ಮಾಜಿ ಸಂಸದ ವಿಶ್ವನಾಥ್ ಪುತ್ರನ ಮೇಲೆ ಯುವಕರಿಂದ ದಾಳಿ
ಮೈಸೂರು, ಮಾರ್ಚ್ 15: ಮಾಜಿ ಸಂಸದ ಎಚ್.ವಿಶ್ವನಾಥ್ ಅವರ ಪುತ್ರ ಪೂರ್ವಜ್ ಮೆಲೆ ಯುವಕರ ಗುಂಪೊಂದು ದಾಳಿ ನಡೆಸಿದ ಘಟನೆ ಮಾ.15 ರ ಬೆಳಗ್ಗಿನ ಜಾವ ನಡೆದಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದ ಪೂರ್ವಜ್ ಬೆಳಗ್ಗಿನ ಜಾವ ಸುಮಾರು 1:45 ರ ವೇಳೆಗೆ ಮೈಸೂರಿನ ವಿವೇಕಾನಂದ ವೃತ್ತದ ಬಳಿ ತಮ್ಮ ಸ್ನೇಹಿತರನ್ನು ಡ್ರಾಪ್ ಮಾಡುವುದಕ್ಕೆಂದು ಹೋಗಿದ್ದರು.
ಈ ವೇಳೆ ಬಂದ ಕೆಲವು ಯುವಕರಿದ್ದ ಗುಂಪು, ಅವರ ಕತ್ತಿನಲ್ಲಿದ್ದ ಸರ ಎಳೆದು, ನಂತರ ಅವರ ಮೇಲೆ ದಾಳಿ ನಡೆಸಿದೆ. ನಂತರ ಹೇಗೋ ಪಾರಾಗಿ ಮನೆಗೆ ಬಂದರೆ, ಮನೆ ಬಳಿಯೂ ಕಾದುಕುಳಿತಿದ್ದ ಕೆಲವು ಯುವಕರ ಗುಂಪು ಅವರ ಕಪಾಳಕ್ಕೆ ಹೊಡೆದು, ದಾಳಿ ನಡೆಸಿದೆ.

ಆದರೆ ಈ ಕುರಿತು ಪೂರ್ವಜ್ ಕಡೆಯಿಂದ ಪೊಲಿಸರಿಗೆ ದೂರು ನೀಡಿದ ಮಾಹಿತಿ ಇಲ್ಲ.












Click it and Unblock the Notifications