Get Updates
Get notified of breaking news, exclusive insights, and must-see stories!

ಮಾಧ್ಯಮದವರೆದುರು ಮುಜುಗರಕ್ಕೀಡಾದ ಅರವಿಂದ ಲಿಂಬಾವಳಿ

ಸಭೆಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಪರಸ್ಪರ ಮುಖ ನೋಡದ, ಮಾತನಾಡದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿ ಅರವಿಂದ ಲಿಂಬಾವಳಿ ಪತ್ರಿಕಾಗೋಷ್ಠಿಯಿಂದಲೇ ಹೊರನಡೆದರು.

ಮೈಸೂರು, ಮೇ 7 : ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಗರದ ರಾಜೇಂದ್ರ ಕಲಾಮಂದಿರದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮೊದಲ ದಿನದ ಗೋಷ್ಠಿ ಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಖಾಸಗಿ ಹೋಟೆಲ್‍ವೊಂದರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ಕಾಂಗ್ರೆಸ್ ಸರ್ಕಾರ 4 ವರ್ಷಗಳಿಂದ ಮರಳು ದಂಧೆ, ವರ್ಗಾವಣೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದೀಗ ವಿಧಾನಸಭಾ ಚುನಾವಣೆ ಇನ್ನೊಂದು ವರ್ಷ ಇರುವಾಗ ಮರಳಿ ಅಧಿಕಾರ ಗಳಿಸಲು ಗಿಮಿಕ್‍ಗಳನ್ನು ಆರಂಭಿಸಿದೆ ಎಂದು ದೂರಿದರು.[In Pics: ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ]

ಹೊಸದಿಲ್ಲಿಯ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ನಡೆಸಿರುವ ಸಮೀಕ್ಷೆಯಲ್ಲಿ ದೇಶದ 20 ರಾಜ್ಯಗಳ ಪೈಕಿ ಸರ್ಕಾರಿ ಸೇವೆ ಪಡೆಯಲು ಜನರು ಲಂಚ ನೀಡಬೇಕಾದ ಅನಿವಾರ್ಯತೆ ಇರುವ ಮೊದಲ ರಾಜ್ಯ ಕರ್ನಾಟಕ ಎಂಬ ಕುಖ್ಯಾತಿಗೆ ಪಾತ್ರವಾಗಿದೆ ಎಂದು ಟೀಕಿಸಿದರು.

BJP leader Arvind Limbavali face embarrassment in-front of Media

ಕೇಂದ್ರ ಸರ್ಕಾರ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟು ಗಳನ್ನು ಅಮಾನ್ಯಗೊಳಿಸಿದಾಗ ರಾಜ್ಯದ ಕೆಲ ಸಚಿವರು, ಆಡಳಿತ ಪಕ್ಷದ ಹಲವು ಶಾಸಕರು, ಹಿರಿಯ ಅಧಿಕಾರಿಗಳ ನಿವಾಸಗಳಲ್ಲಿ ಭಾರೀ ಪ್ರಮಾಣದ 2000 ರೂ. ಮುಖಬೆಲೆಯ ಹೊಸ ನೋಟುಗಳು ಪತ್ತೆಯಾಗಿವೆ. ಕೇಂದ್ರ ಸರ್ಕಾರ ಕೆಜಿ ಅಕ್ಕಿಗೆ 32 ರೂ. ನೀಡಿ ರಾಜ್ಯ ಸರ್ಕಾರಕ್ಕೆ ಸಬ್ಸಿಡಿ ದರವೆಂದು ಕೇವಲು 3 ರೂ.ಗೆ ಪೂರೈಕೆ ಮಾಡಿತ್ತು. ಅದನ್ನು ರಾಜ್ಯ ಸರ್ಕಾರದ ಯೋಜನೆ ಎಂದು ಕಾಂಗೆಸ್ಸಿಗರು ಕೊಚ್ಚಿಕೊಳ್ಳುತ್ತಿದ್ದಾರೆ. ಇದು ಚುನಾವಣಾ ಗಿಮಿಕ್ ಅಲ್ಲದೆ ಬೇರೇನೂ ಅಲ್ಲ ಎಂದು ಅವರು ಲೇವಡಿ ಮಾಡಿದರು.

