ನಾಗರಹೊಳೆಯಲ್ಲಿ ಮತ್ತೆ ಕಾಣಿಸಿಕೊಂಡ ಭಗೀರ: ಪ್ರವಾಸಿಗರ ಮುಖದಲ್ಲಿ ಮಂದಹಾಸ
ಮೂರು ತಿಂಗಳಿನಿಂದ ಕಣ್ಮರೆಯಾಗಿದ್ದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಐಕಾನ್ ಭಗೀರ ಮತ್ತೆ ಇದೀಗ ಪ್ರತ್ಯಕ್ಷನಾಗಿದ್ದಾನೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೈಸೂರು, ಫೆಬ್ರವರಿ, 27: ಮೂರು ತಿಂಗಳಿನಿಂದ ಕಣ್ಮರೆಯಾಗಿದ್ದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಐಕಾನ್ ಭಗೀರ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಭಗೀರನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಗೀರ ಎಂದು ಕರೆಯಲ್ಪಡುವ ಕರಿ ಚಿರತೆಗಳಿಗೆ ನಾಗರಹೊಳೆ ಅಭಯಾರಣ್ಯ ನೆಚ್ಚಿನ ತಾಣವಾಗಿದೆ. ಸಾಮಾನ್ಯವಾಗಿ ಭಗೀರಗಳು ಹೆಚ್ಚು ಮಳೆ ಸುರಿಯುವ, ಕಡಿಮೆ ಸೂರ್ಯನ ಬೆಳಕಿರುವ, ದಟ್ಟಾರಣ್ಯದಲ್ಲಿ ವಾಸಿಸಲು ಇಷ್ಟಪಡುತ್ತವೆ. ಇಂತಹ ತಾಣಗಳಲ್ಲಿ ಸಾಕಷ್ಟು ಆಹಾರ ಸಿಗುವುದರಿಂದ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅವುಗಳು ಇಲ್ಲಿಯೇ ನೆಲೆಯೂರುತ್ತವೆ.

ಪ್ರವಾಸಿಗರಿಗೆ ಅಚ್ಚುಮೆಚ್ಚಾದ ಭಗೀರ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಬಿನಿ ಹಿನ್ನೀರಿನ ದಮ್ಮನಕಟ್ಟೆಗೆ ತೆರಳುವ ವನ್ಯಜೀವಿ ಪ್ರಿಯರಿಗೆ ನಿರಂತರವಾಗಿ ದರ್ಶನ ನೀಡುವ ಮೂಲಕ ಸದಾ ಪ್ರೀತಿಪಾತ್ರನಾಗಿದ್ದ. ಆದರೆ ಕಳೆದ ಮೂರು ತಿಂಗಳಿಂದ ಆ ಭಾಗದಲ್ಲಿ ಯಾರ ಕಣ್ಣಿಗೂ ಕಾಣಿಸಿರಲಿಲ್ಲ. ಅರಣ್ಯ ಅಧಿಕಾರಿಗಳು ವಾಚ್ ಟವರ್ ಹಾಗೂ ಫೈರ್‌ಲೈನ್ ಕಾಮಗಾರಿ ಪರಿಶೀಲನೆ ಮಾಡುವಾಗ ಅಪರೂಪದ ಹಾಗೂ ಸಾಯಾ ಮಾಯಾ, ಕರಿಯಾ, ಭಗೀರ ಎಂದು ಕರೆಸಿಕೊಳ್ಳುವ ಕಪ್ಪು ಚಿರತೆ ಮತ್ತೆ ಅದೇ ಜಾಗದಲ್ಲಿ ಕಾಣಿಸಿಕೊಂಡಿದೆ.
ಕಪ್ಪು ಚಿರತೆಯ ವಿಡಿಯೋ ವೈರಲ್
ಕಪ್ಪು ಚಿತರತೆಯ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಜನತೆ ಭಗೀರನಿಗೆ ಯಾವುದೇ ಅಪಾಯವಾಗಿಲ್ಲ. ಆತನನ್ನು ಮತ್ತೊಮ್ಮೆ ನೋಡುವ ಅವಕಾಶವಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಕಾಲ ಭಗೀರ ಎಂದು ಕರೆಸಿಕೊಲ್ಳುತ್ತಿದ್ದ ಕರಿ ಚಿರತೆ ಕಾಣೆಯಾಗಿತ್ತು. ಇದು ಈ ಮೊದಲು ಪ್ರವಾಸಿಗರಿಗೆ ಹಾಗಾಗ ದರ್ಶನ ಕೊಡುತ್ತಿತ್ತು.

ಕೆಲವು ದಿನಗಳ ಹಿಂದೆಯಷ್ಟೇ ಇದು ನಾಪತ್ತೆಯಾಗಿದ್ದು, ಪ್ರವಾಸಿಗರಿಗೆ ಅದನ್ನು ನೋಡುವ ಭಾಗ್ಯವೇ ಸಿಗದಂತಾಗಿತ್ತು. ಇದೀಗ ಈ ಚಿರತೆ ಪ್ರತ್ಯಕ್ಷ ಆಗಿದ್ದು, ಅಲ್ಲಿನ ಸುತ್ತಮುತ್ತಲಿನ ಜನರ ಮುಖದಲ್ಲಿ ಸಂತಸ ತರಿಸಿದೆ.












Click it and Unblock the Notifications