ಮೈಸೂರಿಗರಿಗೆ ಸಿಹಿ ಸುದ್ದಿ : ಬೆಂಗಳೂರಿಗೆ ಮತ್ತೆರಡು ರೈಲು ಸಂಚಾರ

ಮೈಸೂರು, ಜನವರಿ 15 : ಮೈಸೂರಿನ ಜನರಿಗೆ ಸಂಕ್ರಾಂತಿ ಹಬ್ಬದ ದಿನ ಸಿಹಿ ಸುದ್ದಿ ಸಿಕ್ಕಿದೆ. ಬೆಂಗಳೂರು-ಮೈಸೂರು ನಡುವೆ ಮತ್ತೊಂದು ರೈಲು ಸೇವೆ ಆರಂಭವಾಗಿದೆ.

ಮೈಸೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ರೈಲು ಸೇವೆಗೆ ಚಾಲನೆ ನೀಡಿದರು. ಚೆನ್ನೈ-ಕೆ.ಎಸ್.ಆರ್ ಮತ್ತು ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಮೈಸೂರಿನ ತನಕ ವಿಸ್ತರಣೆ ಮಾಡಲಾಗಿದೆ.

Mysuru-Chennai and Chennai-KRS rail service extended to Mysururu

ಸಮಾರಂಭದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, 'ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು ಶತಾಬ್ದಿ ರೈಲಿಗಿಂತ ಕಡಿಮೆ ವೇಗದಲ್ಲಿ ಏನು ಸಂಚಾರ ನಡೆಸುವುದಿಲ್ಲ' ಎಂದು ಹೇಳಿದರು.

'ಮೈಸೂರಿನ ಹಲವು ಸಾಫ್ಟ್ ವೇರ್ ಇಂಜಿನಿಯರ್‌ಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ರೈಲು ಸೇವೆಗಳ ಮೂಲಕ ಅವರಿಗೆ ಪ್ರತಿನಿತ್ಯ ಸಂಚಾರ ನಡೆಸಲು ಅನುಕೂಲವಾಗಲಿದೆ' ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

'ಎರಡು ರೈಲುಗಳು ಸಿಕ್ಕಿರುವುದರಿಂದ ಏನು ಉಪಯೋಗವಾಗಲಿದೆ ಎಂದು ಮೈಸೂರು-ಬೆಂಗಳೂರು ನಡುವೆ ಸಂಚಾರ ನಡೆಸುವ ಜನರನ್ನು ಕೇಳಿದರೆ ಗೊತ್ತಾಗುತ್ತದೆ. ಸುಲಭವಾಗಿ ಜನರು ಉಭಯ ನಗರಗಳ ನಡುವೆ ಸಂಚರಿಸಲು ಇದು ಸಹಾಯಕವಾಗಲಿದೆ' ಎಂದು ಸಂಸದರು ತಿಳಿಸಿದರು.

'ಬೆಂಗಳೂರು-ಮೈಸೂರು ನಡುವೆ ಸಂಜೆ ರೈಲುಗಳ ಕೊರತೆ ಇತ್ತು. ಮೆಮೆ ರೈಲು, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು ಆರಂಭವಾದ ಬಳಿಕ ಈ ಕೊರತೆಯೂ ನೀಗಿದೆ. ಸಾವಿರಾರು ಜನರಿಗೆ ಇದು ಉಪಯೋಗವಾಗಿದೆ' ಎಂದರು.

'ಬೆಂಗಳೂರು-ಮೈಸೂರು, ಮೈಸೂರು-ಬೆಂಗಳೂರು ನಡುವೆ ಪ್ರತಿ ಗಂಟೆಗೊಂದು ರೈಲು ಸಂಚಾರ ನಡೆಸಬೇಕು ಎಂಬುದು ನನ್ನ ಗುರಿಯಾಗಿದೆ. ಇದನ್ನು ಕಾರ್ಯರೂಪಕ್ಕೆ ತರಲು ಸಕಲ ರೀತಿಯಲ್ಲಿ ಪ್ರಯತ್ನ ನಡೆಸಲಾಗುತ್ತದೆ' ಎಂದು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+