್ವ ವಹಿಸಿರುವುದು ಸರಿಯೇ ಎಂಬ ಪ್ರಶ್ನೆ ರಾಜಕೀಯ ವಲಯದಿಂದ ಕೇಳಿಬರುತ್ತಿದೆ.[ಸಿದ್ದರಾಮಯ್ಯ ರಾಜಕೀಯ ನಿವೃತ್ತರಾಗಲ್ಲ: ಡಾ ಯತೀಂದ್ರ ಸಂದರ್ಶನ]












Click it and Unblock the Notifications