ಇವರೇ ನೋಡಿ, ನಮ್ಮ ಮೈಸೂರು ಯುವರಾಜ ಆದ್ಯವೀರ್!
ಮೈಸೂರು, ಅಕ್ಟೋಬರ್ 08: ದಸರಾ ಸಂಭ್ರಮದಲ್ಲಿರುವ ಮೈದೂರು ಅರಮನೆಯಲ್ಲಿ ಈ ಬಾರಿಯ ದಸರಾ ಮತ್ತಷ್ಟು ಕಳೆಗಟ್ಟಿದ್ದ ಪುಟ್ಟ ಆದ್ಯವೀರನ ಕಾರಣಕ್ಕೆ....
ರಾಜಮಾತೆ ಪ್ರಮೋದಾ ದೇವಿ ಅವರು ತಮ್ಮ ಮೊಮ್ಮಗ ಆದ್ಯವೀರನನ್ನು ಎತ್ತಿಕೊಂಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೋಮವಾರ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಲಾಗಿದ್ದು, ಈ ಸಂದರ್ಭದಲ್ಲಿ ಮಹಾರಾಜ ಯದುವೀರ್ ಅರಸ್, ಮಹಾರಾಣಿ ತ್ರಿಷಿಕಾದೇವಿ ಮತ್ತು ಯುವರಾಜ ಆದ್ಯವೀರ್ ಭಾಗಿಯಾಗಿದ್ದರು.
ರಾಜಮಾತೆ, ಯುವರಾಜ. pic.twitter.com/qa2EabwP2x
— Namma Mysuru (@NammaMysuruInfo) October 7, 2019
2017 ರ ಡಿಸೆಂಬರ್ ನಲ್ಲಿ ಜನಿಸಿದ ಆದ್ಯವೀರನಿಗೆ ಈಗ ಒಂದು ಮುಕ್ಕಾಲು ವರ್ಷ. ಇದು ಅವನಿಗೆ ಎರಡನೇ ದಸರಾ ಆಗಿದ್ದು, ಆತನ ಉಪಸ್ಥಿತಿಯಿಂದ ಅರಮನೆಯಲ್ಲಿ ದಸರಾ ಮತ್ತಷ್ಟು ಕಳೆಗಟ್ಟಿತ್ತು.












Click it and Unblock the Notifications