ಸಿದ್ದರಾಮಯ್ಯ ಮಾಡಿದ ಅಭಿವೃದ್ಧಿಯ ಮನಸಾರೆ ಹೊಗಳಿದ ಪ್ರತಾಪ್ ಸಿಂಹ

Recommended Video

      ಸಿದ್ದರಾಮಯ್ಯಗೆ ಟ್ವಿಟ್ಟರ್ ನಲ್ಲಿ ಧನ್ಯವಾದ ಹೇಳಿದ ಪ್ರತಾಪ್ ಸಿಂಹ | Prathap Simha | Siddaramaiah | Twitter

      ಮೈಸೂರು, ಫೆಬ್ರವರಿ 17: ರಾಜಕೀಯ ವಿರೋಧಿಗಳು ಒಬ್ಬರನ್ನೊಬ್ಬರು ಬಹಿರಂಗವಾಗಿ ಹೊಗಳುವುದು ವಿರಳಾತಿವಿರಳ. ಅದರಲ್ಲಿಯೂ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಾಯಕರು ಒಬ್ಬರನ್ನೊಬ್ಬರು ಹೊಗಳುವುದು ಅಪರೂಪದಲ್ಲಿ ಅಪರೂಪ ಇಂಥಹಾ ಅಪರೂಪದ ಘಟನೆ ಇದೀಗ ರಾಜ್ಯದಲ್ಲಿ ಘಟಿಸಿದೆ.

      ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು, ಅವರು ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಮನಸಾರೆ ಹೊಗಳಿದ್ದಾರೆ.

      ಇಂದು ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಮಾಡಿದ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿದ್ದರಾಮಯ್ಯ ಅವರ ಚಿತ್ರವನ್ನೂ ಸಹ ಹಂಚಿಕೊಂಡಿದ್ದಾರೆ.

      BJP MP Prathap Simha Louds Siddaramaiahs Development Work

      ಸಂಸದ ಪ್ರತಾಪ್ ಸಿಂಹ ಅವರ ಆಪ್ತ ಅಣ್ಣಯ್ಯ ಅವರನ್ನು ಭೇಟಿ ಮಾಡಲೆಂದು ಮೈಸೂರು ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿನ ಸುವ್ಯವಸ್ಥೆ, ಅಚ್ಚುಕಟ್ಟುತನ ಕಂಡು ಮೆಚ್ಚಿದ ಪ್ರತಾಪ್ ಸಿಂಹ ಅವರು ಟ್ವೀಟ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

      ''ಕಟ್ಟಡ ಮತ್ತು ವ್ಯವಸ್ಥೆ ಅದ್ಭುತವಾಗಿದೆ. 168 ಕೋಟಿ ಕೊಟ್ಟು ಅತ್ಯಾಧುನಿಕ ಕಟ್ಟಡ ನಿರ್ಮಾಣಕ್ಕೆ ಕಾರಣರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರಿಗೆ, ಉತ್ತಮ ಸೇವೆ ನೀಡುತ್ತಿರುವ ಡಾ. ಮಂಜುನಾಥ್ ಧನ್ಯವಾದಗಳು'' ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

      ಜಯದೇವ ಆಸ್ಪತ್ರೆಯು ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿತ್ತು. ಜಯದೇವ ಆಡಳಿತವನ್ನು ಆಸ್ಪತ್ರೆ ಸಮೂಹದ ನಿರ್ದೇಶಕ ವೈದ್ಯ ಮಂಜುನಾಥ್ ನೋಡಿಕೊಳ್ಳುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+