ಶೀಘ್ರದಲ್ಲೇ ಕನ್ನಡದ ಪ್ರಾಚೀನ ಪಠ್ಯಗಳನ್ನು ಬೋಧಿಸುವ ಆನ್‌ಲೈನ್ ಸರ್ಟಿಫಿಕೇಟ್ ಕೋರ್ಸ್

ಮೈಸೂರು, ನವೆಂಬರ್‌ 30: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಿಂದ ಶೀಘ್ರದಲ್ಲೇ ಆನ್‌ ಲೈನ್ ಮೂಲಕ ಕೆಎಸ್‌ಒಯು ಸಹಯೋಗದಲ್ಲಿ ಕನ್ನಡದ ಪ್ರಾಚೀನ ಪಠ್ಯಗಳನ್ನು ಬೋಧಿಸುವ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಿದೆ ಎಂದು ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ತಿಳಿಸಿದರು.

ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧಯನ ಕೇಂದ್ರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧಯನ ಕೇಂದ್ರ ರಾಜ್ಯೋತ್ಸವ ಪ್ರಯುಕ್ತ ೫೨ ಮಂದಿ ವಿದ್ವಾಂಸರಿಂದ ವೆಬಿನಾರ್ ಆಯೋಜಿಸಲಾಗಿದ್ದು, ಆನ್‌ ಲೈನ್ ಮೂಲಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕನ್ನಡದ ಪ್ರಾಚೀನ ಪಠ್ಯಗಳನ್ನು ಬೋಧಿಸುವ ಹೊಸ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗುತ್ತಿದೆ. ಅದಕ್ಕೆ ಎಲ್ಲಾ ಸಿದ್ಧತೆ ನಡೆದಿದೆ ಎಂದರು.

An Online Certificate Course Teaching Ancient Kannada Texts Is Coming Soon

ಜತೆಗೆ ಕನ್ನಡ ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದ 22 ಪುಸ್ತಕಗಳನ್ನು ಪ್ರಕಟಿಸುತ್ತಿದ್ದು, ಶೀಘ್ರದಲ್ಲಿಯೇ ಬಿಡುಗಡೆಯೂ ಆಗಲಿದೆ. ಇದಕ್ಕೆ ಸಿಐಐಎಲ್ ಸಹಕಾರ ನೀಡಿದ್ದು, ಯೋಜನೆ ಅನುಷ್ಠಾನದಲ್ಲಿದೆ ಎಂದು ಮಾಹಿತಿ ನೀಡಿದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಮಾತನಾಡಿ, ಕನ್ನಡ ಸಂಸ್ಕೃತಿ ಸಿನಿಕವಲ್ಲ. ಪರಧಾಷೆ, ಧರ್ಮ ಸಹಿಷ್ಣುತೆ ಮತ್ತು ಕೂಡಿ ಬಾಳುವ ಸೌಹಾರ್ದ ಗುಣ ನಾಡಿನ ಜನರಲ್ಲಿ ಅಂತರ್ಗತವಾಗಿ ಬಂದಿದೆ ಎಂದು ಹೇಳಿದರು.

ಪಂಪ, ರನ್ನ, ವಚನಕಾರರು, ಹರಿಹರ-ರಾಘವಾಂಕ, ದಾಸ ಶ್ರೇಷ್ಠರು ಕನ್ನಡ ನುಡಿಯನ್ನು ಬೆಳಗಿzರೆ. ಚಾಲುಕ್ಯ-ರಾಷ್ಟ್ರಕೂಟ- ಹೊಯ್ಸಳ-ವಿಜಯನಗರದ ಅರಸರು ನಾಡನ್ನು ಕಟ್ಟಿzರೆ. ದಕ್ಷಿಣಾದಿ ಶಿಲ್ಪಕಲೆ, ಚಿತ್ರಕಲೆ, ಸಂಗೀತ-ನೃತ್ಯಕಲೆಗಳ ತವರೂರಾಗಿದೆ ಎಂದು ಹೇಳಿದರು.

ಬಿಎಂಶ್ರೀ ಅವರು ಪಂಪ ಭಾರತ, ಕುಮಾರವ್ಯಾಸ ಭಾರತದ ಮೂಲಕ ಇಡೀ ಜಗತ್ತಿನಲ್ಲಿ ಕನ್ನಡ ಪ್ರತಿಷ್ಠಾಪಿಸಬ ಎಂದಿದ್ದರು. ಕನ್ನಡ- ಇಂಗ್ಲಿಷ್ ಭಾಷಾ ಪರಿಣತರಾದ ಅವರ ಮಾತಿನಲ್ಲಿ ಸತ್ಯವಿದೆ. ಆದರೆ, ಪ್ರಸ್ತುತ ಇಂಗ್ಲಿಷ್ ಅನ್ನು ವ್ಯವಹಾರಿಕವಾಗಿ ಕನ್ನಡಿಗರೇ ಹೆಚ್ಚು ಬಳಕೆ ಮಾಡುತ್ತಿರುವುದು ಬೇಸರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಕನ್ನಡಿಗರ ಔದಾರ್ಯವೇ ಉರುಳಾಗುತ್ತಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು ೧೬ ವರ್ಷಗಳಾಗಿದ್ದರೂ ಸ್ವಾಯತ್ತತೆ ಸಿಕ್ಕಿಲ್ಲ. ರಾಜಕಾರಣಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಹೇಳಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ಲೇಖಕ ಪ್ರೊ.ಶುಭಚಂದ್ರ, ಶಾಸ್ತ್ರೀಯ ಭಾಷಾ ವಿಭಾಗದ ಸಂಯೋಜಕ ಪ್ರೊ.ಎಲ್.ಆರ್.ಪ್ರೇಮ್‌ಕುಮಾರ್ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+