ನೆರೆಪೀಡಿತರ ನೋವಿಗೆ ಸ್ಪಂದಿಸಿದ ನಟಿ ಭಾರತಿ ವಿಷ್ಣುವರ್ಧನ್
ಮೈಸೂರು, ಆಗಸ್ಟ್ 20: ಮೈಸೂರಿನ ನಂಜನಗೂಡು ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದು ಅವರಿಗೆ ಡಾ. ವಿಷ್ಣುವರ್ಧನ್ ಪತ್ನಿ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ನಟ ಅನಿರುದ್ಧ್ ಸಾಂತ್ವನ ಹೇಳಿದರು.
ನಂಜನಗೂಡಿನ ಕಪಿಲಾ ಪ್ರವಾಹದಿಂದ ಮನೆ ಕಳೆದುಕೊಂಡ ಜನ ನಂಜನಗೂಡಿನ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು. ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅವರ ಅಳಿಯ ನಟ ಅನಿರುದ್ಧ ಅಲ್ಲಿಗೆ ಹೋಗಿ ಅಲ್ಲಿದ್ದ ಮಹಿಳೆಯರು ಹಾಗೂ ಮಕ್ಕಳ ಜೊತೆ ಕುಳಿತು ಮಾತನಾಡಿದರು.

ಅಷ್ಟೇ ಅಲ್ಲದೆ ಸಂತ್ರಸ್ತರಿಗೆ ಸ್ವೆಟರ್, ಬಟ್ಟೆ, ಬಿಸ್ಕೆಟ್ ಮತ್ತು ಕೆಲ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಅವರ ಕಷ್ಟಕ್ಕೆ ಮುಂದೆ ಸೂಕ್ತ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೂ ಮುನ್ನ ನಟಿ ಭಾರತಿ ವಿಷ್ಣುವರ್ಧನ್ ನಂಜನಗೂಡಿಗೆ ಭೇಟಿ ನೀಡಿ
ಶ್ರೀಕಂಠೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.












Click it and Unblock the Notifications