ಜನರನ್ನು ದಸರಾಕ್ಕೆ ಆಹ್ವಾನಿಸಲಿದೆ ಆಮಂತ್ರಣ ರಥ

ಮೈಸೂರು, ಸೆ. 15 : ನಾಡಹಬ್ಬ ಮೈಸೂರು ದಸರಾಕ್ಕೆ ರಾಜ್ಯದ ಜನರನ್ನು ಆಹ್ವಾನಿಸಲು ರೂಪಿಸಿರುವ ಆಮಂತ್ರಣ ರಥಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಚಾಲನೆ ನೀಡಿದ್ದಾರೆ. ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಸಾಗುವ ಆನೆಯ ಮಾದರಿ­ಯಲ್ಲಿ ರಥವನ್ನು ನಿರ್ಮಿಸಲಾಗಿದ್ದು, ಇದು ರಾಜ್ಯಾದ್ಯಂತ ಸಂಚರಿಸಿ ಜನರನ್ನು ಆಹ್ವಾನಿಸಲಿದೆ.

ಆಮಂತ್ರಣ ರಥಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬಾವಿಲಾಸ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವ­ಸ್ಥಾನದ ಬಳಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ದಸರಾ ಮಹೋತ್ಸವದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಈ ರಥವನ್ನು ನಿರ್ಮಿಸಲಾಗಿದೆ. ರಾಜ್ಯದ ವಿವಿಧೆಡೆ ಸಂಚರಿಸಿ ನಾಡ­ಹಬ್ಬಕ್ಕೆ ಜನಸಾಮಾನ್ಯರಿಗೆ ಅಧಿಕೃತ ಆಹ್ವಾನ ನೀಡಲಿದೆ ಎಂದು ಅವರು ತಿಳಿಸಿದರು. [ದಸರಾ ಮಾಹಿತಿ ಇಲ್ಲಿದೆ ನೋಡಿ]

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ.ಪಾಟೀಲ್, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ಪುಷ್ಪ ಅಮರನಾಥ್, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಶಿಖಾ ಮುಂತಾದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಆಮಂತ್ರಣ ರಥಕ್ಕೆ ಚಾಲನೆ ನೀಡಿದ ಸಿಎಂ

ಆಮಂತ್ರಣ ರಥಕ್ಕೆ ಚಾಲನೆ ನೀಡಿದ ಸಿಎಂ

ನಾಡಹಬ್ಬ ಮೈಸೂರು ದಸರಾಕ್ಕೆ ರಾಜ್ಯದ ಜನರನ್ನು ಆಹ್ವಾನಿಸಲು ರೂಪಿಸಿರುವ ಆಮಂತ್ರಣ ರಥಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಅಂಬಾವಿಲಾಸ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವ­ಸ್ಥಾನದ ಬಳಿ ಚಾಲನೆ ನೀಡಿದ್ದಾರೆ. ಈ ಬಾರಿಯ ದಸರಾ ಮಹೋತ್ಸವ ಸೆ.25ರಿಂದ ಅ.4ರವರೆಗೆ ನಡೆಯಲಿದೆ.

ಜಂಬೂ ಸವಾರಿ ಮಾದರಿಯ ರಥ

ಜಂಬೂ ಸವಾರಿ ಮಾದರಿಯ ರಥ

ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಸಾಗುವ ಆನೆಯ ಮಾದರಿ­ಯಲ್ಲಿ ರಥವನ್ನು ನಿರ್ಮಿಸಲಾಗಿದ್ದು, ಇದು ರಾಜ್ಯಾದ್ಯಂತ ಸಂಚರಿಸಿ ಜನರನ್ನು ದಸರಾಕ್ಕೆ ಬರುವಂತೆ ಆಹ್ವಾನಿಸಲಿದೆ.

ಮೊದಲ ಹಂತದ ಆಮಂತ್ರಣ

ಮೊದಲ ಹಂತದ ಆಮಂತ್ರಣ

ಮೊದಲ ಹಂತದಲ್ಲಿ ಮೈಸೂರಿನಿಂದ ಹೊರಟ ರಥ ಕೆ.ಆರ್‌.ನಗರ, ಹೊಳೆನರಸೀಪುರ, ಹಾಸನ, ಅರಕಲಗೂಡು, ಮಡಿಕೇರಿ, ಸುಳ್ಯ, ಪುತ್ತೂರು, ಮಂಗಳೂರು, ಉಡುಪಿ, ತೀರ್ಥಹಳ್ಳಿ, ಶಿವಮೊಗ್ಗ, ಸಾಗರ, ಹೊನ್ನಾವರ, ಕಾರವಾರ, ಕಲಘಟಗಿ, ಹುಬ್ಬಳ್ಳಿ, ಧಾರವಾಡ ತಲುಪಿ ಜನರಿಗೆ ದಸರಾಗೆ ಬರುವಂತೆ ಆಹ್ವಾನ ನೀಡಲಿದೆ.

ಅ.3ರಂದು ಮೈಸೂರಿಗೆ ವಾಪಸ್

ಅ.3ರಂದು ಮೈಸೂರಿಗೆ ವಾಪಸ್

ಎರಡನೇ ಹಂತದಲ್ಲಿ ಆಮಂತ್ರಣ ರಥ ಬೆಳಗಾವಿ, ಬೈಲಹೊಂಗಲ, ರಾಮದುರ್ಗ, ಬಾಗಲಕೋಟೆ, ಬೀಳಗಿ, ವಿಜಾಪುರ, ಸಿಂದಗಿ, ಜೇವರ್ಗಿ, ಗುಲ್ಬರ್ಗ, ಚಿತ್ತಾಪುರ, ದೇವದುರ್ಗ, ರಾಯಚೂರು, ಮಾನ್ವಿ, ಸಿಂಧನೂರು, ಗಂಗಾವತಿ, ಹೊಸಪೇಟೆ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು, ರಾಮನಗರ, ಮಂಡ್ಯ, ಚಾಮರಾಜನರದಲ್ಲಿ ಸಂಚರಿಸಿ ಅ. 3ರಂದು ಮೈಸೂರಿಗೆ ವಾಪಸ್ ಆಗಲಿದೆ.

ಮೊದಲ ಬಾರಿಗೆ ಇಂತಹ ಪ್ರಯತ್ನ

ಮೊದಲ ಬಾರಿಗೆ ಇಂತಹ ಪ್ರಯತ್ನ

ದಸರಾ ಮಹೋತ್ಸವದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಈ ರಥವನ್ನು ನಿರ್ಮಿಸಲಾಗಿದೆ. ರಾಜ್ಯದ ವಿವಿಧೆಡೆ ಸಂಚರಿಸಿ ನಾಡ­ಹಬ್ಬಕ್ಕೆ ಜನಸಾಮಾನ್ಯರಿಗೆ ಇದು ಅಧಿಕೃತ ಆಹ್ವಾನ ನೀಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+