ಮೈಸೂರು: ಕಾರು ಅಪಘಾತ, ಮೂವರು ವಿದ್ಯಾರ್ಥಿಗಳ ಸಾವು
ಮೈಸೂರು, ಜನವರಿ 31: ನಗರದ ಹೊರವಲಯದ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ತಿವ್ರವಾಗಿ ಗಾಯಗೊಂಡಿದ್ದಾರೆ.
ರಿಯಾನ್ ರೆಹಮಾನ್ , ಮೊಹಮ್ಮದ್ ಫರಾನ್, ದಿವ್ಯಾ ಮೃತಪಟ್ಟವರು. ಗಾಯಗೊಂಡಿರುವ ಆಸಿಂ ಮತ್ತು ಸ್ಫೂರ್ತಿ ಪರಿಸ್ಥಿತಿ ಚಿಂತಾಜನಕವಾಗಿದ್ದು, ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಸೇಂಟ್ ಜೋಸೆಫ್ ಕಾಲೇಜು ವಿದ್ಯಾರ್ಥಿಗಳು.

ವಿಶ್ವಪ್ರಜ್ಞಾ ಪಿಯು ಕಾಲೇಜು ಬಳಿ ವೇಗವಾಗಿ ಬಂದ ವರ್ನಾ KA 09 MA 6116 ಸಂಖ್ಯೆಯ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಹಲವು ಪಲ್ಟಿಯಾಗಿ ಉರುಳಿ ಬಿದ್ದಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಕುವೆಂಪುನಗರ ಸಂಚಾರ ಉಪಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications