ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೊಡ್ಡ ನಟರು ಎಂಬ ಮಾತ್ರಕ್ಕೆ ರಜನಿ, ಕಮಲ್ ಮಾತು ಕೇಳಬೇಕಾ?

By Yashaswini
|
Google Oneindia Kannada News

ಮೈಸೂರು, ಏಪ್ರಿಲ್ 21: ಆಡಳಿತ ನಡೆಸುವ ಸರ್ಕಾರವನ್ನು ಪ್ರಶ್ನಿಸುವ ಮನೋಭಾವವನ್ನು ಜನರಲ್ಲಿ ಬೆಳೆಸುವ ಉದ್ದೇಶದಿಂದ ಜಸ್ಟ್ ಆಸ್ಕಿಂಗ್ ಅಭಿಯಾನ ನಡೆಸುತ್ತಿರುವ ನಟ ಪ್ರಕಾಶ್ ರೈ, ಮೈಸೂರಿನಲ್ಲಿ ಬಿಜೆಪಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು. ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಕೋಮುವಾದ, ನಟರ ರಾಜಕೀಯ ಪ್ರವೇಶ, ಕಾವೇರಿ ವಿವಾದ ಮುಂತಾದವುಗಳ ಕುರಿತು ಮಾತನಾಡಿದರು.

ಅವರ ಮಾತಿನ ಕೆಲವು ಪ್ರಮುಖ ಅಂಶಗಳು ಇಲ್ಲಿವೆ

ಕರ್ನಾಟಕ ಚುನಾವಣೆ ಬಗ್ಗೆ ಮಹತ್ವದ ಸುಳಿವು ನೀಡಿದ ಪ್ರಕಾಶ್ ರೈಕರ್ನಾಟಕ ಚುನಾವಣೆ ಬಗ್ಗೆ ಮಹತ್ವದ ಸುಳಿವು ನೀಡಿದ ಪ್ರಕಾಶ್ ರೈ

* ಕೋಮುವಾದಿ ಶಕ್ತಿಗಳಿಂದ ಸಮಾಜಕ್ಕಾಗುತ್ತಿರುವ ಅಪಾಯದ ಬಗ್ಗೆ ತಿಳಿಸಲು ಜಸ್ಟ್ ಆಸ್ಕಿಂಗ್ ಅಭಿಯಾನದ ಪ್ರಯತ್ನ ಮಾಡುತ್ತಿದ್ದೇನೆ. ನಾನು ಇದನ್ನು ಯಾವುದೋ ಒಂದು ಪಕ್ಷದ ಮೂಲಕ ಮಾಡಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕೋಮುವಾದಿಗಳ ರಾಜಕಾರಣ ಬೇಡ.

Actor Prakash Rai addressing media at mysore

* ಎಡ ಮತ್ತು ಬಲಪಂಥೀಯ ಪರ ನಿಲುವು ಹೊಂದಿರುವ ಪತ್ರಕರ್ತರು ಇದ್ದಾರೆ ಎನ್ನುವುದು ಸತ್ಯವಾದರೂ ನಾನು ಪತ್ರಕರ್ತರನ್ನು ನಂಬುತ್ತೇನೆ.

* ಕಮಲ ಹಾಸನ್, ರಜನಿಕಾಂತ್ ಏನು ದೊಡ್ಡ ನಟರು ಎಂದ ಮಾತ್ರಕ್ಕೆ ಅವರು ಹೇಳಿದ್ದನ್ನೆಲ್ಲಾ ಕೇಳಬೇಕಾ? ಅವರು ಮಾಡಿರುವುದೇ ತಪ್ಪು. ನಾನು ಅವರನ್ನು ಯಾಕೆ ಕೇಳಲಿ.

ಕಾವೇರಿ ಬಗ್ಗೆ ನನ್ನನ್ನಲ್ಲ ನೀರಾವರಿ ತಜ್ಞರ ಅಭಿಪ್ರಾಯ ಕೇಳಿ: ಪ್ರಕಾಶ್‌ ರೈಕಾವೇರಿ ಬಗ್ಗೆ ನನ್ನನ್ನಲ್ಲ ನೀರಾವರಿ ತಜ್ಞರ ಅಭಿಪ್ರಾಯ ಕೇಳಿ: ಪ್ರಕಾಶ್‌ ರೈ

* ಕಾವೇರಿ ವಿಚಾರದಲ್ಲಿ ತಮಿಳು ನಟ ಸಿಂಬು ನೀಡಿರುವ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳಬಾರದು. ನಿಮ್ಮನ್ನು ದಾರಿ ತಪ್ಪಿಸಲು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇವಲ ಹೇಳಿಕೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅವರ ಹೇಳಿಕೆಗಳಿಗೆ ಮಹತ್ವ ಕೊಡಬೇಡಿ.

* ಕಾವೇರಿ ಮೇಲೆ ಭಾರಿ ಒತ್ತಡ ಇದೆ. ಕರ್ನಾಟಕದಲ್ಲಿ ಚುನಾವಣೆ ಇರುವುದರಿಂದಲೇ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ರಾಜ್ಯದ ಪರ ನಿಂತಿದೆ.

* ನನಗೆ ಬಾಡಿಗಾರ್ಡ್ ಇರುವುದು ಭಯದ ಕಾರಣಕ್ಕೆ ಅಲ್ಲ. ನಾನು ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದ್ದೇನೆ. ಮನುಷ್ಯ ಮೂರ್ಖನಾಗಬಾರದು. ನನ್ನ ಪ್ರಯಾಣ ತುಂಬಾ ದೂರ ಇದೆ. ನನ್ನ ಜೊತೆ ನನ್ನ ಕುಟುಂಬ ಇದೆ. ಹಾಗಾಗಿ ನಾನು ಎಚ್ಚರಿಕೆಯಲ್ಲಿ ಇರಬೇಕು.

English summary
Actor Prakash Rai said, no one need to follow the statements of Rajinikanth and Kamal Hassan just because they are great actors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X