ಮೋಕ್ಷ ಸಿಗುತ್ತೆಂದು ಕಪಿಲಾ ನದಿಗೆ ಹಾರಿದ ವೃದ್ಧ ದಂಪತಿ
ಮೈಸೂರು, ಜು.24: ಮೋಕ್ಷ ಸಿಗುತ್ತದೆ ಎಂದು ದಂಪತಿ ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ. ಬೆಂಗಳೂರಿನಿಂದ ಅದೇ ಉದ್ದೇಶವಿಟ್ಟುಕೊಂಡು ತೆರಳಿದ್ದ ದಂಪತಿ ಜೊತೆಗೆ ಆತ್ಮಹತ್ಯೆಗೆ ಯತ್ನಿಸಿದ್ದರು.
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಈ ಘಟನೆ ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ, ಯಾರೋ ಕಪಿಲಾ ನದಿಗೆ ಹಾರಿ ಪ್ರಾಣ ಬಿಟ್ಟರೆ ಮೋಕ್ಷ ಸಿಗುತ್ತದೆ ಎಂದು ಹೇಳಿದ್ದನ್ನು ಕೇಳಿಸಿಕೊಂಡ ವೃದ್ಧ ದಂಪತಿ ನದಿಗೆ ಹಾರಿದ್ದಾರೆ ಆದರೆ ಪತಿ ನಾಗರಾಜು ಮೃತಪಟ್ಟಿದ್ದು, ಪತ್ನಿ ಕಲಾವತಿ ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ದೆಹಲಿಯಲ್ಲಿ ಇದೇ ಮಾದರಿಯಲ್ಲಿ ಮೋಕ್ಷ ಪಡೆಯಬೇಕೆಂದು ಬುರಾರಿ ಕುಟುಂಬದವರು 11 ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು, ಆ ಸುದ್ದಿ ಮಾಸುವ ಮುನ್ನವೇ ಇನ್ನೊಂದು ಘಟನೆ ದಾಖಲಾಗಿದೆ.

ದಂಪತಿ ಬೆಂಗಳೂರಿನ ಹೆಬ್ಬಾಳದ ನಿವಾಸಿಯಾಗಿದ್ದಾರೆ. ಇದೀಗ ಅಸ್ವಸ್ಥ ಕಲಾವತಿಯನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications