ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವ ದಸರಾದಲ್ಲಿ ಶೆರ್ಲಿ ಸೇಟಿ ಹಾಡಿಗೆ ಮಳೆಯಲ್ಲೂ ಬೆವರುವಂತೆ ಕುಣಿದ ಯುವಕರು

|
Google Oneindia Kannada News

ಮೈಸೂರು, ಅಕ್ಟೋಬರ್. 17 : ಅತ್ತ ಮಳೆಯ ಅಬ್ಬರ... ಇತ್ತ ಸಂಗೀತದ ಸಪ್ಪಳ.. ಇವೆರಡನ್ನೂ ಮೀರಿದಂತೆ ಸಜ್ಜು, ಶೆರ್ಲಿ ಸೇಟಿಯ ಹಾಡಿನ ಮೋಡಿ. ಸಾಲು ಸಾಲಾಗಿ ಪ್ರದರ್ಶನಗೊಂಡ ನೃತ್ಯಗಳು ಯುವ ಸಮೂಹ ಮಳೆಯಲ್ಲಿಯೂ ಕುಣಿದು ಕುಪ್ಪಳಿಸುವಂತೆ ಮಾಡಿತು.

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾದ ಐದನೇ ದಿನ ಕೋಕ್ ಸ್ಟುಡಿಯೋ ಪ್ರಾಯೋಜಿತ ಬಾಲಿವುಡ್ ಗಾಯಕಿ ಶೆರ್ಲಿ ಸೇಟಿ ಹಾಡಿದ ತೂ ಮೇರಿ ತೂಜೆ ಮೇರಿ' ಗೀತೆ, ಲಾಗ್ ಜಾಥಾ ಹೂಂ', ತೇರಿ ದಿವಾನಿ ತೇರಿ ದಿವಾನಿ' ಹಾಡುಗಳಿಗೆ ಪ್ರೇಕ್ಷಕರು ಮೈ ಬೆವರುವಂತೆ ಹೆಜ್ಜೆ ಹಾಕಿದರು.

ಮೈಸೂರು ದಸರಾ - ವಿಶೇಷ ಪುರವಣಿ

ಕಾರ್ಯಕ್ರಮಕ್ಕೂ ಮುನ್ನ ಮೈಸೂರಿನ ನವೀನ್ ಸಜ್ಜು ನಡೆಸಿಕೊಟ್ಟ ಹೃದಯ ಸಮುದ್ರ ಕಲಕಿ ಉಕ್ಕಿದ ದ್ವೇಷದ ಬೆಂಕಿ ಗೀತೆ, ಕವಿ ದ.ರಾ.ಬೇಂದ್ರೆ ಅವರ ಶ್ರಾವಣ ಬಂತು ಶ್ರಾವಣ ಬಂತು ಕಾಡಿಗೆ, ನಾಡಿಗೆ, ಬೀಡಿಗೆ... ಬಂತು ಶ್ರಾವಣ', 'ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ' ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಿದರು.

Audience was happy to hear Shirley Setia Song

ಲೂಸಿಯಾ ಸಿನಿಮಾದ ಎದೆಯೊಳಗಿನ ತಮತಮ ತಮಟೆ, ಯಾರೋ ಬಡ್ದಂಗ್ ಆಗ್ತೈತೆ', ಹೋಗುಮಾ ಹೋಗುಮಾ ಲಾಂಗು ಡೈವು ಹೋಗುಮಾ.. 'ಎಣ್ಣೆ ನಮ್ದು ಊಟ ನಿಮ್ದು...' ಹಾಡುಗಳು ಶುರುವಾಗುತ್ತಿದ್ದಂತೆಯೇ ಕುಳಿತಿದ್ದ ಯುವಕರೆಲ್ಲ ಮೇಲೆದ್ದು ಕುಣಿಯಲಾರಂಭಿಸಿದರು.

ಮೈಸೂರು ಯುವ ದಸರಾ: ಪ್ರೇಕ್ಷಕರನ್ನು ಕುಳಿತಲ್ಲೇ ಕುಣಿಯುವಂತೆ ಮಾಡಿದ ಸ್ಯಾಂಡಲ್ ವುಡ್ ನಟಿಯರುಮೈಸೂರು ಯುವ ದಸರಾ: ಪ್ರೇಕ್ಷಕರನ್ನು ಕುಳಿತಲ್ಲೇ ಕುಣಿಯುವಂತೆ ಮಾಡಿದ ಸ್ಯಾಂಡಲ್ ವುಡ್ ನಟಿಯರು

ಮುಂಬೈನ ಎಂ.ಜೆ. ಫೈವ್ ತಂಡದವರು ನಡೆಸಿಕೊಟ್ಟ ನೃತ್ಯವನ್ನು ನೋಡಿದ ಪ್ರೇಕ್ಷಕರು ಬೆರಗುಗಣ್ಣಿನಿಂದ ನೋಡುವಂತಾದರು. ಸಭಿಕರಿಗೂ ಮೊಬೈಲ್ ನಲ್ಲಿ ಫ್ಲಾಶ್ ಲೈಟ್ ಮಾಡಿ, ತಮ್ಮ ನೃತ್ಯಕ್ಕೆ ಹೆಜ್ಜೆ ಹಾಕುವಂತೆ ಎಂ.ಜೆ.ಫೈವ್ ತಂಡ ಹುರಿದುಂಬಿಸಿದರು.

Audience was happy to hear Shirley Setia Song

ಯುವ ದಸರಾದಲ್ಲಿ ಅರ್ಮಾನ್ ಮಲ್ಲಿಕ್ ಹಾಡಿಗೆ ಹುಚ್ಚೆದ್ದು ಕುಣಿದ ಪಡ್ಡೆಹೈಕ್ಳುಯುವ ದಸರಾದಲ್ಲಿ ಅರ್ಮಾನ್ ಮಲ್ಲಿಕ್ ಹಾಡಿಗೆ ಹುಚ್ಚೆದ್ದು ಕುಣಿದ ಪಡ್ಡೆಹೈಕ್ಳು

ವಿವಿಧ ಕಾಲೇಜು ತಂಡದವರು ನಡೆಸಿಕೊಟ್ಟ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಯುವಸಮೂಹದ ಮನ ಮುಟ್ಟಿತು.

English summary
Bollywood singer Shirley Setia performed on the fifth day of the youth dasara. Audience was happy to hear their song.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X