ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಡಿನ ಜನರಿಗೆ ಮೈಸೂರಿನಲ್ಲಿ ಸಂತಸದ ಸುದ್ದಿ ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!

|
Google Oneindia Kannada News

ಮೈಸೂರು, ಆ 09: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿಗೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಸಿಹಿ ಸುದ್ದಿಯೊಂದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟಿದ್ದಾರೆ.

ಇಡೀ ದೇಶ ಕಳೆದೆರಡು ವರ್ಷಗಳಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಅದಕ್ಕೆ ಕಾರಣವಾಗಿರುವುದು ಆರ್ಥಿಕ ಸಂಕಷ್ಟ. ಈ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುವುದು ಬಲಾಡ್ಯ ದೇಶಗಳಿಗೂ ಆಗಿಲ್ಲ. ಇಂತಹ ಪರಿಸ್ಥಿತಿಯಿದೆ. ಕೊರೊನಾವೈರಸ್ ಮೊದಲ ಹಾಗೂ ಎರಡನೇ ಅಲೆಯಿಂದ ಬಿಡುಗಡೆ ಹೊಂದಿ ಇನ್ನೇನು ಸುಧಾರಿಸಿಕೊಳ್ಳಬೇಕು ಎನ್ನುವಾಗ ಮೂರನೇ ಅಲೆಯ ಕಾಟ ಶುರುವಾಗಿದೆ.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬಸಲಾವಣೆ ಆಗಿ, ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ರಾಜ್ಯದ ಜನರಿಗೆ ಸಂತಸದ ಸುದ್ದಿ ಕೊಟ್ಟಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಜೊತೆಗೆ ವಿಡಿಯೋ ಸಂವಾದದಲ್ಲಿ ಸಿಎಂ ಬೊಮ್ಮಾಯಿ ಭಾಗವಹಿಸಿದ್ದಾರೆ.

ನಾಡಿನ ಜನತೆಗೆ ಸಂತಸದ ಸುದ್ದಿ ಕೊಟ್ಟ ಸಿಎಂ ಬೊಮ್ಮಾಯಿ!

ನಾಡಿನ ಜನತೆಗೆ ಸಂತಸದ ಸುದ್ದಿ ಕೊಟ್ಟ ಸಿಎಂ ಬೊಮ್ಮಾಯಿ!

ಮೈಸೂರಿನಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಕೇವಲ 10 ತಿಂಗಳಲ್ಲಿ ಕೋವಿಡ್ ಚಿಕಿತ್ಸೆಗೆ ಹೊಸದಾಗಿ 24 ಸಾವಿರ ಹಾಸಿಗೆಗಳ ಸೌಲಭ್ಯ ಹಾಗೂ 6 ಸಾವಿರ ಐ.ಸಿ.ಯು ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಜೊತೆಗೆ ಔಷಧೋಪಚಾರ ಒದಗಿಸಲಾಗಿದೆ. ಅದರೊಂದಿಗೆ 2 ಸಾವಿರ ವೈದ್ಯರನ್ನು ನೇಮಕ ಮಾಡಲಾಗಿದ್ದು, ಕೋವಿಡ್ 19 ವಿರುದ್ಧ ದೊಡ್ಡ ಸಮರವನ್ನೇ ನಾವು ಸಾರಿದ್ದೇವೆ. ನಮ್ಮ ಈ ಸಾಧನೆ ಹಿಂದೆ ಕಾರ್ಯಕರ್ತರು ಕಾರಣ" ಎಂದರು.

ಇದೇ ಸಂಕಷ್ಟದ ಸಂದರ್ಭದಲ್ಲಿ ನಾಡಿನ ಜನತೆಗೆ ಸಿಎಂ ಬೊಮ್ಮಾಯಿ ಸಂತಸದ ಸುದ್ದಿ ಕೊಟ್ಟಿದ್ದಾರೆ. "ಕೋವಿಡ್ ಸಂಕಷ್ಟ ಇದ್ದರೂ ಆರ್ಥಿಕ ಚಟುವಟಿಕೆಗಳು ಮತ್ತೆ ಚಿಗುರುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ-ದೇಶ ಮುನ್ನಡೆಯುತ್ತಿದೆ" ಎಂದರು.

"ಕೋವಿಡ್ ನಿರ್ವಹಣೆಗೆ ಪ್ರಧಾನಿಗಳ ಮಾರ್ಗದರ್ಶನ ದೊರೆಯುತ್ತಿದೆ. ಎಲ್ಲ ವರ್ಗಕ್ಕೂ ಯೋಜನೆಗಳನ್ನು ರೂಪಿಸಿದ್ದು ಕೃಷಿ, ಆರೋಗ್ಯ, ನಗರ ಮತ್ತು ಗ್ರಾಮೀಣ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಲಾಗಿದೆ. ಕೃಷಿ ಸಮ್ಮಾನ್ ಯೋಜನೆಯಡಿ 19 ಸಾವಿರ ಕೋಟಿ ರೂ.ಗಳನ್ನು ಇಂದು ಪ್ರಧಾನಿ ವಿತರಿಸಿದ್ದಾರೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆ ಮೂಲಕ ನಾಡಿನ ರೈತರಿಗೂ ಸಂತಸದ ಸುದ್ದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟಿದ್ದಾರೆ.