ಎಲ್‍ಇಡಿ ಬಲ್ಬ್ ಗಳ ಖರೀದಿಯಲ್ಲಿ ಗೋಲ್‍ಮಾಲ್, ಡೈರಿ ಹಗರಣ, ಬೆಂಗಳೂರು ಉಕ್ಕಿನ ಸೇತುವೆ ನಿರ್ಮಾಣ ಕೈಬಿಟ್ಟಿದ್ದು, ಇವೆಲ್ಲ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಮುಖವನ್ನುಅನಾವರಣಗೊಳಿಸಿವೆ. ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಬಿಜೆಪಿ ಶ್ರಮಿಸಲು ನಿರ್ಧಾರ ಕೈಗೊಂಡಿದೆ ಎಂದರು.

ಕಸಿವಿಸಿಗೊಂಡ ಲಿಂಬಾವಳಿ

ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ನಡುವಿನ ಮುನಿಸು ಬಿಜೆಪಿ ಕಾರ್ಯಕಾರಿಣಿಯಲ್ಲೂ ಪ್ರದರ್ಶನಗೊಂಡ ಬಗ್ಗೆ ಉತ್ತರಿಸಲು ಮುಂದಾದ ಅರವಿಂದ ಲಿಂಬಾವಳಿ ಮುಜುಗರಕ್ಕೊಳಗಾದರು.

ಸಭೆಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರಿಬ್ಬರೂ ಪರಸ್ಪರ ಮುಖ ನೋಡದ, ಮಾತನಾಡದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಲಿಂಬಾವಳಿ ಹೇಳಿದರು.

ಅಲ್ಲದೆ, ಕಾರ್ಯಕಾರಿಣಿ ಸಭೆ ನಡೆಯುತ್ತಿರುವ ರಾಜೇಂದ್ರ ಕಲಾಮಂದಿರದ ಆವರಣದಲ್ಲಿ ಈಶ್ವರಪ್ಪ ಅವರ ಎದುರೇ ಕೆಲವರು ಮುಂದಿನ ಮುಖ್ಯಮಂತ್ರಿ ಈಶ್ವರಪ್ಪ ಅವರಿಗೆ ಜೈ ಎಂದು ಕೂಗಿದ್ದಾರಲ್ಲ ಎಂದು ಮತ್ತೊಂದು ಪ್ರಶ್ನೆ ಎದುರಾಯಿತು. ಅಂಥದನ್ನೆಲ್ಲ ಸುದ್ದಿ ಮಾಡಬೇಡಿ ಎಂದರು.

ಈ ಸಂದರ್ಭ 'ಯಾವ ಸುದ್ದಿ ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ನೀವು ಹೇಳಬೇಕಿಲ್ಲ,' ಎಂದು ಮಾಧ್ಯಮದವರು ತಿರುಗಿಬಿದ್ದರು. ಪಕ್ಷದ ಆಂತರಿಕ ವಿಚಾರ ಬಿಟ್ಟು ಈಗ ನಾನು ಹೇಳಿದ್ದರ ಬಗ್ಗೆ ಕೇಳಿ, ಇಲ್ಲದಿದ್ದರೆ ಕೃತಜ್ಞತೆಗಳು ಎಂದರು. ಅದಕ್ಕೊಪ್ಪದ ಮಾಧ್ಯಮಗಳು ಗೋಷ್ಠಿ ಕರೆದು ನಮ್ಮ ಪ್ರಶ್ನೆಗಳಿಗೆ ಉತ್ತರಿಸದಿರುವುದು ಸಮಂಜಸವಲ್ಲ ಎಂದು ಅಸಹನೆ ವ್ಯಕ್ತಪಡಿಸಿದರು. ಆದರೆ, ಲಿಂಬಾವಳಿ ಮಾತ್ರ ಅಲ್ಲಿಂದ ಜಾಗ ಖಾಲಿ ಮಾಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+