ಅಪರಾಧ ತಡೆಗೆ ರೆಡ್ ಎಫ್ ಎಂ ಜೊತೆ ಕೈಜೋಡಿಸಿದ ಅರ್ಜುನ್ ಜನ್ಯಾ

ಮೈಸೂರು, ಡಿಸೆಂಬರ್ 15 : ಈಗಾಗಲೇ ವಿನೂತನ ಕಾರ್ಯಕ್ರಮದಿಂದ ಚಿರಪರಿಚಿತವಾಗಿರುವ ರೆಡ್ ಎಫ್ ಎಂ ತಂಡ ಮೈಸೂರಿಗರಿಗೆ ಹೊಸ ಸಪ್ರೈಸ್ ಕೊಡಲು ಸಜ್ಜಾಗುತ್ತಿದೆ. ಹೆಚ್ಚುತ್ತಿರುವ ಅಪರಾಧಗಳ ಪ್ರಮಾಣವನ್ನು ಕಡಿಮೆ ಮಾಡಲು ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಜತೆಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಸಂಗೀತ ಸುಧೆಯನ್ನು ಮೈಸೂರಿಗರಿಗೆ ಉಣಬಡಿಸಲು ರೆಡ್ ಎಫ್ಎಂ ಸಜ್ಜಾಗಿದೆ.

ಪ್ರತಿವರುಷ ಡಿಸೆಂಬರ್ ನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಅಪರಾಧ ತಡೆ ಮಾಸಾಚರಣೆಗೆ ಈ ಬಾರಿ ರೆಡ್ ಎಫ್ ಎಂ ಕೈ ಜೋಡಿಸಿದ್ದು, ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ವಿಭಿನ್ನ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಡಿಸೆಂಬರ್ 17ರಂದು ಭಾನುವಾರ ಸಂಜೆ 6.30ಕ್ಕೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಖ್ಯಾತ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಅವರ ಲೈವ್ ಕಾನ್ಸರ್ಟ್ ಏರ್ಪಡಿಸಿದೆ.

Arjun Janya joins his hands with Red FM to prevent crimes in Mysuru

'ಸೆಲೆಬ್ರೇಟ್ ರೆಸ್ಪಾಸಿಬಲಿಟಿ' ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, 21 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಮೈಸೂರಿಗರಿಗೆ ವಿಭಿನ್ನ ಸಂಗೀತ, ಗಾಯನದೊಂದಿಗೆ ಮೋಡಿ ಮಾಡಲು ಅರ್ಜುನ್ ಜನ್ಯ ಸಿದ್ಧರಾಗಿದ್ದಾರೆ. ಇದರೊಂದಿಗೆ ಸಂಗೀತದ ಜತೆಗೆ ಸಾಮಾಜಿಕ ಕಳಕಳಿ ಮೆರೆಯುವ ಕಾರ್ಯಕ್ರಮವನ್ನು ರೆಡ್ ಎಫ್ಎಂ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಳ್ಳಲಿದ್ದು, ಇದೇ ವೇಳೆ ಮೈಸೂರು ನಗರ ಪೊಲೀಸ್ ಆಯುಕ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಡಿಸಿಪಿಗಳನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದು ರೆಡ್ ಎಫ್ ಎಂನ ರಾಘವ್ ಒನ್ ಇಂಡಿಯಾಕ್ಕೆ ತಿಳಿಸಿದರು.

ಕೇವಲ ವ್ಯಾಪರಕ್ಕೆ ಸೀಮಿತವಾಗದೆ ಸಾಮಾಜಿಕ ಕಳಕಳಿಯತ್ತಲೂ ಮುಂದಡಿಯಿಟ್ಟಿರುವ ರೆಡ್ ಎಫ್ ಎಂ ತಂಡ, ಹಿಂದೆಯೂ ಹಲವು ಸಮಾಜಮುಖಿ ಕಾಯಕಗಳನ್ನು ನಡೆಸಿ ಜನರನ್ನು ತನ್ನತ್ತ ಸೆಳೆದಿದೆ. ಒಟ್ಟಾರೆ ಅವರ ಕಾರ್ಯಕ್ರಮ ಯಶಸ್ಸು ಕಾಣಸಿಗಲಿ ಎಂಬುದೇ ನಮ್ಮ ಅಭಿಲಾಷೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+