ಕೊರೊನಾ ತಡೆಯಲು ಕಠಿಣಕ್ರಮ!

ಕೊರೊನಾ ತಡೆಯಲು ಕಠಿಣಕ್ರಮ!

"ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಕೇರಳ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಈ ಎಲ್ಲ ಜಿಲ್ಲೆಗಳಿಗೆ ತಾವು ಭೇಟಿ ನೀಡಲಿದ್ದು, ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಳೆದ ಬಾರಿ ಈ ಎರಡು ರಾಜ್ಯಗಳಿಂದ ಪ್ರಾರಂಭವಾದ ಎರಡನೇ ಅಲೆ ಇಡೀ ರಾಜ್ಯವನ್ನು ವ್ಯಾಪಿಸಿತ್ತು. ಈ ಬಾರಿ ಅದನ್ನು ತಡೆಗಟ್ಟಲು ಪೂರ್ವಭಾವಿಯಾಗಿಯೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ರಾಜ್ಯದ ಜನತೆಗೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ವಿಶ್ವದಲ್ಲಿಯೇ ಅತಿಹೆಚ್ಚು ಸದಸ್ಯರಿರುವ ಪಕ್ಷ ಬಿಜೆಪಿ

ವಿಶ್ವದಲ್ಲಿಯೇ ಅತಿಹೆಚ್ಚು ಸದಸ್ಯರಿರುವ ಪಕ್ಷ ಬಿಜೆಪಿ

ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರು ನಗರದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿಗೆ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿದರು. ಕಾರ್ಯಕರ್ತರಿಂದ ಅಭಿನಂದಂನೆ ಸ್ವೀಕರಿಸಿದ ಸಿಎಂ ಬೊಮ್ಮಾಯಿ, "ವಿಶ್ವದಲ್ಲಿಯೇ ಅತಿಹೆಚ್ಚು ಸದಸ್ಯರಿರುವ ಪಕ್ಷ ಬಿಜೆಪಿ. ಪ್ರಧಾನಿ ನರೇಂದ್ರ ಮೋದಿ, ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅನೇಕ ಪ್ರಮುಖರ ನಾಯಕತ್ವದಲ್ಲಿ 40 ವರ್ಷಗಳಿಂದ ಈ ಪಕ್ಷ ಕಟ್ಟಲ್ಪಟ್ಟಿದೆ. ಪಕ್ಷ, ಪಕ್ಷ ನಿಷ್ಠೆ, ಪಕ್ಷದ ಕಾರ್ಯ ಕ್ರಮಗಳ ಅನುಷ್ಠಾನ ಪಕ್ಷದ ಕಾರ್ಯಕರ್ತರಾದ ನಮ್ಮೆಲ್ಲರ ಸಂಕಲ್ಪ ಆಗಬೇಕು. ಈ ಕೆಲಸವನ್ನು ಮುಂದಿನ 2 ವರ್ಷಗಳಲ್ಲಿ ನಾವು ಪ್ರಾಮಾಣಿಕವಾಗಿ ವಿಶ್ವಾಸಪೂರ್ವಕವಾಗಿ ನಾಡಿನ ಸೇವೆ ಮಾಡೋಣ" ಎಂದು ಹೇಳಿದರು.

ಕಾರ್ಯಕರ್ತರ ಸೇವೆ ಸ್ಮರಿಸಿದ ಸಿಎಂ ಬೊಮ್ಮಾಯಿ

ಕಾರ್ಯಕರ್ತರ ಸೇವೆ ಸ್ಮರಿಸಿದ ಸಿಎಂ ಬೊಮ್ಮಾಯಿ

ಇದೇ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಸೇವೆ ಸ್ಮರಿಸಿದ ಸಿಎಂ ಬೊಮ್ಮಾಯಿ, "ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದು ಆಡಳಿತ ಮಾಡಲು ಕಾರಣೀಭೂತರಾಗಿರುವುದು ಪ್ರತಿಯೊಬ್ಬ ಕಾರ್ಯಕರ್ತರು. ಕಾರ್ಯಕರ್ತರ ಪರಿಶ್ರಮ, ದುಡಿಮೆ, ಪಕ್ಷದ ವಿಚಾರ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವುದು, ಜನರಲ್ಲಿ ಮನವರಿಕೆ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ" ಎಂದರು.

"ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಕೋವಿಡ್ ನಿಯಂತ್ರಣ ಹಾಗೂ ಸಂಕಷ್ಟಕ್ಕೆ ಒಳಗಾದವರಿಗಾಗಿ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ" ಎಂದು ಸಿಎಂ ಬೊಮ್ಮಾಯಿ ಹೇಳಿದರು.

English summary
Chief Minister Basavaraj Bommai has given good news to the people of the state that the economic activity of the Karnataka is improving. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X