ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಕೊರೊನಾ ಸೋಂಕು
ಮೈಸೂರು, ಆಗಸ್ಟ್ 25: ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಎರಡು ದಿನಗಳ ಹಿಂದೆ ಚಂದ್ರಗುಪ್ತ ಅವರು ಗಂಟಲ ದ್ರವ ಪರೀಕ್ಷೆ ಮಾಡಿಸಿದ್ದರು.
Recommended Video
ಕೋವಿಡ್, ನೆರೆ ಹೊರೆ ವಿದ್ಯಾರ್ಥಿಗಳ ಲ್ಯಾಪ್‌ಟ್ಯಾಪ್ ಗೆ ಸರ್ಕಾರ ಬರೆ | Oneindia Kannada
ನಿನ್ನೆ ಬಂದ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಇವರ ಜೊತೆಗೆ ಎನ್.ಆರ್.ವಿಭಾಗದ ಎಸಿಪಿ ಶಿವಶಂಕರ್ ಅವರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಕೆಲವು ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ.ರಿಷ್ಯಂತ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅವರಿಗೆ ಸೋಂಕು ದೃಢಪಡುವ ಕೆಲವೇ ದಿನಗಳ ಹಿಂದೆ ಚಂದ್ರಗುಪ್ತ ಅವರು ರಿಷ್ಯಂತ್ ಅವರೊಂದಿಗೆ ಸಭೆ ನಡೆಸಿದ್ದರು. ಹೀಗಾಗಿ ಇವರೂ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಇವರಲ್ಲೂ ಸೋಂಕು ದೃಢಪಟ್ಟಿದೆ.

ಆಯುಕ್ತ ಚಂದ್ರಗುಪ್ರ ಅವರು ಹೋ ಕ್ವಾರಂಟೈನ್ ನಲ್ಲಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸಿಪಿ ಶಿವಶಂಕರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.












Click it and Unblock the Notifications