ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಆಗ್ರಹ

ಮೈಸೂರು, ಜೂನ್. 06: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ನೀಡಿರುವ ಹೇಳಿಕೆ ಭಾರಿ ಪರ- ವಿರೋಧ ಚರ್ಚೆಗೆ ಕಾರಣವಾಗಿದೆ. ರೈತ ಸಮುದಾಯದ ಹಿತ ಕಾಪಾಡುವ ದೃಷ್ಠಿಯಿಂದ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಒತ್ತಾಯಿಸಿದೆ.

ಮಂಗಳವಾರ ಪಿರಿಯಾಪಟ್ಟಣ ತಾಲೂಕು ಆಡಳಿತ ಭವನದ ಬಳಿ ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಪ್ರತಿಭಟನೆ ನಡೆಸಿದ್ದು, ರೈತ ಸಮುದಾಯದ ಹಿತ ದೃಷ್ಠಿಯಿಂದ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವುದು ಅಗತ್ಯ ಎಂದು ಆಗ್ರಹಿಸಿದ್ದು, ಈ ಬಗ್ಗೆ ಉಪ ತಹಶೀಲ್ದಾರ್ ಟ್ರೀಝಾ ಅಶೋಕ್ ರವರಿಗೆ ಮನವಿ ಪತ್ರ ಸಲ್ಲಿಸಿದೆ.

Amendment of Prohibition of Cow Slaughter Act is necessary: activists

ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಮುಖಂಡ, ತಾ.ಪಂ ಮಾಜಿ ಸದಸ್ಯ ಟಿ.ಈರಯ್ಯ, "2020 ನೇ ಸಾಲಿನಲ್ಲಿ ಬಿಜೆಪಿ ಸರ್ಕಾರದಲ್ಲಿ ಕೈಗೊಂಡ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಗೋ ಶಾಲೆಗಳ ಹೆಸರಿನಲ್ಲಿ ತಮ್ಮ ಪಕ್ಷದ ಪರ ಇರುವ ಸಂಘಟನೆಗಳ ಕಾರ್ಯಕರ್ತರು ಜಾತಿ, ಧರ್ಮಗಳ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಗೊಂದಲವನ್ನು ಸೃಷ್ಠಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

"ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದ್ದ ಪರಿಣಾಮ ಗೋವುಗಳು ಸಂರಕ್ಷಣೆ ಹೆಸರಿನಲ್ಲಿ ಆರಂಭಿಸಿದ ಗೋ ಶಾಲೆಗಳಲ್ಲಿ ಹಾಲು ಮತ್ತು ಸಗಣಿ, ಹೋರಿ, ಕರು ಹಸುಗಳು ಇವುಗಳಿಗೆ ಬೇಕಾಗುವ ಮೇವು, ಜಾಗ, ಶೆಡ್ಡ್ ನಿರ್ಮಾಣ ವೆಚ್ಚ ಸೇರಿದಂತೆ ಎಲ್ಲಾ ರೀತಿಯಲ್ಲಿ ಮೋಸದ ದಂದೆ ಮಾಡಲಾಗುತ್ತಿದೆ" ಎಂದು ಕಿಡಿಕಾರಿದ್ದಾರೆ.

Amendment of Prohibition of Cow Slaughter Act is necessary: activists

"ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳು ಸಾವನ್ನಪ್ಪಿದರೆ ಅವುಗಳನ್ನು ರೈತರ ಕೊಟ್ಟಿಗೆ ಅಥವಾ ಸಾವನ್ನಪ್ಪಿದ ಸ್ಥಳದಿಂದ ಅದನ್ನು ಹೊತ್ತು ಸಾಗಿಸುವ ಸ್ಥಳದವರೆಗೂ ಸಾಗಿಸಲು ದೊಡ್ಡ ಪ್ರಮಾಣದ ವಾಹನದ ಅವಶ್ಯಕತೆ ಮತ್ತು ಹೂತು ಹಾಕಲು ಜಾಗ ಅಗತ್ಯವಾಗಿದೆ. ಮೃತದೇಹವನ್ನು ಮಣ್ಣು ಮಾಡಲು ಜೆಸಿಬಿ ಯಂತ್ರವನ್ನು ಬಳಸಬೇಕು. ರೈತ ಸಾಕಿದ ಮತ್ತು ಅಪಾರ ವೆಚ್ಚದಲ್ಲಿ ಖರೀದಿಸುವಂತಹ ಜಾನುವಾರು ಸತ್ತರು ಮತ್ತೆ ಹಣದ ಖರ್ಚಿನ ಹೊರೆಯನ್ನು ಹೊರಬೇಕಾಗಿದೆ" ಎಂದು ರೈತ ಸಂಕಷ್ಟ ವಿವರಿಸಿದ್ದಾರೆ.

