ಮೈಸೂರು: ಹಾಡ ಹಗಲೇ ರೌಡಿಗಳ ಆರ್ಭಟ
ಮೈಸೂರು, ಡಿಸೆಂಬರ್ 13 :ತಮ್ಮ ಕಾರಿಗೆ ಅಪಘಾತ ಮಾಡಿದ್ದಾರೆಂದು ಆರೋಪಿಸಿ ಪುಂಡರು ಹಾಡಹಗಲೇ ಕಾರಿನ ಜನ ಕುಳಿತಿದ್ದಾಗಲೇ ಮಾರಕಾಸ್ತ್ರಗಳಿಂದ ಕಾರಿನ ಗಾಜನ್ನು ಒಡೆದು ಹಾಕಿ ದರ್ಪ ಮೆರಿದಿದ್ದಾರೆ.
ಮೈಸೂರಿನ ಸಿದ್ದಾರ್ಥ ಲೇ ಔಟ್ ನಲ್ಲಿ ಈ ಘಟನೆ ನಡೆದಿದ್ದು. ಗಾಯಿತ್ರಿಪುರಂ ನಿವಾಸಿ ವಿನೋದ್ ಗೆ ಸೇರಿದ ವ್ಯಾಗನರ್ ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಆಯುಧಗಳಿಂದ ದಾಳಿ ನಡೆಸಿ ಗಾಜುಗಳನ್ನು ಪುಡಿಗಟ್ಟಿದ್ದಾರೆ. ಸಿದ್ದಾರ್ಥ ಲೇಔಟ್ ನ ಜೈಶೀಲ ಮತ್ತು ಬೆಂಬಲಿಗರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ವಿನೋದ್ ಅವರು ತಮ್ಮ ಕಾರಿಗೆ ಗುದ್ದಿದ್ದಾರೆ ಎಂದು ಜೈಶೀಲ ಮತ್ತು ಬೆಂಬಲಿಗರು ವಿನೋದ್ ಕಾರಿನ ಮೇಲೆ ಸಿನಿಮೀಯ ರೀತಿ ದಾಳಿ ನಡೆಸಿದ್ದಾರೆ. ಬೆಳಿಗ್ಗೆಯಿಂದ ಕಾರು ಫಾಲೋ ಮಾಡಿ ಹೆಲಿಪ್ಯಾಡ್ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರಿನಲ್ಲಿ ಮಹಿಳೆಯರಿದ್ದಾರೆ ಎಂಬುದನ್ನೂ ಪರಿಗಣಿಸದೇ ರಾಜಾರೋಷವಾಗಿ ದಾಳಿ ನಡೆಸಿದ್ದಾರೆ.ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.












Click it and Unblock the Notifications