ಮೈಸೂರಿನಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ 'ಮಕ್ಕಳ ಸಂಸತ್ತು'

ಮೈಸೂರು, ಮಾರ್ಚ್ 8: ಅಲ್ಲಿ ನೆರೆದಿದ್ದ ಮಕ್ಕಳು ಯಾವ ರಾಜಕಾರಣಿಗಳಿಂತ ಕಡಿಮೆ ಇರಲಿಲ್ಲ. ಅವರಂತ ಹಾವ -ಭಾವ ಎಲ್ಲವೂ ಒಮ್ಮೆ ಅಚ್ಚರಿಗೊಳಿಸಿತ್ತು, ಅದೆಲ್ಲಪ್ಪಾ ಅಂತೀರಾ? ಇದು ಮೈಸೂರಿನಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ 'ಮಕ್ಕಳ ಸಂಸತ್ತು'. ಇದು ಜನಪ್ರತಿನಿಧಿಗಳ ಸಂಸತ್ತನ್ನೂ ಮೀರಿಸಿತು.

ಗೊಂದಲ, ಗದ್ದಲ, ಹೊಗಳಿಕೆ, ತೆಗಳಿಕೆ ಇಲ್ಲದ ಅರ್ಥಪೂರ್ಣ ಚರ್ಚೆಗೆ ನಾಂದಿ ಹಾಡಿತು. ಶಾಸನಸಭೆ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಂತೆ ಕಂಡಿತು. ಚುನಾವಣೆ ಮೂಲಕ ಮಕ್ಕಳ ಸಂಸತ್ತಿಗೆ ಆಯ್ಕೆಯಾಗಿ ಬಂದಿದ್ದ 120 ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲೆಗಳ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಮಕ್ಕಳ ವಾಗ್ಝರಿಗೆ ಅಧಿಕಾರಿಗಳು ಮೂಕವಿಸ್ಮಿತರಾದರು. ಸ್ಪೀಕರ್ ಆಯ್ಕೆಯಲ್ಲಿ ತೋರಿದ ಒಮ್ಮತದ ನಿಲುವು ಶ್ಲಾಘನೆಗೆ ಅರ್ಹವಾಯಿತು. ಉದ್ಬೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರೂಪಾ ಅವರನ್ನು ಸ್ಪೀಕರ್‌ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Childrens Parliament session grabs everyones attention in Mysuru

ಇವರನ್ನು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ.ಸ್ನೇಹಾ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ ವೇದಿಕೆಗೆ ಕರೆ ತಂದರು.ಕಲಾಪವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ರೀತಿ, ಮಂತ್ರಿಗಳಾಗಿ ಆಯ್ಕೆಯಾಗಿದ್ದ ವಿದ್ಯಾರ್ಥಿಗಳ ಸ್ಪಷ್ಟವಾದ ಮಾತುಗಳು, ಗಮನ ಸೆಳೆದ ವಿಷಯಗಳು ಮೆಚ್ಚುಗೆಗೆ ಪಾತ್ರವಾದವು.

ಉದ್ಬೂರು ಸರ್ಕಾರಿ ಶಾಲೆಯ ಶಿಕ್ಷಣ ಮಂತ್ರಿ ಅಮೃತಾ ಹಾಗೂ ಬೀರಿಹುಂಡಿ ಸರ್ಕಾರಿ ಶಾಲೆಯ ಹಣಕಾಸು ಮಂತ್ರಿ ದೇವಿಕಾ ಮಾತನಾಡಿ, 'ಶಾಲೆಗೆ ಹೋಗು ವಾಗ ಮತ್ತು ಬರುವಾಗ ಪುಂಡರ ಹಾವಳಿ ಹೆಚ್ಚಾಗಿದೆ. ಹುಡುಗಿಯರನ್ನು ಹಲವು ಯುವಕರು ಚುಡಾಯಿಸುತ್ತಾರೆ ಎಂದು ವಿಷಯ ಪ್ರಸ್ತಾಪಿಸಿದರು.

Childrens Parliament session grabs everyones attention in Mysuru

ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಸಹಾಯಕ ವರಿಷ್ಠಾಧಿಕಾರಿ ಪಿ.ವಿ.ಸ್ನೇಹಾ, 'ಶಾಲಾ ಸಮಯದಲ್ಲಿ ಗಸ್ತು ವಾಹನ ಹಾಕಲಾಗುವುದು. ಬೀಟ್ ಪೊಲೀಸರಿಗೆ ಮಾಹಿತಿ ನೀಡಿ, ಚುಡಾಯಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+