ಮೈಸೂರು: ಗುಂಡಿ ಬಿದ್ದ ರಸ್ತೆಗಳ ಡಾಂಬರೀಕರಣಕ್ಕೆ ಮಹಾ ನಗರಪಾಲಿಕೆ ಸಜ್ಜು

ಮೈಸೂರು,ಅಕ್ಟೋಬರ್‌ 16: ಮೈಸೂರು ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ಕೊನೆಗೂ ದುರಸ್ತಿ ಭಾಗ್ಯ ಸಿಕ್ಕಿದೆ. 250 ಕೋಟಿ ರೂಪಾಯಿ ವೆಚ್ಚದಲ್ಲಿ ಗುಂಡಿ ಬಿದ್ದ ನಗರದ ರಸ್ತೆಗಳಿಗೆ ಡಾಂಬರೀಕರಣ ಮಾಡಲು ಮಹಾ ನಗರಪಾಲಿಕೆ ಮುಂದಾಗಿದೆ.

ಈ ಬಗ್ಗೆ ಮೇಯರ್ ಶಿವಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ''ಮೈಸೂರು ನಗರದ ಜನತೆಗೆ ಗುಂಡಿಮುಕ್ತ ರಸ್ತೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಈಗಾಗಲೇ 250 ಕೋಟಿ ರೂ. ವೆಚ್ಚದ ರಸ್ತೆಗೆ ಡಾಂಬರ್ ಹಾಕಲು ಟೆಂಡರ್ ಪ್ರಕ್ರಿಯೆ ಮುಗಿದಿದೆ. ವಾರದೊಳಗೆ ರಸ್ತೆ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಅಲ್ಲದೆ, 2 ತಿಂಗಳೊಳಗಾಗಿ ನಗರದ ಬಹುತೇಕ ಎಲ್ಲಾ ರಸ್ತೆಗಳಿಗೂ ಡಾಂಬರ್ ಹಾಕುವಂತೆ ಗಡುವು ನೀಡಿದ್ದೇನೆ. ಇದರ ಜೊತೆಗೆ ಮುಡಾ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಏಕಕಾಲದಲ್ಲಿ ರಸ್ತೆ ಕಾಮಗಾರಿಗಳು ನಡೆಯಲಿದೆ,'' ಎಂದು ತಿಳಿಸಿದ್ದಾರೆ.

ದಸರಾ ಮಹೋತ್ಸವ ಹಾಗೂ ಮಳೆ ಅಡಚಣೆ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗಕ್ಕಷ್ಟೇ ಡಾಂಬರೀಕರಣ ಮಾಡಲಾಗಿತ್ತು. ಆದರೆ, ಇದೀಗ ದಸರಾ ಮುಗಿದು ಮಳೆಯೂ ಬಿಡುವು ಕೊಟ್ಟಿರುವುದರಿಂದ ವಾರದೊಳಗೆ ನಗರದ ಗುಂಡಿ ಹಾಗೂ ಹಳ್ಳಬಿದ್ದ ರಸ್ತೆಗಳಿಗೆ ಡಾಂಬರೀಕರಣ ಹಾಕಲು ಪಾಲಿಕೆ ನಿರ್ಧರಿಸಿದೆ.

ನಗರಪಾಲಿಕೆ ಮೇಯರ್ ಶಿವಕುಮಾರ್ ಅವರು ನಗರದಾದ್ಯಂತ ಸ್ಥಳ ಪರಿಶೀಲನೆ ನಡೆಸಿ ಯಾವ ಬಡಾವಣೆಯ ಯಾವ ರಸ್ತೆಗಳಿಗೆ ಡಾಂಬರೀಕರಣ ಅಗತ್ಯವಿದೆ ಎಂಬ ಪಟ್ಟಿ ತಯಾರಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಅವರೊಂದಿಗೂ ಮಾತುಕತೆ ನಡೆಸಿದ್ದು, ಇನ್ನೆರಡು ತಿಂಗಳಿನಲ್ಲಿ ಗುಂಡಿರಸ್ತೆಗಳಿಗೆ ಮುಕ್ತಿ ನೀಡಲು ಕಟಿಬದ್ಧರಾಗಿದ್ದಾರೆ.

City roads With Potholes Will Be Repaired: Mysuru City Corporation

ಎಲ್ಲಿಗೆ? ಎಷ್ಟು ಅನುದಾನ?

