ಹೀಗೂ ಉಂಟೇ : ಮೈಸೂರಿನಲ್ಲಿ ಸತ್ತಿದ್ದ ಮಗು 'ಹುಟ್ಟಿದ್ದು' ಹೇಗೆ?

ಮಕ್ಕಳ ಮಾರಾಟ ಜಾಲದಿಂದ ರಕ್ಷಣೆಯಾದ ಮಕ್ಕಳ ಹೆತ್ತವರನ್ನು ಪತ್ತೆಹಚ್ಚುವ ಪ್ರಕ್ರಿಯೆಯಲ್ಲಿ ಇಂತಹದೊಂದು ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ. ಶಿಶು ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದ ದಂಪತಿಯ ಬಾಳಲ್ಲಿ ಈಗ ಮಂದಹಾಸದ ಚಿಲುಮೆ ಮೂಡಿದೆ.

ಮೈಸೂರು. ಮೇ 3: ನಿಮ್ಮ ಮಗು ಹುಟ್ಟುವ ಮುನ್ನವೇ ಸತ್ತು ಹೊಯ್ತು ಕಣ್ರೀ ಎಂಬುದನ್ನು ತಾಯಿಗೆ ಹೇಳಿದಾಗ ಆಕೆಗೆ ಗರಬಡಿದಂತಾಯಿತು. ಆದರೆ ತನ್ನ ಗಂಡನ ತದ್ಪ್ರೂಪವುಳ್ಳ ಮಗುವನ್ನು ವರುಷದ ನಂತರ ನೋಡಿದಾಗ ಆಕೆಗೆ ಶಾಕ್ ಕಾದಿತ್ತು. ಅರೇ ಈ ಘಟನೆ ಏನಿದು ಅಂತೀರಾ?

ಜನಿಸುವ ಮುನ್ನವೇ ನಿಮ್ಮ ಮಗು ಕಣ್ಣುಮುಚ್ಚಿದೆ ಎಂಬ ವೈದ್ಯರ ಮಾತನ್ನು ಆ ತಾಯಿ ನಂಬಿದ್ದರು. ಆದರೆ ವರುಷವಾದ ಬಳಿಕ ಹೆಣ್ಣು ಮಗು ಪತ್ತೆಯಾಗಿ, ಡಿಎನ್ಎ ಟೆಸ್ಟ್ ನಲ್ಲಿಯೂ ತನ್ನದೇ ಮಗು ಎಂಬುದು ದೃಢಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

ಮಕ್ಕಳ ಮಾರಾಟ ಜಾಲದಿಂದ ರಕ್ಷಣೆಯಾದ ಮಕ್ಕಳ ಹೆತ್ತವರನ್ನು ಪತ್ತೆಹಚ್ಚುವ ಪ್ರಕ್ರಿಯೆಯಲ್ಲಿ ಇಂತಹದೊಂದು ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ. ಶಿಶು ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದ ದಂಪತಿಯ ಬಾಳಲ್ಲಿ ಈಗ ಮಂದಹಾಸದ ಚಿಲುಮೆ ಮೂಡಿದೆ. [ಪೋಷಕರ ಮಡಿಲು ಸೇರಿದ ಕೊಳ್ಳೇಗಾಲದ ಬಾಲಕ]

Child trafficking racket exposed, Child found year after it’s so called death

ಘಟನೆ ಹಿನ್ನಲೆ

ಮನೆ ಸಮೀಪದಲ್ಲಿಯೇ ಇದ್ದ ನಸೀಮಾ ಆಸ್ಪತ್ರೆಗೆ ಮಹಿಳೆ ಹೆರಿಗೆಗೆಂದು ದಾಖಲಾಗಿದ್ದಳು. ಗರ್ಭದಲ್ಲಿಯೇ ಶಿಶು ಮೃತಪಟ್ಟಿದೆ ಎಂಬ ವೈದ್ಯರ ಮಾತು ಮಹಿಳೆಗೆ ಶಾಕ್ ಉಂಟುಮಾಡಿತ್ತು. ಅಷ್ಟೇ ಅಲ್ಲದೇ ಶಿಶುವಿನ ಅಂತ್ಯಕ್ರಿಯೆಯನ್ನು ಸಹ ತಾವೇ ಮಾಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ ಮಾತು ಅವರನ್ನು ನಂಬಿಸಿಬಿಟ್ಟಿತು. [ನಾಪತ್ತೆಯಾಗಿದ್ದ ಪೂಜಿತಾ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು ಹೇಗೆ?]

ಸತ್ತ ಮಗು ಮತ್ತೆ ಹುಟ್ಟಿದ್ದು ಹೇಗೆ..?

ಆಸ್ಪತ್ರೆಯಲ್ಲಿ ಮಕ್ಕಳ ಮಾರಾಟ ದಂಧೆ ನಡೆದಿದೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ, ತನ್ನ ಮಗುವಿನ ಬಗ್ಗೆ ಮಹಿಳೆಗೆ ಅನುಮಾನ ಕಾಡಗೊಡಗಿತು. ಇದರಿಂದ ಆತಂಕಗೊಂಡ ಆಕೆ ಮಕ್ಕಳನ್ನು ರಕ್ಷಿಸಿಟ್ಟಿದ್ದ ಸ್ಥಳಕ್ಕೆ ಧಾವಿಸಿದಳು.