"ಪ್ರಸ್ತುತ ನಡೆಯುತ್ತಿರುವ ಗೋಶಾಲೆಯ ಸಂಖ್ಯೆಗಳು ಮತ್ತು ಖರ್ಚಿನ ವೆಚ್ಚವನ್ನು ಬಹಿರಂಗಪಡಿಸಲಾಗುತ್ತಿದೆ. ಆದರೆ, ದನಕರುಗಳ ಹೆಚ್ಚಳ ಮತ್ತು ಗೊಬ್ಬರ ಉತ್ಪಾದನೆ, ಮೃತಪಟ್ಟ ದನಕರುಗಳನ್ನು ಏನು ಮಾಡುತ್ತಿದ್ದೀರಿ..? ಎಂದು ವಿವರಗಳನ್ನು ನೀಡುತ್ತಿಲ್ಲ. ಇದರ ಬಗ್ಗೆ ಸರ್ಕಾರವು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ" ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಜಿಲ್ಲಾ ಆದಿ ಜಾಂಬವ ಸಂಘದ ಉಪಾಧ್ಯಕ್ಷ ಸೀಗೂರು ವಿಜಯಕುಮಾರ್ ಮಾತನಾಡಿ "ಗೋ ಶಾಲೆಗಳಿಂದ ಹೊರ ದೇಶಗಳಿಗೆ ಗೋಮಾಂಸವನ್ನು ರಫ್ತು ಮಾಡುತ್ತಿರುವ ಶಂಕೆ ಇದೆ. ಗೋವುಗಳ ಹೆಸರಿನಲ್ಲಿ ಆದಾಯದ ದಂಧೆಯಲ್ಲಿ ಬಿಜೆಪಿ ಪರ ಸಂಘಟನೆಗಳು ತೊಡಗಿರುವುದು ಕಂಡು ಬಂದಿದ್ದು, ಕೂಡಲೇ ಇದು ನಿಲ್ಲಿಸಬೇಕು. ವ್ಯವಸಾಯಕ್ಕೆ ಯೋಗ್ಯವಿಲ್ಲದ ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಸಂರಕ್ಷಣೆ ಮಾಡಲು ಕೇವಲ ಮೇವಿನ ಖರ್ಚು ಮಾತ್ರವಲ್ಲದೆ, ಮಾನವನ ಶ್ರಮವೂ ಹೆಚ್ಚಾಗುತ್ತಿದೆ" ಎಂದಿದ್ದಾರೆ.

"ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪಶು ಸಂಗೋಪನೆ ಸಚಿವರಾಗಿರುವ ಕೆ ವೆಂಕಟೇಶ್ ಎಮ್ಮೆ, ಕೋಣವನ್ನು ಮಾಂಸಕ್ಕಾಗಿ ಬಳಸಿಕೊಳ್ಳುವಂತೆ ವಯಸ್ಸಾದ ಗೋವುಗಳನ್ನು ಮಾಂಸಕ್ಕೆ ಏಕೆ ಬಳಸಿಕೊಳ್ಳಬಾರದು ಎಂದು ಹೇಳುವ ಮೂಲಕ ಗೋ ಹತ್ಯೆ ನಿಷೇಧ ಕಾಯ್ದೆ ಸಡಿಲಿಕೆ ಬಗ್ಗೆ ಪ್ರಸ್ತಾಪಿಸಿರುವುದು ಸ್ವಾಗತಾರ್ಹ. 1964ರ ಕಾಯ್ದೆಯ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಸಚಿವ ಸಂಪುಟದಲ್ಲಿ ಗೋಹತ್ಯ ನಿಷೇಧ ಕಾಯ್ದೆಯನ್ನು ಸಡಿಲ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ತಪ್ಪಿಸಬೇಕು. ಬಿಜೆಪಿ ಅಂಗ ಸಂಸ್ಥೆಗಳಿಂದ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿಯನ್ನು ತಕ್ಷಣವೇ ನಿಲ್ಲಿಸಿ ರೈತರಿಗಾಗಿರುವ ತೊಂದರೆ ನಿವಾರಿಸಬೇಕು" ಎಂದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+