Breaking news; ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ; ಜಿಯಾಗ್ರಫಿ ಪ್ರೊಫೆಸರ್ ಅಮಾನತು
ಮೈಸೂರು, ಮೇ 04; ಪಿಎಸ್‌ಐ ನೇಮಕಾತಿ ಹಗರಣದ ಜೊತೆ ರಾಜ್ಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಹ ಸದ್ದು ಮಾಡುತ್ತಿದೆ. ಈಗಾಗಲೇ ಈ ಪ್ರಕರಣದಲ್ಲಿ ಸೌಮ್ಯಾ, ಪ್ರೊಫೆಸರ್ ನಾಗರಾಜ್ ಬಂಧಿಸಲಾಗಿದೆ.
ಬುಧವಾರ ಮೈಸೂರು ವಿಶ್ವವಿದ್ಯಾಲಯ ಜಿಯಾಗ್ರಫಿ ಪ್ರೊಫೆಸರ್ ನಾಗರಾಜ್ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ನಾಗರಾಜ್‌ರನ್ನು ಏಪ್ರಿಲ್ 27ರಂದು ಬಂಧಿಸಿದ್ದರು.
ಪ್ರೊಫೆಸರ್ ನಾಗರಾಜ್ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಆಗಿ ನೇಮಕ ಹೊಂದಿದ್ದರು. ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಅಸಿಸ್ಟೆಂಟ್ ಪ್ರೊಫೆಸರ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್ ತಂಗಿ ಮಗಳು ಕುಸುಮಾ ಎಂಬುವವರನ್ನು ಪೊಲೀಸರು ವಿಚಾರಣೆ ಮಾಡಿದ್ದರು.
ಬಂಧಿತ ನಾಗರಾಜ್ ಭೂಗೋಳ ಶಾಸ್ತ್ರ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದರು. ನಾಗರಾಜ್ ಮನೆಗೆ ಆಗಾಗ ಹೋಗುತ್ತಿದ್ದ ಆರೋಪಿ ಸೌಮ್ಯ ಅವರ ಪುಸ್ತಕಗಳನ್ನು ಪಡೆದು ಓದುತ್ತಿದ್ದರು. ಪ್ರಶ್ನೆ ಪತ್ರಿಕೆ ರಚನೆ ತಂಡದಲ್ಲಿ ಪ್ರೊಫೆಸರ್ ಇರುವುದು ಆರೋಪಿಗೆ ತಿಳಿದಿತ್ತು.
ನಾಗರಾಜ್ ಅವರ ಮನೆಯ ಟೇಬಲ್ ಮೇಲೆ ಇದ್ದ ಎನೋಲಪ್‌ನಲ್ಲಿ ಇದ್ದ ಪ್ರತ್ರಿಕೆಯ ಫೋಟೋವನ್ನು ಸೌಮ್ಯಾ ತೆಗೆದುಕೊಂಡಿದ್ದಳು. ಕುಸುಮಾ ಬಳಿಯೂ ಫೋಟೋ ತೆಗೆದು ಕಳಿಸುವಂತೆ ಹೇಳಿ ಪ್ರಶ್ನೆಗಳನ್ನು ಸಂಗ್ರಹ ಮಾಡಿದ್ದಳು.
ನಾಗರಾಜ್ ಸದ್ಯ ಪೊಲೀಸರ ವಶದದಲ್ಲಿದ್ದು ಕುಲಸಚಿವ (ಮೌಲ್ಯಮಾಪನ) ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಅಮಾನತುಗೊಂಡಿರುವ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಸಹ ನಡೆಸಲಾಗುತ್ತದೆ.












Click it and Unblock the Notifications