ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ 'ಕಾವಾ' ವಿದ್ಯಾರ್ಥಿಗಳ ಚಿತ್ರಕಲೆ
ಮೈಸೂರು, ಆಗಸ್ಟ್ 24: ಕುಕ್ಕರಹಳ್ಳಿ ಕೆರೆಯು ದೃಶ್ಯ ಕಲಾವಿದರಿಗೆ ಹೇಗೆ ಕಾಣಬಹುದು ಎಂಬ ಕುತೂಹಲದಿಂದ, ಆಗಸ್ಟ್ 26ನೇ ತಾರೀಖಿನಂದು "ಕುಕ್ಕರಹಳ್ಳಿ ಕೆರೆ 'ಕಾವಾ' ಕಣ್ಣಲ್ಲಿ" ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ.
"ವೈಲ್ಡ್ ಮೈಸೂರು" ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಕ್ಕೆ ಖ್ಯಾತ ಚಿತ್ರಕಾರ ಬಾದಲ್ ನಾರಾಯಣಸ್ವಾಮಿ ಆಗಿಸಲಿದ್ದಾರೆ. ಕಾರ್ಯಕ್ರಮವು ಕುಕ್ಕರಹಳ್ಳಿ ಕೆರೆ ಆವರಣದಲ್ಲಿಯೇ ನಡೆಯಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ರಾಜಣ್ಣ ರವರು ಸಹಕರಿಸಿ ಕಾರ್ಯಕ್ರಮದ ಆಯೋಜನೆಗೆ ಅನುವು ಮಾಡಿಕೊಟ್ಟಿದ್ದಾರೆ.
ಕಾರ್ಯಕ್ರಮವು ಭಾನುವಾರ (ಆಗಸ್ಟ್ 26) ಮುಂಜಾನೆ 7 ರಿಂದ 10 ಘಂಟೆಯವರೆಗೆ ನಡೆಯಲಿದ್ದು, ಕಾವಾ ಕಾಲೇಜಿನ ವಿದ್ಯಾರ್ಥಿಗಳು ಕುಕ್ಕರಹಳ್ಳಿ ಕೆರೆಯನ್ನು ತಮ್ಮ ದೃಷ್ಟಿಕೋನದಿಂದ ಕಂಡು ಕಲಾತ್ಮಕವಾಗಿ ಚಿತ್ರಿಸಲಿದ್ದಾರೆ.

ಅದೇ ದಿನ ಸಂಜೆ 4ರಿಂದ 6ಘಂಟೆಯವರೆಗೆ ವಿದ್ಯಾರ್ಥಿಗಳು ಚಿತ್ರಿಸಿದ ಚಿತ್ರಕಲೆಯ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕುಕ್ಕರಹಳ್ಳಿ ಕೆರೆಯಲ್ಲಿ ವಿದ್ಯಾರ್ಥಿಗಳು ತಮ್ಮ ದೃಷ್ಠಿಕೋನದಿಂದ ನೋಡಿದ ಬಗೆ ಪ್ರದರ್ಶನದಲ್ಲಿ ಕಾಣಬಹುದು.
ಸಾಮಾನ್ಯ ಜನರಗೆ ಕುಕ್ಕರಹಳ್ಳಿ ಕೆರೆಯ ಮಹತ್ವದ ಬಗ್ಗೆ ಅರಿವು ಮೂಡಿಸಿ ಹಾಗೆಯೇ ಕಲಾವಿದರ ದೃಷ್ಟಿಕೋನದಲ್ಲಿ ಕೆರೆಯನ್ನು ಕಾಣುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.












Click it and Unblock the Notifications