ಮೈಸೂರು: ಮಗು ಮೂತ್ರ ಮಾಡಿದ್ದಕ್ಕೆ ಬರೆ ಹಾಕಿದ ಅಂಗನವಾಡಿ ಸಹಾಯಕಿ
ಮೈಸೂರು, ಸೆಪ್ಟೆಂಬರ್ 5: ಮೂರು ವರ್ಷದ ಮಗು ಅಂಗನವಾಡಿಯಲ್ಲಿ ಮೂತ್ರ ಮಾಡಿದ್ದಕ್ಕೆ ಕುಪಿತಗೊಂಡ ಅಂಗನವಾಡಿ ಸಹಾಯಕಿ ಮಗುವಿನ ಕಾಲಿಗೆ ಬರೆ ಎಳೆದಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಶ್ರೀರಾಂಪುರ ಬಡಾವಣೆಯ 2ನೇ ಹಂತದಲ್ಲಿನ ದೇವಯ್ಯನ ಹುಂಡಿ ಅಂಗನವಾಡಿಯಲ್ಲಿ ಈ ಕೃತ್ಯ ನಡೆದಿದೆ. ಅಂಗನವಾಡಿ ಸಹಾಯಕಿ ನೀಲಮ್ಮ ಎಂಬುವವರು ಗ್ಯಾಸ್ ಸ್ಟೌವ್ ನಲ್ಲಿ ಚಾಕುವನ್ನು ಕಾಯಿಸಿ ಮೂರು ವರ್ಷದ ಮಗುವಿಗೆ ಬರೆ ಎಳೆದಿದ್ದಾರೆ.
ಅಂಗನವಾಡಿ ಕೇಂದ್ರದಲ್ಲೇ ಮಗು ಮೂತ್ರ ಮಾಡಿದೆ ಎಂದು ಕೋಪಗೊಂಡು ಆಯಾ ನೀಲಮ್ಮ ಈ ಕೃತ್ಯವೆಸಗಿದ್ದಾರೆ ಎಂದು ಮಗುವಿನ ತಾಯಿ ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಮಗು ಪೋಷಕರು ಹಾಗೂ ಗ್ರಾಮಸ್ಥರು ಅಂಗನವಾಡಿ ಎದುರು ಜಮಾಯಿಸಿ ಅಂಗನವಾಡಿ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಾರಾ ನಂದೀಶ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಸದ್ಯ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂಗನವಾಡಿ ಕಾರ್ಯಕರ್ತೆ ಪೊಲೀಸರ ವಶದಲ್ಲಿದ್ದಾಳೆ.












Click it and Unblock the Notifications