ಹೆಣ್ಣು ಮಗುವೊಂದು ಪತಿಯ ಮುಖವನ್ನೇ ಹೋಲುತ್ತಿದ್ದದ್ದನ್ನು ಕಂಡು ಆಕೆಗೆ ಅನುಮಾನ ಕಾಡಿತು. ತನ್ನೆಲ್ಲಾ ದಾಖಲೆಗಳೊಂದಿಗೆ ಎಸ್ಪಿ ರವಿ .ಡಿ ಚನ್ನಣ್ಣನವರ್ ರನ್ನು ಭೇಟಿಯಾಗಿ ಡಿಎನ್ಎ ಪರೀಕ್ಷೆ ನಡೆಸುವಂತೆ ಕೋರಿಕೊಂಡಳು. ಈಕೆಯ ಮಾತಿಗೆ ತಲೆಬಾಗಿದ ಅಧಿಕಾರಿಗಳು ಡಿಎನ್ಎ ಪರೀಕ್ಷೆಗೆ ಮುಂದಾದರು. ನಂತರ ಬಂದ ವರದಿ ಎಲ್ಲರನ್ನು ನಿಬ್ಬೇರಗಾಗುವಂತೆ ಮಾಡಿದೆ. ಕಾರಣ ಮಗುವಿನ ಜನ್ಮದಾತೆ ಈಕೆಯೇ ಆಗಿದ್ದಳು. ಸದ್ಯ ಮಹಿಳೆಗೆ ಮಗುವನ್ನು ಹಸ್ತಾಂತರಿಸಲಾಗಿದೆ. [ನಾಪತ್ತೆಯಾಗಿದ್ದ ಹುಣಸೂರು ಬಾಲಕಿ ಪ್ರಕರಣಕ್ಕೆ ವಿಚಿತ್ರ ತಿರುವು]

ವಿಚಿತ್ರ ಪ್ರಕರಣಗಳು

ತನ್ನ ಪತಿ ಮೃತಪಟ್ಟ ಬಳಿಕೆ ವಿಧವೆಯೋರ್ವಳು ಗರ್ಭ ಧರಿಸಿದ್ದಳು. ಸಮಾಜಕ್ಕೆ ಅಂಜಿ ಗರ್ಭಪಾತ ಮಾಡಿಸಿಕೊಳ್ಳಲು ಆಕೆ ಸಹ ನಸೀಮಾ ಆಸ್ಪತ್ರೆಗ ಬಂದಿದ್ದಳು. ಆದರೆ ಆ ವೇಳೆಗಾಗಲೇ ಸುರಕ್ಷಿತ ಗರ್ಭಪಾತದ ಅವಧಿ ಮೀರಿತ್ತು.ಹೆರಿಗೆಯ ಬಳಿಕ ಮಗುವನ್ನು ತಾವೇ ಪೋಷಿಸುವುದಾಗಿ ಆಸ್ಪತ್ರೆಯ ಸಿಬ್ಬಂದಿ ಭರವಸೆ ನೀಡಿದ ಬಳಿಕ, ಮಗುವನ್ನು ಅಲ್ಲಿಯೇ ಬಿಟ್ಟುಹೋಗಿದ್ದಳು ಆಕೆ.

ಆ ಮಗುವಿನ ಚಹರೆ ಕೂಡ ಮಕ್ಕಳ ಮಾರಾಟ ದಂಧೆಯಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತ ಮಕ್ಕಳ ಮಾರಾಟ ದಂಧೆಯ ಕುರಿತಾಗಿ ಮಾಹಿತಿ ತಿಳಿದ ಮಗುವಿನ ತಾಯಿ, ಪೊಲೀಸರನ್ನು ಸಂಪರ್ಕಿಸಿದಾಗ, ಆಕೆಯನ್ನು ಸಹ ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಗಂಡು ಮಗು ಆಕೆಯದ್ದೇ ಎಂಬುದು ಖಾತ್ರಿಯಾಗಿದೆ.

ಮಕ್ಕಳ ಹೆತ್ತವರಿಗಾಗಿ ಹುಡುಕಾಟ

ಜಾಲದಲ್ಲಿ ಸಿಲುಕಿದ್ದ 9 ಹೆಣ್ಣು ಹಾಗೂ 7 ಗಂಡು ಮಕ್ಕಳ ಪೈಕಿ 3 ಮಕ್ಕಳ ಹೆತ್ತವರನ್ನು ಈಗಾಗಲೇ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪೋಷಕರಿಗೆ ಮಕ್ಕಳನ್ನು ಹಸ್ತಾಂತರಿಸಲು ಮಕ್ಕಳ ಕ್ಷೇಮ ಸಮಿತಿ ನ್ಯಾಯಾಲಯದ ಆದೇಶಕ್ಕಾಗಿ ಕಾದು ಕುಳಿತಿದೆ.

ಇನ್ನು ಜಾಲ ಬೆಳಕಿಗೆ ಬರಲು ಕಾರಣರಾದ ನಂಜನಗೂಡಿನ ಪಾರ್ವತಿ ಎಂಬುವವರ ಮಗುವೂ ಕೂಡ ಸಿಕ್ಕಿದೆ.

ಡಿಎನ್ಎ ಪರೀಕ್ಷೆಯ ಮೂಲಕವೇ ಎಲ್ಲ ಮಕ್ಕಳನ್ನು ಪೋಷಕರಿಗೆ ಹಸ್ತಾಂತರಿಸಲಾಗುತ್ತಿದೆ. ಇತ್ತ ಮಕ್ಕಳನ್ನು ಮೈಸೂರಿನ ಬಾಪೂಜಿ ಚಿಲ್ಡ್ರನ್ ಹೋಮ್, ಮಂಡ್ಯದ ವಿಕಸನ ಸಂಸ್ಥೆ ಹಾಗೂ ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್ನ ಸಿಬ್ಬಂದಿಗೆ ಒಪ್ಪಿಸಲಾಗಿದೆ. ಇನ್ನು ಹೆತ್ತವರು ಪತ್ತೆಯಾಗದ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ನೀಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+