ಈ ಹಿಂದಿನ ಮೇಯರ್ ಸುನಂದಾ ಪಾಲನೇತ್ರ ಅವರು 25 ಕೋಟಿ ರೂಪಾಯಿ, ಶಾಸಕರಾದ ಎಸ್.ಎ.ರಾಮದಾಸ್ ಅವರು 150 ಕೋಟಿ ರೂಪಾಯಿ ಹಾಗೂ ಎಲ್.ನಾಗೇಂದ್ರ ಅವರು 200 ಕೋಟಿ ರೂಪಾಯಿ ಅನುದಾನವನ್ನು ರಸ್ತೆ, ಪಾರ್ಕ್, ಯುಜಿಡಿ ಅಭಿವೃದ್ಧಿಗೆ ತಂದಿದ್ದಾರೆ.

ಇದರ ಜೊತೆಗೆ ಪಾಲಿಕೆಯ 10 ಕೋಟಿ ರೂ. ಹಾಗೂ 15ನೇ ಹಣಕಾಸಿನ ಯೋಜನೆಯಡಿ ಅನುದಾನವನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಲಾಗುತ್ತಿದೆ. ಒಟ್ಟಾರೆ ಸದ್ಯ 250 ಕೋಟಿ ರೂ. ವೆಚ್ಚದಲ್ಲಿ ಇನ್ನು ಮೂರು ದಿನದಲ್ಲಿ ಮರು ಡಾಂಬರೀಕರಣಕ್ಕೆ ಚಾಲನೆ ನೀಡಲಾಗುತ್ತದೆ. ಟೆಂಡರ್ ಹಂತದಲ್ಲಿರುವ ರಸ್ತೆ ಕಾಮಗಾರಿಯನ್ನೂ ಬೇಗ ಮುಗಿಸಲು ಪಾಲಿಕೆ ಚಿಂತನೆ ನಡೆಸಿದೆ.

ಯಾವೆಲ್ಲಾ ರಸ್ತೆ ಕಾಮಗಾರಿ ಆಗಬೇಕು?

1. ಕೆ.ಜಿ.ಕೊಪ್ಪಲು ಕ್ರಾಸ್ ರೋಡ್. 2. ಸರಸ್ವತಿಪುರಂ ಕ್ರಾಸ್ ರೋಡ್. 3. ಟೆಂಪಲ್ ರಸ್ತೆ. 4.ಸಾಹುಕಾರ್ ಚನ್ನಯ್ಯ ರಸ್ತೆ. 5. ಸರಸ್ವತಿಪುರಂ ಸ್ವಿಮ್ಮಿಂಗ್ ಪೂಲ್ ರಸ್ತೆ. 6.ಬೃಂದಾವನ ಮುಖ್ಯ ರಸ್ತೆ. 7. ಪರಮಹಂಸ ರಸ್ತೆ. 8.ಪುಲಿಕೇಶಿ ರಸ್ತೆ. 9. ಕಬೀರ್ ರಸ್ತೆ. 10. ಯಾದವಗಿರಿ ಅಂಡರ್ ಬಿಡ್ಜ್ ರೋಡ್. 11. ಮಿಷನ್ ಹಾಸ್ಪಿಟಲ್ ರಸ್ತೆ. 12. ಆರ್‌ಎಂಸಿ ಹಿಂಭಾಗದ ರಸ್ತೆ. 13. ಉಮರ್ ಖಾಯಾಮ್ ರಸ್ತೆ ಮತ್ತು ಇಡಿ ಆಸ್ಪತ್ರೆ ರೋಡ್. 14. ಬೆಂಕಿ ನವಾಬ್ ರಸ್ತೆ, ಸಿವಿ ರಸ್ತೆ. 15. ಆನೆಗುಂಡಿ ರೋಡ್. 16. ಕಲ್ಪವೃಕ್ಷನಗರ ಮೇನ್ ರೋಡ್. 17. ಗುಪ್ತ ಸ್ಟೋರ್ ಮೇನ್ ರೋಡ್. 18. ರಾಘವೇಂದ್ರ ಲೇಔಟ್ ಕ್ರಾಸ್ ರೋಡ್. 19. ಸಾತಗಳ್ಳಿ ಕ್ರಾಸ್ ರೋಡ್ ಹಾಗೂ ವಿಶ್ವಕರ್ಮ ಕಾಲನಿ ಎರಡನೇ ಕ್ರಾಸ್‌ ರಸ್ತೆಯಲ್ಲಿ ಕಾಮಗಾರಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+