ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಮೈಸೂರು, ಮೇ 23 : ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಪವಿತ್ರ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸಿ ನಗರದ ಗಾಂಧಿ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ - ಜೆಡಿಎಸ್ ಮೈತ್ರಿ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು, ಮಾನ ಮರ್ಯಾದೆ ಇಲ್ಲದ ಜುಜಿಬಿ ಜೆಡಿಎಸ್ ಗೆ ತಲೆಬಾಗಿರುವ ಕಾಂಗ್ರೆಸ್ ನಡೆ ಖಂಡನಾರ್ಹ. ರಾಜ್ಯದ ಜನತೆ ಕಾಂಗ್ರೆಸ್ ತಿರಸ್ಕರಿಸಿದ್ದು, ಇದೀಗ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿಯಾಗುತ್ತಿರುವುದು ಮಹಾಮೋಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಹೆಚ್ಚಿನ ಮತದಾನ ಮಾಡಿದ್ದರು. ಆದರೆ ಮೋಸದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ನಡೆಸಿ ಅಧಿಕಾರದ ಗದ್ದುಗೆಯೇರಲು ಹೊರಟಿವೆ. ನಾಚಿಕೆಯಿಲ್ಲದೇ ಮತ್ತೆ ಅಧಿಕಾರದ ಗದ್ದುಗೆಯೇರಲು ಹೊರಟಿರುವ ಪಕ್ಷಗಳಿಗೆ ಧಿಕ್ಕಾರ ಎಂದರು.












Click it and Unblock the Notifications